ವಾಷಿಂಗ್ಟನ್ :ಕೋವಿಡ್ ರೂಪಾಂತರಿ ಒಮಿಕ್ರಾನ್ ಜಗತ್ತಿನಾದ್ಯಂತ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಈ ವೈರಸ್ ಅನ್ನು ತಡೆಯಲು ಅಲ್ಲಿನ ಸರ್ಕಾರಗಳನ್ನು ಹೊಸ ನಿಯಮಗಳ ಜಾರಿಗೆ ಮುಂದಾಗಿವೆ. ಡೆಲ್ಟಾ ರೂಪಾಂತರಿಗಿಂತ ಒಮಿಕ್ರಾನ್ ಅತಿ ವೇಗವಾಗಿ ಹರಡುತ್ತಿರುವುದರಿಂದ 2022 ಅನ್ನು ಸ್ವಾಗತಿಸುವುದಕ್ಕೂ ಕೆಲ ದೇಶಗಳನ್ನು ನಿರ್ಬಂಧಗಳನ್ನು ವಿಧಿಸಿಕೊಳ್ಳುತ್ತಿವೆ.
ಯುರೋಪ್‌ನಲ್ಲಿ ಒಂದೇ ದಿನ 1,79,807 ಹೊಸ ಪ್ರಕರಣ ದಾಖಲಾಗಿವೆ. ಇದರಲ್ಲಿ ಫ್ರಾನ್ಸ್‌ನದ್ದು ಸಿಂಹಪಾಲು ಇದೆ. ಜೊತೆಗೆ ಇಟಲಿ, ಗ್ರೀಸ್, ಪೋರ್ಚುಗಲ್ ಹಾಗೂ ಇಂಗ್ಲೆಂಡ್‌ನಲ್ಲೂ ದಿನ ನಿತ್ಯದ ಕೋವಿಡ್ ಪ್ರಕರಣಗಳು ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಿವೆ.
ಕ್ರಿಸ್ಮಸ್ ಹಬ್ಬ ಹಿನ್ನೆಲೆಯಲ್ಲಿ ಕೋವಿಡ್ ವರದಿಗಳು ವಿಳಂಬ ಆಗಿರುವ ಸಾಧ್ಯತೆ ಇದೆ. ಹೀಗಾಗಿ, ಒಮಿಕ್ರಾನ್ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿವೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಜನವರಿಯ ಆರಂಭದ ವೇಳೆಗೆ ಫ್ರಾನ್ಸ್‌ನಲ್ಲಿ ದಿನಕ್ಕೆ 2,50,000 ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಫ್ರಾನ್ಸ್ ಆರೋಗ್ಯ ಸಚಿವ ಒಲಿವಿಯರ್ ವೆರಾನ್ ಎಚ್ಚರಿಕೆ ನೀಡಿದ್ದಾರೆ. ಅತ್ಯಂತ ಕಷ್ಟಕರವಾದ ವಾರಗಳು ಇನ್ನೂ ಬರುತ್ತವೆ ಎಂದು ಫ್ರೆಂಚ್ ಆಸ್ಪತ್ರೆ ಫೆಡರೇಶನ್ ಕೂಡ ಆತಂಕ ವ್ಯಕ್ತಪಡಿಸಿದೆ.
ಬ್ರಿಟನ್‌ನಲ್ಲಿ ಒಮಿಕ್ರಾನ್ ಅಬ್ಬರ