ವಾಷಿಂಗ್ಟನ್: ಇಡೀ ಜಗತ್ತಿಗೆ ತಲ್ಲಣ ಸೃಷ್ಟಿಸುತ್ತಿರುವ ಕೋವಿಡ್‌ನ ಹೊಸ ತಳಿ ಒಮಿಕ್ರಾನ್ ಡೆಲ್ಟಾಗಿಂತ ಅತಿ ವೇಗವಾಗಿ ಹರಡಬಲ್ಲದು ಹಾಗೂ ಲಸಿಕೆಯ ಪರಿಣಾಕಾರಿಯನ್ನು ತಗ್ಗಿಸುತ್ತದೆ ಎಂದು ಲಭ್ಯವಿರುವ ವರದಿಗಳನ್ನು ಆಧರಿಸಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ರೂಪಾಂತರಿ ಡೆಲ್ಟಾ ಪ್ರಪಂಚದಲ್ಲೇ ಹೆಚ್ಚಿನ ಕೋವಿಡ್ ಪ್ರಕರಣಗಳಿಗೆ ಕಾರಣವಾಗಿದೆ. ಆದರೆ ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿರುವ ಒಮಿಕ್ರಾನ್ ವೇಗವಾಗಿದೆ. ಡಿಸೆಂಬರ್ 9ರವರೆಗೆ ಈ ವೈರಸ್ 63 ದೇಶಗಳಿಗೆ ಹರಡಿದೆ. ಡೆಲ್ಟಾ ಕಡಿಮೆ ಇದ್ದ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿ ಒಮಿಕ್ರಾನ್ ಹರಡುತ್ತಿದೆ.
ಒಮಿಕ್ರಾನ್‌ನ ಹರಡುವಿಕೆಯ ದರವು ಪ್ರತಿರಕ್ಷಣಾ ಪ್ರತಿಕ್ರಿಯೆಗಳಿಗೆ ಕಡಿಮೆ ಒಲವು, ಹೆಚ್ಚಿನ ಹರಡುವಿಕೆ ಅಥವಾ ಎರಡರ ಸಂಯೋಜನೆಯಾಗಿದೆಯೇ ಎಂದು ಹೇಳಲು ಸಾಧ್ಯವಿಲ್ಲ ಎಂದು ದಂತ್ತಾಂಶದ ಮಾಹಿತಿ ಆಧರಿಸಿ ಹೇಳಿದೆ. ಆರಂಭಿಕ ಪುರಾವೆಗಳ ಪ್ರಕಾರ, ಒಮಿಕ್ರಾನ್ ಸೋಂಕು ಲಸಿಕೆ ಪರಿಣಾಮಕಾರಿಯನ್ನು ಕಡಿಮೆ ಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ವಿಭಾಗ ಹೇಳಿದೆ.