ಕರ್ನಾಟಕ

karnataka

ETV Bharat / international

ವರ್ಷದ ಮೊದಲ ದಿನವೇ ವಿಶ್ವದಾದ್ಯಂತ 3,70,000ಕ್ಕೂ ಹೆಚ್ಚು ಮಕ್ಕಳ ಜನನ: ಯುನಿಸೆಫ್​ - UNICEF

ಯುನಿಸೆಫ್ ಮತ್ತು ಅದರ ಪಾಲುದಾರ ಸಂಸ್ಥೆಗಳು ತಮ್ಮ 75ನೇ ವಾರ್ಷಿಕೋತ್ಸವದ ಅವಧಿಯಲ್ಲಿ, ಮಕ್ಕಳ ಸಂಘರ್ಷನಿವಾರಣೆ , ಕಾಯಿಲೆ ನಿರ್ಮೂಲನೆ, ಆರೋಗ್ಯ ಮತ್ತು ಶಿಕ್ಷಣ ಮೊದಲಾದ ಗುರಿಯನ್ನು ಪೂರೈಸುವ ಗುರಿಯನ್ನು ಹೊಂದಿವೆ.

UNICEF
ಯುನಿಸೆಫ್​

By

Published : Jan 1, 2021, 11:28 PM IST

ನ್ಯೂಯಾರ್ಕ್: ಹೊಸ ವರ್ಷದ ದಿನದಂದು ವಿಶ್ವದಾದ್ಯಂತ 3,71,504 ಶಿಶುಗಳು ಜನಿಸಲಿವೆ ಯುನಿಸೆಫ್​ ಅಂದಾಜಿಸಿದೆ. 2021ರ ಪೂರ್ಣ ಅವಧಿಯಲ್ಲಿ ಯುನಿಸೆಫ್ ತನ್ನ 75ನೇ ವರ್ಷದ ಸಂಭ್ರಮಾಚರಣೆಯನ್ನು ಮಕ್ಕಳಿಗಾಗಿ ಉತ್ತಮ ಪ್ರಪಂಚವನ್ನು ರೂಪಿಸಲು ಮೀಸಲಿಟ್ಟಿದೆ.

ಯುನಿಸೆಫ್​ ಪ್ರಕಾರ, 2021ರ ದಿನಾಂಕ 1ರಂದು ಪೆಸಿಫಿಕ್​ನ ಫಿಜಿ ದೇಶದಲ್ಲಿ ಮೊದಲ ಮಗು ಜನಿಸಿದರೆ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೊನೆಯ ಮಗು ಜನಿಸಲಿದೆ. ಜಾಗತಿಕವಾಗಿ ಈ ಅರ್ಧದಷ್ಟು ಜನನಗಳು ಸುಮಾರು 10 ದೇಶಗಳಲ್ಲಿ ಸಂಭವಿಸುತ್ತವೆ ಎಂದು ಸಂಸ್ಥೆ ಅಂದಾಜಿಸಿದೆ. ಅದರಲ್ಲಿ ಪ್ರಮುಖವಾಗಿ ಭಾರತ (59,995), ಚೀನಾ (35,615), ನೈಜೀರಿಯಾ (21,439), ಪಾಕಿಸ್ತಾನ (14,161), ಇಂಡೋನೇಷ್ಯಾ (12,336), ಇಥಿಯೋಪಿಯಾ (12,006), ಯುನೈಟೆಡ್ ಸ್ಟೇಟ್ಸ್ ( 10,312), ಈಜಿಪ್ಟ್ (9,455), ಬಾಂಗ್ಲಾದೇಶ (9,236) ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (8,640) ಎಂಬುದನ್ನು ಉಲ್ಲೇಖಿಸಿದೆ.

ಓದಿ:ವೈಮಾನಿಕ ದಾಳಿ: 18 ತಾಲಿಬಾನ್​ ಭಯೋತ್ಪಾದಕರು ಹತ

ಅಂದಾಜು 20 ಮಿಲಿಯನ್ ಮಕ್ಕಳು 2021ರಲ್ಲಿ ಜನಿಸಲಿದ್ದಾರೆ. ಅವರ ಸರಾಸರಿ ಜೀವಿತಾವಧಿ 84 ವರ್ಷಗಳು ಎಂದು ನಿರೀಕ್ಷಿಸಲಾಗಿದೆ. "ಇಂದು ಜನಿಸಿದ ಮಕ್ಕಳು ಒಂದು ವರ್ಷದ ಹಿಂದಿನ ಪ್ರಪಂಚಕ್ಕಿಂತಲೂ ವಿಭಿನ್ನವಾದ ಜಗತ್ತನ್ನು ಪ್ರವೇಶಿಸುತ್ತಾರೆ. ಮತ್ತು ಈ ಹೊಸ ವರ್ಷವು ಅದನ್ನು ಮರುರೂಪಿಸಲು ಹೊಸ ಅವಕಾಶವನ್ನು ತರುತ್ತದೆ ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ತಿಳಿಸಿದ್ದಾರೆ.

ಯುನಿಸೆಫ್ ಮತ್ತು ಅದರ ಪಾಲುದಾರ ಸಂಸ್ಥೆಗಳು ತಮ್ಮ 75ನೇ ವಾರ್ಷಿಕೋತ್ಸವದ ಅವಧಿಯಲ್ಲಿ, ಮಕ್ಕಳ ಸಂಘರ್ಷ ನಿವಾರಣೆ , ಕಾಯಿಲೆ ನಿರ್ಮೂಲನೆ, ಆರೋಗ್ಯ ಮತ್ತು ಶಿಕ್ಷಣ ಮೊದಲಾದ ಗುರಿಯನ್ನು ಪೂರೈಸುವ ಗುರಿಯನ್ನು ಹೊಂದಿವೆ.

ಇಂದು ಜಗತ್ತು ಸಾಂಕ್ರಾಮಿಕ, ಆರ್ಥಿಕ ಕುಸಿತ, ಹೆಚ್ಚುತ್ತಿರುವ ಬಡತನ ಮತ್ತು ಆಳವಾದ ಅಸಮಾನತೆಯನ್ನು ಎದುರಿಸುತ್ತಿರುವ ಕಾಲಘಟ್ಟದಲ್ಲಿ ಯುನಿಸೆಫ್‌ನ ಕೆಲಸದ ಅಗತ್ಯ ಹಿಂದೆಂದೆಗಿಂತಲೂ ಅಗತ್ಯವಾಗಿದೆ ಎಂದು ಫೋರ್ ತಿಳಿಸಿದ್ದಾರೆ.

ಕಳೆದ 75 ವರ್ಷಗಳಿಂದಲೂ ನಡೆದಿರುವ ಘರ್ಷಣೆಗಳು, ವಲಸೆ, ನೈಸರ್ಗಿಕ ವಿಪತ್ತುಗಳು ಮತ್ತು ಬಿಕ್ಕಟ್ಟುಗಳಲ್ಲಿ ಯುನಿಸೆಫ್ ವಿಶ್ವದ ಮಕ್ಕಳಿಗಾಗಿ ಕಾರ್ಯನಿರ್ವಹಿಸಿದೆ. ಅದೇ ರೀತಿ ಈ ವರ್ಷದಲ್ಲಿ ಮಕ್ಕಳನ್ನು ರಕ್ಷಿಸಲು, ಅವರ ಹಕ್ಕುಗಳಿಗಾಗಿ ಮಾತನಾಡುತ್ತದೆ ಎಂದು ಹೆನ್ರಿಯೆಟಾ ಫೋರ್ ​ ಹೇಳಿದ್ದಾರೆ.

ABOUT THE AUTHOR

...view details