ಕರ್ನಾಟಕ

karnataka

ETV Bharat / international

ರಾಹುಲ್​ ಬಗ್ಗೆ ಒಬಾಮಾ ಹೇಳಿರೋದೇನು ಗೊತ್ತಾ..? - ಅಮೆರಿಕ ಮಾಜಿ ಅಧ್ಯಕ್ಷ ಬರಾಕ್​ ಒಬಾಮ ರಚಿತ ಪುಸ್ತಕ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಗುಣ, ಶಿಕ್ಷಕನನ್ನು ಮೆಚ್ಚಿಸಲು ಉತ್ಸುಕನಾಗಿರುವ ವಿದ್ಯಾರ್ಥಿಯಂತೆ, ಆದರೆ ವಿಷಯವನ್ನು ಕರಗತ ಮಾಡಿಕೊಳ್ಳುವ ಮನೋಭಾವ, ಯೋಗ್ಯತೆ ಮತ್ತು ಉತ್ಸಾಹ ಇಲ್ಲದಿರುವುದು ಅವರ ಕೊರತೆ ಎಂದು ಅಮೆರಿಕದ ಮೊದಲ ಆಫ್ರಿಕನ್ ಅಮೆರಿಕನ್ ಅಧ್ಯಕ್ಷ ಬರಾಕ್​ ಒಬಾಮ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

memoir
ಬರಾಕ್​ ಒಬಾಮ

By

Published : Nov 13, 2020, 3:05 PM IST

ನ್ಯೂಯಾರ್ಕ್​​​: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು 'ಎ ಪ್ರಾಮಿಸ್ಡ್ ಲ್ಯಾಂಡ್' ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು, ರಾಹುಲ್​ರವರ ಗುಣ, ಶಿಕ್ಷಕನನ್ನು ಮೆಚ್ಚಿಸಲು ಉತ್ಸುಕನಾಗಿರುವ ವಿದ್ಯಾರ್ಥಿಯಂತೆ, ಆದರೆ ವಿಷಯವನ್ನು ಕರಗತ ಮಾಡಿಕೊಳ್ಳುವ ಮನೋಭಾವ, ಯೋಗ್ಯತೆ ಮತ್ತು ಉತ್ಸಾಹ ಇಲ್ಲದಿರುವುದು ಅವರ ಕೊರತೆ ಎಂದು ಬರೆದಿದ್ದಾರೆ. ಶಿಕ್ಷಕರು ಕೊಟ್ಟ ಕೆಲಸವನ್ನು ಮಾಡಿ ಮುಗಿಸಿ ಅವರನ್ನು ಮೆಚ್ಚಿಸಲು ನೋಡುವ ವಿದ್ಯಾರ್ಥಿಯಂತಹ ಗುಣ ರಾಹುಲ್​ ಗಾಂಧಿಯದು. ಆದರೆ, ವಿಷಯದಲ್ಲಿ ಪರಿಣತಿ ಹೊಂದುವ ಮನೋಭಾವ, ಉತ್ಸಾಹ ಮತ್ತು ಆಸಕ್ತಿಯ ಕೊರತೆಯಿದೆ ಎಂದು ಒಬಾಮ ಬರೆದಿದ್ದಾರೆ ಎಂದು ಅಮೆರಿಕದ ಪ್ರಸಿದ್ಧ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ತಮ್ಮ ಪುಸ್ತಕದಲ್ಲಿ ಒಬಾಮ ರಾಹುಲ್ ಗಾಂಧಿಯವರ ತಾಯಿ ಸೋನಿಯಾ ಗಾಂಧಿ ಬಗ್ಗೆ ಕೂಡ ಉಲ್ಲೇಖಿಸಿದ್ದಾರೆ. ಚಾರ್ಲಿ ಕ್ರಿಸ್ಟ್ ಮತ್ತು ಇಮ್ಯಾನ್ಯುಯೆಲ್ ಅವರಂತಹ ಪುರುಷರ ಸುಂದರತೆಯ ಬಗ್ಗೆ ಬರೆದಿದ್ದಾರೆ. ಆದರೆ ಸೋನಿಯಾ ಗಾಂಧಿ ಅವರಂತ ಒಂದು ಅಥವಾ ಎರಡು ನಿದರ್ಶನಗಳನ್ನು ಹೊರತುಪಡಿಸಿ ಮಹಿಳೆಯರ ಸೌಂದರ್ಯದ ಬಗ್ಗೆ ಉಲ್ಲೇಖವಿಲ್ಲ ಎಂದು ನ್ಯೂಯಾರ್ಕ್​ ಟೈಮ್ಸ್​ ಹೇಳಿದೆ.

ಇನ್ನು ನಿರ್ಭಯ ಸಮಗ್ರತೆಗೆ ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಬಾಬ್ ಗೇಟ್ಸ್ ನಂತಹ ಒಂದಿಬ್ಬರು ನಾಯಕರಷ್ಟೆ ಶ್ರಮಿಸಿದ್ದರು. ಈ ಇಬ್ಬರೂ ನಾಯಕರು ಸತ್ಯ ಹಾಗೂ ಪ್ರಾಮಾಣಿಕತೆಯನ್ನು ಹೊಂದಿದ್ದಾರೆ ಎಂದು ಒಬಾಮಾ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕುರಿತು "ದೈಹಿಕವಾಗಿ ಅವನು ಸಾಮಾನ್ಯ" ಆದರೆ ಚಿಕಾಗೊ ಯಂತ್ರವನ್ನು ನಡೆಸುವ ಪ್ರಬಲ, ಬುದ್ಧಿವಂತ ಮುಖ್ಯಸ್ಥ ಎಂದು ಪುಟಿನ್ ಬಗ್ಗೆ ಒಬಾಮಾ ಬರೆದಿದ್ದಾರೆ.

ಮನ್​ಮೋಹನ್​ ಸಿಂಗ್​ ಮತ್ತು ಬರಾಕ್​ ಒಬಾಮ

ಸುಮಾರು 768 ಪುಟಗಳ ಒಬಾಮ ಅವರ 'ಎ ಪ್ರಾಮಿಸ್ಡ್ ಲ್ಯಾಂಡ್' ಆತ್ಮಚರಿತ್ರೆ ನವೆಂಬರ್ 17ರಂದು ಮಾರುಕಟ್ಟೆಗೆ ಬರಲಿದೆ.

ABOUT THE AUTHOR

...view details