ಸ್ಯಾನ್ ಡಿಯಾಗೋ(ಅಮೆರಿಕ):ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ತೋರುತ್ತಿದ್ದಾರೆ. ಸೇನೆ ಮತ್ತು ರಕ್ಷಣೆ ವಿಚಾರದಲ್ಲೂ ಅವರು ಮುಂದಿದ್ದಾರೆ. ಈಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ಯುಎಸ್ಎಸ್ ಅಬ್ರಹಾಂ ಲಿಂಕನ್ ಮಹಿಳೆಯೊಬ್ಬರು ಕಮಾಂಡರ್ ಆಗಿ ನೇಮಕಗೊಂಡು, ದಾಖಲೆ ಬರೆದಿದ್ದಾರೆ. ಅವರ ಹೆಸರು ಕ್ಯಾಪ್ಟನ್ ಆ್ಯಮಿ ಬೌರ್ನ್‌ಸ್ಮಿಡ್ಟ್ .
ಅಂದಹಾಗೆ ಯುಎಸ್ಎಸ್ ಅಬ್ರಹಾಂ ಲಿಂಕನ್ ಅಮೆರಿಕದಲ್ಲಿರುವ ಪರಮಾಣು ಸಾಗಿಸುವ ಶಿಪ್ ( ಯುಎಸ್ಎಸ್ ಎಂದರೆ ಯುನೈಟೆಡ್ ಸ್ಟೇಟ್ಸ್ ಶಿಪ್ ಎಂದರ್ಥ). ಅಮೆರಿಕದ ಸ್ಯಾನ್ ಡಿಯಾಗೋದಲ್ಲಿ ಈ ಶಿಪ್ ಅನ್ನು ನಿಯೋಜನೆ ಮಾಡಲಾಗಿದ್ದು, ಇದರ ಸಂಪೂರ್ಣ ಉಸ್ತುವಾರಿಯನ್ನು ಆ್ಯಮಿ ಬೌರ್ನ್ಸ್ಮಿಡ್ತ್ ವಹಿಸಿಕೊಳ್ಳಲಿದ್ದಾರೆ. ಅಂದಹಾಗೆ ಇದು ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿ, ಪರಮಾಣು ಕ್ಯಾರಿಯರ್ ಅಂದರೆ ಸಾಗಿಸುವ ಶಿಪ್ನ ಉಸ್ತುವಾರಿಯನ್ನು ಮಹಿಳೆಯೊಬ್ಬರು ವಹಿಸಿಕೊಳ್ಳುತ್ತಿದ್ದಾರೆ.
ಕ್ಯಾಪ್ಟನ್ ಆ್ಯಮಿ ಬೌರ್ನ್‌ಸ್ಮಿಡ್ಟ್ ಈ ಮೊದಲು ಅಂದರೆ 2016ರಿಂದ 2019ರವರೆಗೆ ಯುಎಸ್ಎಸ್ ಅಬ್ರಹಾಂ ಲಿಂಕನ್ ಎಕ್ಸಿಕ್ಯೂಟಿವ್ ಆಫಿಸರ್ ಆಗಿ ಕೆಲಸ ನಿರ್ವಹಣೆ ಮಾಡಿದ್ದರು. ಕ್ಯಾಪ್ಟನ್ ವಾಲ್ಟ್ ಸ್ಲಾಟರ್ ಅವರಿಂದ ಕಳೆದ ಆಗಸ್ಟ್ನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದ್ದ ಕ್ಯಾಪ್ಟನ್ ಆ್ಯಮಿ ಬೌರ್ನ್‌ಸ್ಮಿಡ್ಟ್ ಸೋಮವಾರ ಸ್ಯಾನ್ಡಿಯಾಗೋದಲ್ಲಿ ನಿಯೋಜನೆ ಮಾಡಿದ್ದ ಶಿಪ್ಗೆ ಕಮಾಂಡರ್ ಆಗಿ ದಾಖಲೆ ನಿರ್ಮಿಸಿದ್ದಾರೆ.
ರಾಷ್ಟ್ರ ರಕ್ಷಣೆ ಜವಾಬ್ದಾರಿ ಮಹಿಳೆ ಹೆಗಲಿಗೆ