ನ್ಯೂಯಾರ್ಕ್:ಈಗಾಗಲೇ ವಿಶ್ವದಾದ್ಯಂತ ಮಹಾಮಾರಿ ಕೊರೊನಾಗೆ 11,000ಕ್ಕೂ ಅಧಿಕ ಜನ ಪ್ರಾಣತೆತ್ತಿದ್ದು, ಇದನ್ನು ನಿಗ್ರಹಿಸಲು ವಿಶ್ವದಾದ್ಯಂತ ಶತಕೋಟಿ ಜನರು ತಮಗೆ ಮನೆಯಲ್ಲಿ ದಿಗ್ಬಂಧನ ಹೇರಿಕೊಂಡಿದ್ದಾರೆ.
ಕೊರೊನಾದಿಂದಾಗಿ ಇಡೀ ದೇಶವೇ ಸ್ತಬ್ದವಾಗಿದ್ದು, ಸಾರಿಗೆ ಸಂಪರ್ಕ, ಶಾಲಾ-ಕಾಲೇಜು, ಕಚೇರಿಗಳಿಗೆಲ್ಲಾ ಬೀಗ ಬಿದ್ದಿದ್ದು, ಲಕ್ಷಾಂತರ ಕೆಲಸಗಾರರು ಮನೆಯಿಂದಲೇ ಕೆಲಸ ನಿರ್ವಹಿಸುವಂತಾಗಿದೆ.