ಕರ್ನಾಟಕ

karnataka

ETV Bharat / international

ಜಾಗತಿಕ ಭದ್ರತೆಗೆ ಚೀನಾ ಸವಾಲು: ನ್ಯಾಟೋ ಘೋಷಣೆ - ಜಿ-7 ಸಭೆಯ ಮುಖ್ಯಾಂಶ

ಅಂತರರಾಷ್ಟ್ರೀಯ ಬದ್ಧತೆಗಳನ್ನು ಎತ್ತಿಹಿಡಿಯಲು ಮತ್ತು ಅಂತರರಾಷ್ಟ್ರೀಯ ವ್ಯವಸ್ಥೆಯಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಚೀನಾಗೆ ನ್ಯಾಟೋ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

NATO leaders declare China a global security challenge
ಜಾಗತಿಕ ಭದ್ರತೆಗೆ ಚೀನಾ ಸವಾಲು: ನ್ಯಾಟೋ ಘೋಷಣೆ

By

Published : Jun 15, 2021, 9:34 AM IST

ಬ್ರುಸೆಲ್ಸ್(ಬೆಲ್ಜಿಯಂ): ಚೀನಾವನ್ನು 'ಜಾಗತಿಕ ಭದ್ರತಾ ಸವಾಲು' ಎಂದು ನ್ಯಾಟೋ(NATO) ನಾಯಕರು ಘೋಷಿಸಿದ್ದಾರೆ. ಜೊತೆಗೆ, ಆ ದೇಶ ಜಾಗತಿಕ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಲು ಮುಂದಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೀನಾದ ವ್ಯಾಪಾರ, ಮಿಲಿಟರಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯು ಅಂತಾರಾಷ್ಟ್ರೀಯ ಮೈತ್ರಿಗೆ ಧಕ್ಕೆ ತರಲಿದೆ. ಅಮೆರಿಕ ಸೇರಿದಂತೆ ಮಿತ್ರರಾಷ್ಟ್ರಗಳಿಗೆ ಚೀನಾದಿಂದ ತೊಂದರೆಯಾಗದಂತೆ ಎಚ್ಚರಿಕೆ ಸಂದೇಶವನ್ನು ಸೋಮವಾರ ನಡೆದ ನ್ಯಾಟೋ ಸಭೆಯಲ್ಲಿ ನೀಡಲಾಗಿದೆ.

ನ್ಯಾಟೋ ಎಲ್ಲಾ ರಾಷ್ಟ್ರಗಳು ಚೀನಾವನ್ನು ಪ್ರತಿಸ್ಪರ್ಧಿ ಎಂದು ಒಪ್ಪಿಕೊಳ್ಳದೇ ಇದ್ದರೂ, ಚೀನಾದ ದಬ್ಬಾಳಿಕೆಯ ನೀತಿಗಳು, ಅದು ತನ್ನ ಸಶಸ್ತ್ರ ಪಡೆಗಳನ್ನು ಆಧುನೀಕರಿಸುವ ಮಾರ್ಗಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅಂತರರಾಷ್ಟ್ರೀಯ ಬದ್ಧತೆಗಳನ್ನು ಎತ್ತಿಹಿಡಿಯಲು ಮತ್ತು ಅಂತರರಾಷ್ಟ್ರೀಯ ವ್ಯವಸ್ಥೆಯಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಚೀನಾಗೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ:ಹೊಲ ಉಳುಮೆಗೆ ಎತ್ತಿನ ಜೊತೆ ನೊಗಕ್ಕೆ ಹೆಗಲು ಕೊಟ್ಟ ಮಗ!

ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಚೀನಾವನ್ನು ಜಾಗತಿಕ ಸವಾಲು ಎಂದು ಘೋಷಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿ, ರಷ್ಯಾದಂತೆಯೇ ಚೀನಾ ಕೂಡಾ ಕೆಲವು ರಾಷ್ಟ್ರಗಳೊಂದಿಗೆ ವ್ಯಾಪಾರ ವಾಣಿಜ್ಯದಲ್ಲಿ ಪಾಲುದಾರ ರಾಷ್ಟ್ರ. ಅದು ಜರ್ಮನಿಯ ಉನ್ನತ ವ್ಯಾಪಾರ ಪಾಲುದಾರ ಕೂಡಾ ಹೌದು. ದೇಶದ ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ರಷ್ಯಾವನ್ನು ಹೆಚ್ಚು ಅವಲಂಬಿಸಲಾಗಿದೆ. ಆದರೆ ಕೆಲವೊಂದು ವಿಚಾರದಲ್ಲಿ ಚೀನಾವನ್ನು ನಿರ್ಲಕ್ಷ್ಯ ಮಾಡಲಾಗುವುದಿಲ್ಲ ಎಂದಿದ್ದಾರೆ.

ಜಿ-7ನಲ್ಲೂ ಚೀನಾ ವಿರುದ್ಧ ಆಕ್ರೋಶ

ಇಂಗ್ಲೆಂಡ್‌ನಲ್ಲಿ ನಡೆದ ಮೂರು ದಿನಗಳ ಜಿ-7 ಶೃಂಗಸಭೆಯ ವೇಳೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್​​, ಗುಲಾಮಗಿರಿ ಅಥವಾ ಬಲವಂತದ ಕಾರ್ಮಿಕ ಪದ್ಧತಿ ಮತ್ತು ಉಯ್ಘರ್ ಮುಸ್ಲಿಮರು ಮತ್ತು ಇತರ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ನಡೆಯುವ ದಾಳಿ ಮಾನವ ಹಕ್ಕುಗಳ ಉಲ್ಲಂಘನೆ ಎಂದಿದ್ದರು. ಬೈಡನ್ ನಡೆಸಿದ್ದ ಎಂಟು ದಿನಗಳ ಯೂರೋಪ್ ಪ್ರವಾಸವನ್ನು ಕೂಡಾ ಚೀನಾ ವಿರುದ್ಧ ವ್ಯವಸ್ಥಿತ ದಾಳಿಗೆ ಬಳಸಿಕೊಂಡರು.

ಏನಿದು ನ್ಯಾಟೋ(NATO)?

ಇದು ಕೆಲವು ಬಲಿಷ್ಟ ರಾಷ್ಟ್ರಗಳು ತಮ್ಮ ರಕ್ಷಣೆಗಾಗಿ, ಪರಸ್ಪರ ಮಿಲಿಟರಿ ಸಹಕಾರಕ್ಕಾಗಿ ಕಟ್ಟಿಕೊಂಡ ಗುಂಪು ಆಗಿದ್ದು, North Atlantic Treaty Organization ಎಂಬ ವಿಸ್ಕೃತ ರೂಪ ಹೊಂದಿದೆ. ಈ ಗುಂಪಿನಲ್ಲಿರುವ ರಾಷ್ಟ್ರಗಳ ಮೇಲೆ ಬೇರೆ ರಾಷ್ಟ್ರಗಳು ಆಕ್ರಮಣ ಅಥವಾ ಯುದ್ಧ ಘೋಷಿಸಿದರೆ ಈ ಗುಂಪಿನ ಎಲ್ಲಾ ರಾಷ್ಟ್ರಗಳು ಒಟ್ಟಾಗಬೇಕು ಎಂಬ ನಿಯಮವಿದೆ. ಈ ಗುಂಪಿನಲ್ಲಿ ಸದ್ಯಕ್ಕೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಕೆನಡಾ ಸೇರಿದಂತೆ 30 ಸದಸ್ಯ ರಾಷ್ಟ್ರಗಳಿವೆ.

ABOUT THE AUTHOR

...view details