ಕರ್ನಾಟಕ

karnataka

ETV Bharat / international

6 ತಿಂಗಳ ಅವಳಿ ಮಕ್ಕಳು ಸೇರಿ ಒಂದೇ ಕುಟುಂಬದ 9 ಜನ ಸಜೀವ ದಹನ!

ಮಾದಕದ್ರವ್ಯ ಗುಂಪಿನ ಮೇಲೆ ದರೋಡೆಕೋರರು ನಡೆಸಿದ ದಾಳಿಯಲ್ಲಿ 6 ತಿಂಗಳ ಅವಳಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಜನರು ಸಾವನ್ನಪ್ಪಿರುವ ಘಟನೆ ಉತ್ತರ ಅಮೆರಿಕದ ಮೆಕ್ಸಿಕೋದಲ್ಲಿ ನಡೆದಿದೆ.

ಮಾದಕದ್ರವ್ಯ ಗುಂಪಿನ​ ಮೇಲೆ ದಾಳಿ

By

Published : Nov 6, 2019, 10:51 AM IST

ಮೆಕ್ಸಿಕೋ: ಮಾದಕದ್ರವ್ಯ ಗುಂಪಿನ ಮೇಲೆ ಆಕಸ್ಮಿಕವಾಗಿ ದರೋಡೆಕೋರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಆರು ತಿಂಗಳ ಅವಳಿ ಹಸುಳೆಗಳು ಸೇರಿದಂತೆ 9 ಜನರನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಮೆಕ್ಸಿಕೋದ ಗಡಿಯಲ್ಲಿ ನಡೆದಿದೆ.

ಮೆಕ್ಸಿಕೋದ ಗಡಿಭಾಗದ ಸೊನೊರಾ ಪ್ರದೇಶದ ರಹದಾರಿಯಲ್ಲಿ ಮೂರು ಎಸ್​ಯುವಿ ಕಾರ್​ಗಳು ಸಾಗುತ್ತಿದ್ದವು. ಈ ವೇಳೆ, ದರೋಡೆಕೋರರು ಕಾರ್​ವೊಂದರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆ ಕಾರಿನಲ್ಲಿ ಸ್ಫೋಟಕ ವಸ್ತುಗಳು ಇರುವುದರಿಂದ ಕಾರು ಬ್ಲಾಸ್ಟ್​ ಆಗಿದೆ.

ಮಾದಕದ್ರವ್ಯ ಗುಂಪಿನ​ ಮೇಲೆ ದಾಳಿ

ಇನ್ನು ದರೋಡೆಕೋರರು ನಡೆಸಿದ ಕಾರಿನಲ್ಲಿ ಆರು ತಿಂಗಳ ಅವಳಿ ಮಕ್ಕಳು ಸೇರಿದಂತೆ ಆರು ಮಕ್ಕಳು ಮತ್ತು ಮೂವರು ಮಹಿಳೆಯರಿದ್ದರು. ಕಾರ್​ ಸ್ಫೋಟಗೊಂಡ ಪರಿಣಾಮ ಕಾರಿನಲ್ಲಿದ್ದವರೆಲ್ಲ ಸಜೀವ ದಹನಗೊಂಡರು. ಮೃತರೆಲ್ಲರೂ ಒಂದೇ ಕಟುಂಬದವರಾಗಿದ್ದು, ಅಮೆರಿಕದ ನಿವಾಸಿಗಳೆಂದು ಪೊಲೀಸರು ಗುರುತಿಸಿದ್ದಾರೆ.

ಟ್ರಂಪ್​ ಟ್ವೀಟ್​...
ಈ ಘಟನೆ ಬಗ್ಗೆ ಟ್ವೀಟ್​ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​.. ಮಾದಕದ್ರವ್ಯ ಗುಂಪಿನ ಮೇಲೆ ಪ್ರತಿಕಾರ ತಿರಿಸಿಕೊಳ್ಳವುದಕ್ಕೆ ಮೆಕ್ಸಿಕೋಗೆ ಸಹಕರಿಸುತ್ತೇವೆ ಎಂದು ಪ್ರಕಟಿಸಿದ್ದಾರೆ. ಈ ಗುಂಪನ್ನು ಶಮನ ಮಾಡುವುದಕ್ಕೆ ಮೆಕ್ಸಿಕೋ ತಮ್ಮ ಸಹಕಾರ ಕೋರಿದ್ರೆ ಅಮೆರಿಕ ಖಂಡಿತವಾಗಿಯೂ ಮುಂದಿರುತ್ತೆ. ಇವರನ್ನು ಕೊನೆಗಳಿಸಬೇಕಂದ್ರೆ ಯುದ್ಧವೇ ನಡೆಯುವ ಪರಿಸ್ಥಿತಿ ಬರುತ್ತೆ ಎಂದು ಟ್ರಂಪ್​ ಟ್ವೀಟ್​ ಮಾಡಿದ್ದಾರೆ.

ಮೆಕ್ಸಿಕೋ ತಿರಸ್ಕಾರ!
ಅಮೆರಿಕಾ ಅಧ್ಯಕ್ಷರ ಟ್ವೀಟ್​ಗೆ ಮೆಕ್ಸಿಕೋ ಅಧ್ಯಕ್ಷ ಪ್ರತಿಕ್ರಿಯಿಸಿದ್ದಾರೆ. ಮೆಕ್ಸಿಕೋ ಅಧ್ಯಕ್ಷರಾದ ಆಂಡ್ರೆಸ್​ ಮಾನ್ಯುಯಲ್​ ಲೋಪೆಜ್​ ಟ್ವೀಟ್​ ಮಾಡಿ, ಟ್ರಂಪ್​ ಆಲೋಚನೆಯನ್ನು ನಾವು ಗೌರವಿಸುತ್ತೇವೆ. ಆದ್ರೆ ನಮಗೆ ಯುದ್ಧ ಮಾಡುವ ಇಷ್ಟವಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ.

ABOUT THE AUTHOR

...view details