ವಾಷಿಂಗ್ಟನ್: ಸಿರಿಯಾದಲ್ಲಿ ಅಮೆರಿಕದ ಸೇನೆ ನಡೆಸಿದ ದಾಳಿಯಲ್ಲಿ ಕೊಲ್ಲಲ್ಪಟ್ಟ ಐಸಿಸ್ ನಾಯಕ ಮತ್ತು ಭಯೋತ್ಪಾದಕ ಅಬೂಬಕರ್ ಅಲ್-ಬಾಗ್ದಾದಿಯ ಹತ್ಯೆಯ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ವಿಚಾರ ತೆರೆದಿಟ್ಟಿದ್ದಾರೆ.
ಮತ್ತೊಬ್ಬ ಉಗ್ರನನ್ನು ಹತ್ಯೆಗೈದ ಅಮೆರಿಕಾ: ಈತ ಬಗ್ದಾದಿಯ "ನಂಬರ್ ಒನ್ ಬದಲಿ" ಎಂದ ಟ್ರಂಪ್! - Donald trump latest news
ವಿಶ್ವ ಶಾಂತಿ ಕದಡಿದ್ದ ಕುಖ್ಯಾತ ಭಯೋತ್ಪಾದಕ, ಐಸಿಸ್ ನಾಯಕ ಅಬುಬಕರ್ ಅಲ್ ಬಗ್ದಾದಿಯನ್ನು ಅಮೆರಿಕದ ಸೇನೆ ಹತ್ಯೆ ಮಾಡಿತ್ತು. ಇಂದು ಮತ್ತೊಂದು ವಿಚಾರ ತಿಳಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ದಾದಿಯ "ನಂಬರ್ ಒನ್ ಬದಲಿ"ಯಂತಿದ್ದ ಮತ್ತೋರ್ವ ಉಗ್ರನ ಕತೆಯನ್ನೂ ಅಮೆರಿಕಾ ಸೇನೆ ಮುಗಿಸಿದೆ ಎಂದು ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಿಶ್ವ ಶಾಂತಿಗೆ ಕಂಟಕಪ್ರಾಯನಾಗಿದ್ದ ಕುಖ್ಯಾತ ಭಯೋತ್ಪಾದಕ ಸಂಘಟನೆಯಾದ ಐಸಿಸ್ ನಾಯಕ ಅಬುಬಕರ್ ಅಲ್ ಬಗ್ದಾದಿಯನ್ನು ಅಮೆರಿಕದ ಸೇನೆ ಹತ್ಯೆ ಮಾಡಿತ್ತು. ಇಂದು ಮತ್ತೊಂದು ವಿಚಾರ ತಿಳಿಸಿರುವ ಟ್ರಂಪ್ ಬಗ್ದಾದಿಯ "ನಂಬರ್ ಒನ್ ಬದಲಿ"ಯಂತಿದ್ದ ಮತ್ತೋರ್ವ ಉಗ್ರನ ಕತೆಯನ್ನೂ ಅಮೆರಿಕಾ ಸೇನೆ ಮುಗಿಸಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್, ಈತ ಬಗ್ದಾದಿಯ ಮತ್ತೊಂದು ರೂಪದಂತಿದ್ದ. ಆತನಿಗೆ ಸರಿಯಾದ ಬದಲಿ ವ್ಯಕ್ತಿ ಈತನೇ. ಈಗ ಈತನೂ ಸತ್ತಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ.