ಕರ್ನಾಟಕ

karnataka

ETV Bharat / international

ಬ್ಯಾಕ್ಟೀರಿಯಾ ನಾಶಕ್ಕೆ ಹೊಸ ಆ್ಯಂಟಿಬಯೋಟಿಕ್ ಕಂಡುಹಿಡಿದ ವಿಜ್ಞಾನಿಗಳು - ವಿನೂತನವಾದ ಆ್ಯಂಟಿಬಯೋಟಿಕ್​​

ಪ್ರಸ್ತುತ ಮನುಷ್ಯನ ದೇಹದಲ್ಲಿ ರೋಗನಿಯಂತ್ರಕ ಶಕ್ತಿಗಳು ಕಡಿಮೆಯಾಗುತ್ತಿದ್ದು, ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚುತ್ತಿವೆ. ಕಾಯಿಲೆ ಉಂಟು ಮಾಡುವ ಬ್ಯಾಕ್ಟೀರಿಯಾ ತಡೆಗಟ್ಟಲು ಕೆನಡಾ ವಿಜ್ಞಾನಿಗಳು ಹೊಸದಾದ ಆ್ಯಂಟಿಬಯೋಟಿಕ್​ ಕಂಡು ಹಿಡಿದಿದ್ದಾರೆ.

New class of antibiotics
ಬ್ಯಾಕ್ಟೀರಿಯಾ

By

Published : Feb 14, 2020, 2:22 PM IST

ಹ್ಯಾಮಿಲ್ಟ್​​ನ್​​(ಕೆನಡಾ): ದೇಹದಲ್ಲಿ ಉಂಟಾಗುವ ರೋಗಗ್ರಸ್ತ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ವಿನೂತನವಾದ ಆ್ಯಂಟಿಬಯೋಟಿಕ್​ ಒಂದನ್ನ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗುತ್ತಿದ್ದು, ಅತೀ ಸೂಕ್ಷ್ಮವಾದ ಬ್ಯಾಕ್ಟೀರಿಯಗಳ ಉತ್ಪತ್ತಿ ಜಾಸ್ತಿಯಾಗುತ್ತಿದೆ. ಆದ್ದರಿಂದ ಈ ಬ್ಯಾಕ್ಟೀರಿಯಾಗಳನ್ನು ಹಾಗೂ ರೋಗನಿಯಂತ್ರಣ ಶಕ್ತಿ ಉದ್ದೇಶದಿಂದ ಕಾರ್ಬೊಮೈಸಿನ್ ಆ್ಯಂಟಿಬಯೋಟಿಕ್​ ಔಷಧವನ್ನ ಕಂಡು ಹಿಡಿಯಲಾಗಿದೆ ಎಂದು ಕೆನಡಾ ವಿಜ್ಞಾನಿಗಳು ತಿಳಿಸಿದ್ದಾರೆ.

ಬ್ಯಾಕ್ಟೀರಿಯಾ ಹೊಡೆದೋಡಿಸುವ ದೇಹದ ನಿರೋಧಕದ ಕೊರತೆಯಿಂದಾಗಿ ಪ್ರತಿವರ್ಷ ವಿಶ್ವದಾದ್ಯಂತ 7ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಹಿನ್ನೆಲೆ, ಕೆನಡಾ ವಿಜ್ಞಾನಿಗಳು ಕಾರ್ಬೊಮೈಸಿನ್ ಎಂಬ ಆ್ಯಂಟಿಬಯೋಟಿಕ್​ ಕಂಡು ಹಿಡಿದಿದ್ದು, ದೇಹದಲ್ಲಿರುವ ಪ್ರತಿಜೀವಕದ ನೀರೋಧ ಶಕ್ತಿಗೆ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ದೇಹದಲ್ಲಿ ಸೇರಿಕೊಂಡಿರುವ ಬ್ಯಾಕ್ಟೀರಿಯಾಗಳ ಬೆಳವಣಿಗೆ ವೇಳೆ ಅವುಗಳ ತಮ್ಮ ಸುತ್ತ ಲೇಯರ್​​ಗಳನ್ನು​​ ಸೃಷ್ಟಿಸಿಕೊಂಡು ತಮ್ಮನ್ನು ತಾವು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆ. ಈ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟವು ಉದ್ದೇಶದಿಂದ ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಪೆನ್ಸಿಲಿನ್​ ಆ್ಯಂಟಿಬಯೋಟಿಕ್​​ ಔಷಧ ಬಳಸಲಾಗುತ್ತದೆ.

ಈ ಪೆನ್ಸಿಲಿನ್​ ಆ್ಯಂಟಿಬಯೋಟಿಕ್​​ನಿಂದಾಗಿ ಬ್ಯಾಕ್ಟೀರಿಯ ಸೃಷ್ಠಿಸಿರುವ ಲೇಯರ್​ಗಳನ್ನು ಸಾಯಿಸಲು ಸಾಧ್ಯವೆ ಹೊರತು ಬ್ಯಾಕ್ಟೀರಿಯಾಗಳು ಸಾಯುವುದಿಲ್ಲ ಎಂದು ಹ್ಯಾಮಿಲ್ಟನ್‌ನ ಮೆಕ್‌ಮಾಸ್ಟರ್ ವಿಶ್ವವಿದ್ಯಾಲಯದ ಸಂಶೋಧಕ ಬೆಥ್ ಕಲ್ಪ್ ತಿಳಿಸಿದ್ದಾರೆ.

ಇನ್ನು ಬೆಥ್​​ ಕಲ್ಪ್​ ಕಾರ್ಬೊಮೈಸಿನ್ ಆ್ಯಂಟಿಬಯೋಟಿಕ್​ಬಗ್ಗೆ ಮಾಹಿತಿ ನೀಡಿದ್ದು, ಇದೊಂದು ವಿಶಿಷ್ಠವಾದ ಆ್ಯಂಟಿಬಯೋಟಿಕ್​ ಆಗಿದ್ದು, ಇದರಿಂದಾಗಿ ಬ್ಯಾಕ್ಟೀರಿಯಾ ತನ್ನ ಸುತ್ತ ನಿರ್ಮಿಸಿಕೊಂಡ ಲೇಯರ್​ಗಳನ್ನು ಗಟ್ಟಿಗೊಳಿಸಿ ಬ್ಯಾಕ್ಟೀರಿಯಾ ಬೆಳವಣಿಗೆಗಳನ್ನ ತಡೆಯುಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ABOUT THE AUTHOR

...view details