ಲಾಸ್ ಎಂಜಲೀಸ್ (ಅಮೆರಿಕ): 'ನಮ್ಮನ್ನು ತಡೆಯುವವರು ಯಾರೂ ಇಲ್ಲ' (ನಥಿಂಗ್ ವಿಲ್ ಸ್ಟಾಪ್ ಅಸ್) ಎಂದು ಕೆಲವು ಗಂಟೆಗಳ ಹಿಂದೆ ಟ್ವೀಟ್ ಮಾಡಿದ್ದ ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಬೆಂಬಲಿಗರಾಗಿದ್ದ ಮಹಿಳೆ ಯುಎಸ್ ಕ್ಯಾಪಿಟಲ್ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದಾರೆ.
ಆ್ಯಶ್ಲಿ ಬಬ್ಬಿತ್ ಮೃತಪಟ್ಟ ಮಹಿಳೆ. ಅಮೆರಿಕ ಸಂಸತ್ ಭವನವಾದ ಕ್ಯಾಪಿಟಲ್ ಮೇಲೆ ಮುತ್ತಿಗೆ ಹಾಕಿದ ಟ್ರಂಪ್ ಬೆಂಬಲಿಗರೊಂದಿಗೆ ಈ ಮಹಿಳೆಯೂ ಇದ್ದು, ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಸಮೀಪದ ಆಸ್ಪತ್ರೆಗೆ ಆ್ಯಶ್ಲಿ ಬಬ್ಬಿತ್ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.