ಕರ್ನಾಟಕ

karnataka

ETV Bharat / international

ಮತಪತ್ರ ಮೇಲ್​​ ಮಾಡುವ ಶಾಸನಕ್ಕೆ ಸಹಿ: ನೆವಾಡಾ ಗವರ್ನರ್​​​​ ಕ್ರಮಕ್ಕೆ ಟ್ರಂಪ್​ ಆಕ್ಷೇಪ

ನವೆಂಬರ್ ಚುನಾವಣೆಗೆ ಮುಂಚಿತವಾಗಿ ರಾಜ್ಯದ ಎಲ್ಲ ಸಕ್ರಿಯ ಮತದಾರರ ಮತಪತ್ರಗಳನ್ನು ಮೇಲ್ ಮಾಡಲು ಅವಕಾಶ ಒದಗಿಸುವ ಶಾಸನಕ್ಕೆ ನೆವಾಡಾ ಗವರ್ನರ್ ಸ್ಟೀವ್ ಸಿಸೊಲಾಕ್ ಸಹಿ ಹಾಕಿದ್ದಾರೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿದೆ.

trump
trump

By

Published : Aug 4, 2020, 7:26 AM IST

ಕಾರ್ಸನ್ ಸಿಟಿ (ಯುಎಸ್ಎ):ನೆವಾಡಾ ಗವರ್ನರ್ ಸ್ಟೀವ್ ಸಿಸೊಲಾಕ್ ಅವರು ನವೆಂಬರ್ ಚುನಾವಣೆಗೆ ಮುಂಚಿತವಾಗಿ ರಾಜ್ಯದ ಎಲ್ಲ ಸಕ್ರಿಯ ಮತದಾರರ ಮತಪತ್ರಗಳನ್ನು ಮೇಲ್ ಮಾಡಲು ಅವಕಾಶ ಒದಗಿಸುವ ಶಾಸನಕ್ಕೆ ಸಹಿ ಹಾಕಿದ್ದಾರೆ.

ಗವರ್ನರ್​ನ ಈ ಕ್ರಮವನ್ನು ಟೀಕಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದನ್ನು ತಡೆಯಲು ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.

"ಈ ಮಸೂದೆಯು ಚುನಾವಣಾ ಅಧಿಕಾರಿಗಳಿಗೆ ಈ ಕೊರೊನಾ ವೈರಸ್ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಸುರಕ್ಷತೆ ಒದಗಿಸುತ್ತದೆ" ಎಂದು ಪ್ರಜಾಪ್ರಭುತ್ವವಾದಿ ಸಿಸೋಲಾಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಗೆ ಶಾಸಕಾಂಗದ ಮೂಲಕ ಒಪ್ಪಿಗೆ ದೊರಕಿದ ಬಳಿಕ ಟ್ರಂಪ್‌ ಅವರಿಂದ ಟೀಕೆಗೆ ಗುರಿಯಾಗಿದೆ. ಮೇಲ್ ಮತಪತ್ರಗಳು ಚುನಾವಣೆಯ ಸಮಗ್ರತೆಗೆ ಧಕ್ಕೆಯುಂಟು ಮಾಡುತ್ತವೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details