ಸ್ಟಾಕ್ಹೋಮ್: 2021ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಪ್ರಕಟಗೊಂಡಿದ್ದು, ಕಾದಂಬರಿಗಾರ ಅಬ್ದುಲ್ರಜಾಕ್ ಗುರ್ನಾಹ್ ಅವರು ಗೌರವಕ್ಕೆ ಭಾಜನರಾಗಿದ್ದಾರೆ. ತಾಂಜೇನಿಯಾದ ಕಾದಂಬರಿಕಾರರಾಗಿರುವ ಇವರು, ವಸಾಹತುಶಾಹಿಯ ಪರಿಣಾಮಗಳು, ಸಂಸ್ಕೃತಿಗಳು ಮತ್ತು ನಿರಾಶ್ರಿತರ ಭವಿಷ್ಯದ ವಿಚಾರವಾಗಿ ಬರೆದಿರುವ ಕೃತಿಗೆ ಪ್ರಶಸ್ತಿ ಲಭ್ಯವಾಗಿದೆ.
ಅಬ್ದುಲ್ ರಜಾಕ್ ಹಿಂದೂ ಮಹಾಸಾಗರದ ಜಂಜಿಬಾರ್ ದ್ವೀಪದಲ್ಲಿ 1948ರಲ್ಲಿ ಜನಸಿದ್ದು, 1960ರ ದಶಕದ ಕೊನೆಯಲ್ಲಿ ಇಂಗ್ಲೆಂಡ್ಗೆ ನಿರಾಶ್ರಿತರಾಗಿ ಬಂದಿದ್ದರು. ಕ್ಯಾಂಟರ್ಬರಿಯ ಕೆಂಟ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಮತ್ತು ವಸಾಹತುಶಾಹಿ ಸಾಹಿತ್ಯದ ಪ್ರಾಧ್ಯಾಪಕರಾಗಿದ್ದ ಅವರು ಹತ್ತು ಕಾದಂಬರಿ ಹಾಗೂ ಅನೇಕ ಸಣ್ಣ ಕಥೆಗಳನ್ನು ಪ್ರಕಟಿಸಿದ್ದಾರೆ.ಈಗಾಗಲೇ ಈಗಾಗಲೇ ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಮೆಡಿಸಿನ್ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಗಳು ಪ್ರಕಟಗೊಂಡಿವೆ. ವಸಾಹತುಶಾಹಿಯ ಪರಿಣಾಮಗಳು, ಅಲ್ಲಿನ ಸಂಸ್ಕೃತಿ ಹಾಗೂ ವಲಸಿಗರ ಭವಿಷ್ಯದ ಕುರಿತಾದ ಸಹಾನುಭೂತಿ ನಿಲುವುಗಳ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. 1994ರಲ್ಲಿ ಇವರ ಮೊದಲ ಕಾದಂಬರಿ ಪ್ಯಾರಡೈಸ್ ಪ್ರಕಟಗೊಂಡಿದ್ದು,2005ರಲ್ಲಿ ಡೆಜರ್ಸನ್ ಎಂಬ ಕಾಂದಬರಿ ಸಹ ಪ್ರಕಟವಾಗಿದೆ.