ನ್ಯೂಯಾರ್ಕ್:ಚೀನಾದಲ್ಲಿ ಹುಟ್ಟಿಕೊಂಡು ವಿಶ್ವದೆಲ್ಲೆಡೆ ಹಬ್ಬಿರುವ ಹೆಮ್ಮಾರಿ ಕೊರೊನಾ ಅನೇಕ ದೇಶಗಳಲ್ಲಿ ಮಾರಣಹೋಮವನ್ನೇ ನಡೆಸಿದೆ. ಅದ್ರಲ್ಲೂ ಪ್ರಮುಖವಾಗಿ ವೈರಾಣು ತಂದಿಟ್ಟ ಅವಾಂತರಕ್ಕೆ ದೊಡ್ಡಣ್ಣನ ಜಂಘಾಬಲವೇ ಉಡುಗಿದೆ.
ಇಲ್ಲಿಯವರೆಗೆ ಇಂಗ್ಲೆಂಡ್ನಲ್ಲಿ 83,135, ಚೀನಾದಲ್ಲಿ 71,185, ಹಾಗೂ ಇರಾನ್ನಲ್ಲಿ 71,686 ಸೋಂಕಿತ ಪ್ರಕರಣಗಳು ಕಂಡು ಬಂದಿವೆ. ಅಮೆರಿಕದಲ್ಲಿ 5,57,300 ಪ್ರಕರಣ ಕಾಣಿಸಿಕೊಂಡಿವೆ.
ಪ್ರಪಂಚದಾದ್ಯಂತ 1.8 ಮಿಲಿಯನ್ ಜನರಲ್ಲಿ ಅಂದ್ರೆ 18 ಲಕ್ಷ ಜನರಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ಇಲ್ಲಿಯವರೆಗೆ 1,14,185 ಜನರು ಸೋಂಕಿನಿಂದ ಹೋರಾಡಿ ಉಸಿರು ನಿಲ್ಲಿಸಿದ್ದಾರೆ. ಆಘಾತಕಾರಿ ವಿಚಾರ ಏನಪ್ಪಾ ಅಂದ್ರೆ, ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ 1,89,000 ಪ್ರಕರಣಗಳು ಪತ್ತೆಯಾಗಿದ್ದು 9,385 ಜನರು ಸಾವನ್ನಪ್ಪಿದ್ದಾರೆ.