ನ್ಯೂಯಾರ್ಕ್,(ಅಮೆರಿಕ) :ಅಮೆರಿಕದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಗೌರವ ಸೂಚಿಸಲಾಗಿದೆ. ದೇಶಾದ್ಯಂತ ಸುಮಾರು 400ಕ್ಕೂ ಹೆಚ್ಚು ಕಟ್ಟಡಗಳಲ್ಲಿ ನ್ಯೂಯಾರ್ಕ್ನ ನೂರಕ್ಕೂ ಹೆಚ್ಚು ಕಟ್ಟಡಗಳಲ್ಲಿ ಬಿಳಿ, ಕೆಂಪು ಹಾಗೂ ನೀಲಿ ದೀಪಗಳನ್ನು ಬೆಳಗಿಸುವ ಮೂಲಕ ಗೌರವ ಸಲ್ಲಿಸಲಾಗಿದೆ.
ಕೊರೊನಾ ವಿರುದ್ಧದ ಸೇನಾನಿಗಳಿಗೆ ಗೌರವ ಸೂಚಿಸಿದ ಅಮೆರಿಕದ ಕಟ್ಟಡಗಳು..
ನ್ಯೂಯಾರ್ಕ್ನ ಗವರ್ನರ್ ಈ ಮೂಲಕ ವೈದ್ಯಕೀಯ ಸಿಬ್ಬಂದಿಗೆ ಗೌರವ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಪ್ರತಿಮೆ ಸೇರಿ ಇನ್ನೂ ಹಲವು ಪ್ರಸಿದ್ಧ ಕಟ್ಟಡಗಳು ನೀಲಿ, ಬಿಳಿ ಹಾಗೂ ಕೆಂಪು ವಿದ್ಯುದ್ದೀಪಗಳನ್ನು ಬೆಳಗಿಸಿ ಗಮನ ಸೆಳೆದಿವೆ.
newyork
ಇದರಲ್ಲಿ ಅತಿ ಮುಖ್ಯವಾಗಿ ನ್ಯೂಯಾರ್ಕ್ನ ವಿಶ್ವ ವ್ಯಾಪಾರ ಕೇಂದ್ರ ನೀಲಿ ವಿದ್ಯುದ್ದೀಪಗಳನ್ನು ಬೆಳಗಿಸಿ ಗಮನ ಸೆಳೆಯಿತು. ನ್ಯೂಯಾರ್ಕ್ನ ಗವರ್ನರ್ ಈ ಮೂಲಕ ವೈದ್ಯಕೀಯ ಸಿಬ್ಬಂದಿಗೆ ಗೌರವ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಪ್ರತಿಮೆ ಸೇರಿ ಇನ್ನೂ ಹಲವು ಪ್ರಸಿದ್ಧ ಕಟ್ಟಡಗಳು ನೀಲಿ, ಬಿಳಿ ಹಾಗೂ ಕೆಂಪು ವಿದ್ಯುದ್ದೀಪಗಳನ್ನು ಬೆಳಗಿಸಿ ಗಮನ ಸೆಳೆದಿವೆ.
ಈವರೆಗೂ ನ್ಯೂಯಾರ್ಕ್ ನಗರದಲ್ಲಿ 7ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್ನಿಂದ ಮೃತಪಟ್ಟಿದ್ದಾರೆ. ಸೋಂಕು ಹರಡುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.