ನ್ಯೂಯಾರ್ಕ್(ಅಮೆರಿಕ):ಮಧ್ಯಯುಗೀನ ಕಾಲದ ಸೈನಿಕರ ವೇಷ ಧರಿಸಿ, ಸ್ಪರ್ಧಿಗಳು ಅಲ್ಲಿ ಜಮಾಯಿಸುತ್ತಾರೆ. ಎಲ್ಲರ ನಡುವೆ ಅಲ್ಲಿ ಮಾರಾಮಾರಿ ನಡೆಯುತ್ತದೆ. ಖಡ್ಗ, ಕೊಡಲಿಗಳ ಮೂಲಕ ಅವರೆಲ್ಲಾ ಪರಸ್ಪರ ಬಡಿದಾಡುತ್ತಾರೆ.
ಈ ರೀತಿಯ ಸ್ಪರ್ಧೆತಿಂಗಳಿಗೆ ಒಂದು ಬಾರಿ ಅಮೆರಿಕದ ನ್ಯೂಯಾರ್ಕ್ ಬಳಿಯಿರುವ ಸೆಂಟ್ರಲ್ ಪಾರ್ಕ್ನಲ್ಲಿ ನಡೆಯುತ್ತದೆ. ಮೈದಾನದಿಂದ ಹೊರಗೆ ಬಂದ ತಂಡ ಸೋತ ಹಾಗೆ ಮತ್ತು ಮೈದಾನದಲ್ಲೇ ಉಳಿದ ತಂಡ ಗೆದ್ದ ಹಾಗೆ ಇಲ್ಲಿ ತೀರ್ಪು ನೀಡಲಾಗುತ್ತದೆ.
ನೈಜ ಶಸ್ತ್ರಗಳನ್ನು ಬಳಸಿದರೂ ಕೂಡಾ, ಯಾವುದೇ ಹಾನಿಯಾಗದಂತೆ ಇಲ್ಲಿ ತೀವ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಎರಡು ತಂಡಗಳ ನಡುವೆ ನಡೆಯುವ ಈ ಸ್ಪರ್ಧೆಯಲ್ಲಿ ಮೈದಾನದಲ್ಲಿ ಉಳಿದುಕೊಳ್ಳುವ ತಂಡ ಗೆಲುವು ಸಾಧಿಸುತ್ತದೆ.
ಇದನ್ನೂ ಓದಿ:ಫ್ರಾನ್ಸ್ ಅಧ್ಯಕ್ಷರ ಎಚ್ಚರಿಕೆಯ ಪರಿಣಾಮ: ಕೋವಿಡ್ ವ್ಯಾಕ್ಸಿನ್ಗೆ ಮುಗಿಬಿದ್ದ ಜನ
ಈಗ ಅಮೆರಿಕದಲ್ಲಿ ಮಧ್ಯಯುಗದಲ್ಲಿ ನಡೆಯುತ್ತಿದ್ದ ಯುದ್ಧಗಳನ್ನು ನೆನಪು ಮಾಡುವ ಯುದ್ಧ ಮಾದರಿಯಲ್ಲಿ ಸ್ಪರ್ಧೆ ನಡೆದಿದ್ದು, ನೋಡುಗರನ್ನು ರೋಮಾಂಚನಗೊಳಿಸಿದೆ.