ಕರ್ನಾಟಕ

karnataka

ETV Bharat / international

ಪ್ರತಿ 100 ಸೆಕೆಂಡ್​ಗೆ ಒಂದು ಮಗು ಅಥವಾ ಹದಿಹರೆಯರಿಗೆ ಹೆಚ್​​ಐವಿ: ಯುನಿಸೆಫ್​​​

ಕಳೆದ ವರ್ಷದಲ್ಲಿ ಒಟ್ಟಾರೆ 3,20,000 ಮಕ್ಕಳು ಅಥವಾ ಹದಿಹರೆಯರು ಹೆಚ್​ಐವಿಗೆ ಒಳಗಾಗಿದ್ದಾರೆ. ಇದರಲ್ಲಿ 1,10,000 ಮಕ್ಕಳು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಯುನಿಸೆಫ್​​​ ಮಾಹಿತಿ ನೀಡಿದೆ. ಅಲ್ಲದೆ ಸೋಂಕಿತರಿಗೆ ಸಿಗಬೇಕಾದ ಅಗತ್ಯ ಚಿಕಿತ್ಸೆಗಳು ದೊರೆಯದೆ ಅರ್ಧಷ್ಟು ಮಕ್ಕಳು ಬಲಿಯಾಗಿದ್ದಾರೆ ಅಂತಲೂ ತಿಳಿಸಿದೆ.

HIV
ಒಂದು ಮಗು ಅಥವಾ ಹದಿಹರೆಯರಿಗೆ ಹೆಚ್​​ಐವಿ

By

Published : Nov 26, 2020, 8:57 AM IST

ನ್ಯೂಯಾರ್ಕ್​: ಕಳೆದ ವರ್ಷ ಪ್ರತಿ 1 ನಿಮಿಷ 40 ಸೆಕೆಂಡ್​​​ಗಳಿಗೊಂದು ಒಂದು ಮಗು ಅಥವಾ 20 ವರ್ಷದೊಳಗಿನ ಒಬ್ಬರು ಹೆಚ್​ಐವಿ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನೈಟೆಡ್​​ ನೇಷನ್ಸ್ ಚಿಲ್ಡ್ರನ್ಸ್ ಫಂಡ್) ಆತಂಕ ವ್ಯಕ್ತಪಡಿಸಿದೆ.

ಕಳೆದ ವರ್ಷದಲ್ಲಿ ಒಟ್ಟರೆ 3,20,000 ಮಕ್ಕಳು ಮತ್ತು ಹದಿಹರೆಯದವರು ಹೆಚ್​ಐವಿಗೆ ಒಳಗಾಗಿದ್ದರೆ, 1,10,000 ಮಕ್ಕಳು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಮಾಹಿತಿ ನೀಡಿದೆ.

ಸೋಂಕು ಪೀಡಿತ ಜನಸಂಖ್ಯೆಯಲ್ಲಿ ರೋಗ ತಡೆಗಟ್ಟವ ಪ್ರಯತ್ನ ಮತ್ತು ಚಿಕಿತ್ಸೆಯು ಅತ್ಯಂತ ಕೆಳಮಟ್ಟದಲ್ಲಿದೆ. 2019ರಲ್ಲಿ ವಿಶ್ವದಾದ್ಯಂತ ಸೋಂಕಿಗೆ ಒಳಗಾಗಿದ್ದ ಅರ್ಧದಷ್ಟು ಮಕ್ಕಳಿಗೆ ಜೀವ ಉಳಿಸಲು ಚಿಕಿತ್ಸೆಯೇ ದೊರೆತಿಲ್ಲ ಎಂದು ಯುನಿಸೆಫ್​ನ​ ಹೊಸ ವರದಿ ತಿಳಿಸಿದೆ.

ಯುನಿಸೆಫ್​ನ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಟ್ಟಾ ಫೋರ್ ಈ ಕುರಿತು ಆತಂಕ ವ್ಯಕ್ತಪಡಿಸಿದ್ದು, ಮಕ್ಕಳು ಈಗಲೂ ಅಪಾಯಕಾರಿ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದಲ್ಲದೆ ಸೂಕ್ತ ಚಿಕಿತ್ಸೆ ಸಿಗದೆ ಮೃತಪಡುತ್ತಿದ್ದಾರೆ. ಇದು ಕೋವಿಡ್​ ದಾಳಿ ಇಡುವ ಮೊದಲೇ ಅಪಾಯಕಾರಿ ಮಟ್ಟ ತಲುಪಿದೆ ಎಂದಿದ್ದಾರೆ.

ಯುನಿಸೆಫ್ ಪ್ರಕಾರ, ಹೆಚ್​​ಐವಿ ಪೀಡಿತರ ಜೀವ ಉಳಿಸುವಲ್ಲಿ ಅಗತ್ಯವಾಗಿದ್ದ ಚಿಕಿತ್ಸಾ ಸ್ವರೂಪದ ಅಸಮಾನತೆಯನ್ನೇ ಕೋವಿಡ್-19 ರೋಗವು ಉಲ್ಬಣಗೊಳಿಸಿದೆ. ಹೆಚ್​​​​​ಐವಿ ಸೋಂಕಿತರಿರುವ ದೇಶಗಳಲ್ಲಿ ಮೂರನೇ ಒಂದು ಭಾಗದಷ್ಟು ಜನರು ಕೊರೊನಾ ವೈರಸ್ ಸಂಬಂಧಿತ ಅಡತಡೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕೆಲವು ದೇಶಗಳಲ್ಲಿನ ಮಕ್ಕಳ ಹೆಚ್‌ಐವಿ ಚಿಕಿತ್ಸೆ ಮತ್ತು ಸೋಂಕಿನ ಪರೀಕ್ಷೆಯು ಶೇ.50 ರಿಂದ 70 ರಷ್ಟು ಕುಸಿದಿದೆ. ಹೊಸ ಸೋಂಕಿತರಿಗೆ ಚಿಕಿತ್ಸೆಯ ಪ್ರಾರಂಭವು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ.25 ರಿಂದ 50ಕ್ಕೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.

ABOUT THE AUTHOR

...view details