ಕರ್ನಾಟಕ

karnataka

ETV Bharat / international

ಕೋವಿಡ್​​-19ರ ವಿರುದ್ಧದ ಹೋರಾಟಕ್ಕೆ 7.5 ಕೋಟಿ ದೇಣಿಗೆ ನೀಡಿದ ಪುಟ್ಬಾಲ್​ ಆಟಗಾರ ನೇಮರ್​! - ಕೊರೊನಾ ವೈರಸ್​

ರಕ್ಕಸ ಕೊರೊನಾ ವಿರುದ್ಧ ದೊಡ್ಡ ಮಟ್ಟದ ಸಮರವೇ ನಡೆದಿದ್ದು, ಅದರ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಭಾಗಿಯಾಗುತ್ತಿದ್ದಾರೆ. ಇದೀಗ ಫುಟ್ಬಾಲ್​ ಸ್ಟಾರ್ ಆಟಗಾರ ಕೈಜೋಡಿಸಿದ್ದಾರೆ.

Football star Neymar
Football star Neymar

By

Published : Apr 4, 2020, 11:40 AM IST

ರಿಯೋ ಡಿ ಜನೈರೋ:ಮಹಾಮಾರಿ ಕೊರೊನಾ ವಿರುದ್ಧ ಇಡೀ ವಿಶ್ವವೇ ಹೋರಾಟ ನಡೆಸಿದ್ದು, ಡೆಡ್ಲಿ ವೈರಸ್​​ ಹೊಡೆದೊಡಿಸಲು ಎಲ್ಲೆಡೆಯಿಂದ ಸಹಾಯ ಹರಿದು ಬರುತ್ತಿದೆ. ಇದೀಗ ಬ್ರೆಜಿಲ್​ ಸ್ಟಾರ್​ ಪುಟ್ಬಾಲ್​​ ಆಟಗಾರ ತಮ್ಮ ಕೈಯಿಂದ ಆದ ಸಹಾಯ ಮಾಡಿದ್ದಾರೆ.

ರಕ್ಕಸ ಕೊರೊನಾ ವೈರಸ್​ ವಿರುದ್ಧದ ಹೋರಾಟಕ್ಕಾಗಿ ಕೈ ಜೋಡಿಸಿರುವ ಈ ಫುಟ್ಬಾಲ್​ ಆಟಗಾರ ನೇಮರ್ 1 ಮಿಲಿಯನ್ ಡಾಲರ್ (7,64,19,000 ರೂ.) ದೇಣಿಗೆ ನೀಡಿದ್ದಾರೆ. ವಿಶ್ವದಲ್ಲೇ ಮೂರನೇ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ಈ ಫುಟ್ಬಾಲ್​ ಆಟಗಾರ ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್​) ಹಾಗೂ ಸ್ವಲ್ಪ ಹಣ ತಮ್ಮ ಗೆಳೆಯನ ದತ್ತಿ ನಿಧಿಗೆ ನೀಡಿದ್ದಾರೆ.

28 ವರ್ಷದ ನೇಮರ್​​ ದೇಣಿಗೆ ನೀಡಿದರ ಬಗ್ಗೆ ಪತ್ರಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ತಮ್ಮ ತಂಡದ ಸಹ ಆಟಗಾರ ಕೈಲಿಯನ್​ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದರು. ಇದೀಗ ನೇಮರ್​ ಕೂಡ ತಮ್ಮ ಕೈಯಿಂದ ಆದ ಸಹಾಯ ಮಾಡಿದ್ದಾರೆ.

ದಕ್ಷಿಣ ಅಮೆರಿಕದಲ್ಲಿ ದೊಡ್ಡ ದೇಶವಾಗಿರುವ ಬ್ರೆಜಿಲ್​​ನಲ್ಲಿ ಕೋವಿಡ್​-19 ಅಬ್ಬರ ಜೋರಾಗಿದ್ದು, ಈಗಾಗಲೇ 9 ಸಾವಿರಕ್ಕೂ ಹೆಚ್ಚು ಜನರು ಈ ಸೋಂಕಿನಿಂದ ಬಳಲುತ್ತಿದ್ದು, 359 ಜನರು ಸಾವನ್ನಪ್ಪಿದ್ದಾರೆ.

ABOUT THE AUTHOR

...view details