ಕರ್ನಾಟಕ

karnataka

ETV Bharat / international

ಚಂದ್ರನ ಮೇಲೆ ತೆರಳಲು ಹೊಸ ರೂಲ್ಸ್​​​ ಹೊರತಂದ ನಾಸಾ.. ಏನು ಆ ನಿಯಮಗಳು? - Space agency

2024ಕ್ಕೆ ಚಂದ್ರನ ಅಂಗಳದಲ್ಲಿ ಮಾನವನ ಗುರುತು ಮತ್ತೊಮ್ಮೆ ದಾಖಲಿಸಲು ಪ್ರಯತ್ನ ಸಾಗಿದೆ. ಈ ನಡುವೆ ನಾಸಾ ಸಂಸ್ಥೆ ಚಂದ್ರಯಾನ ಮಿಷನ್ ಹಾಗೂ ಚಂದ್ರನ ಮೇಲ್ಮೈ ತಲುಪುವಲ್ಲಿ ಅನುಸರಿಸಬೇಕಾದ ಹಲವು ನಿಯಮಾವಳಿ ಹೊರತಂದಿದೆ.

nasas-new-moonshot-rules
ಚಂದ್ರನ ಮೇಲೆ ತೆರಳಲು ಹೊಸ ರೂಲ್ಸ್​ ಹೊರತಂದ ನಾಸಾ

By

Published : Oct 14, 2020, 9:56 AM IST

ಅಮೆರಿಕಾ: ಚಂದ್ರನ ಅಂಗಳಕ್ಕೆ ಮತ್ತೊಮ್ಮೆ ತಲುಪುವ ಮಾನವನ ದಶಕಗಳ ಕನಸು ನನಸಾಗಿಲು ವಿಶ್ವದ ದೈತ್ಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆಗಳು ನಿರಂತರ ಪ್ರಯತ್ನ ಮಾಡುತ್ತಿವೆ. ಅಲ್ಲದೇ 2024ಕ್ಕೆ ಚಂದ್ರನ ಮೇಲೆ ಮಾನವನ ಇಳಿಸಲು ನಾಸಾ ತಯಾರಿ ನಡೆಸಿದೆ.

ಈ ನಡುವೆ ಚಂದ್ರನ ಮೇಲೆ ಇಳಿಯುವ ಮುನ್ನವೇ ಹೊಸ ಮೂನ್​​​​​ಶಾಟ್​​​​​ ನಿಯಮಾವಳಿಗಳನ್ನು ಹೊರತಂದಿದೆ. ಇದರಲ್ಲಿ ಪ್ರಮುಖವಾಗಿ ಅಪೊಲೊ 11ರ ಟ್ರ್ಯಾಂಕ್ವಲಿಟಿ ಬೇಸ್​​​ನಂತಹ ಐತಿಹಾಸಿಕ ಗುರುತುಗಳ ಬಳಿ ಯಾವುದೇ ಅತಿಕ್ರಮಣಕ್ಕೆ ಅವಕಾಶವಿಲ್ಲ ಎಂದಿದೆ.

1967ರ ಬಾಹ್ಯಾಕಾಶ ಒಪ್ಪಂದ ಮತ್ತು ಇತರ ಒಪ್ಪಂದಗಳ ಆಧಾರದ ಮೇಲೆ ಬಾಹ್ಯಾಕಾಶ ಸಂಸ್ಥೆ ತನ್ನ ಆರ್ಟೆಮಿಸ್ ಮೂನ್ - ಲ್ಯಾಂಡಿಂಗ್ ಕಾರ್ಯಕ್ರಮಕ್ಕಾಗಿ ಮಂಗಳವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು. ಇನ್ನು ಈವರೆಗೆ ಆರ್ಟೆಮಿಸ್ ಸಂಸ್ಥೆಯೊಂದಿಗೆ 8 ದೇಶಗಳು ಒಪ್ಪಂದ ಮಾಡಿಕೊಂಡಿವೆ.

ಸಂಸ್ಥಾಪಕ ಸದಸ್ಯರಲ್ಲಿ ಆಸ್ಟ್ರೇಲಿಯಾ, ಕೆನಡಾ, ಇಟಲಿ, ಜಪಾನ್, ಲಕ್ಸೆಂಬರ್ಗ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿವೆ. ನಾಸಾ ಆಡಳಿತಾಧಿಕಾರಿ ಜಿಮ್ ಬ್ರಿಡೆನ್‌ಸ್ಟೈನ್ ಅವರು 2024ರ ವೇಳೆಗೆ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಹಿಂತಿರುಗಿಸುವ ಪ್ರಯತ್ನಕ್ಕೆ ಹೆಚ್ಚಿನ ದೇಶಗಳು ಸೇರಿಕೊಳ್ಳಬೇಕು ಎಂದು ನಿರೀಕ್ಷಿಸುತ್ತೇವೆ ಎಂದಿದ್ದಾರೆ.

ನಾಸಾ ಬಿಡುಗಡೆ ಮಾಡಿರುವ ಕೆಲವು ನಿಯಮಗಳು ಇಲ್ಲಿದೆ

  • ಎಲ್ಲರೂ ಶಾಂತಿಯಿಂದ ಆಗಮಿಸಬೇಕು
  • ರಹಸ್ಯತೆ ನಿಷೇಧಿಸಲಾಗಿದೆ
  • ಎಲ್ಲ ಉಡಾವಣಾ ಯಂತ್ರಗಳು ಸಹ ನೋಂದಾಯಿಸಿರಬೇಕು ಹಾಗೂ ಗಗನಯಾತ್ರಿಗಳು ತುರ್ತು ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಸದಸ್ಯರು ಒಪ್ಪಿರುತ್ತಾರೆ
  • ಬಾಹ್ಯಾಕಾಶ ವ್ಯವಸ್ಥೆಗಳು ಸಾರ್ವತ್ರಿಕವಾಗಿರಬೇಕು ಹಾಗೂ ವೈಜ್ಞಾನಿಕ ಡೇಟಾವನ್ನು ಹಂಚಿಕೊಳ್ಳಬೇಕು
  • ಐತಿಹಾಸಿಕ ತಾಣಗಳನ್ನು ಸಂರಕ್ಷಿಸಬೇಕು ಮತ್ತು ಎಲ್ಲ ರೀತಿಯ ಬಾಹ್ಯಾಕಾಶ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಬೇಕು
  • ರೋವರ್‌ಗಳು ಮತ್ತು ಇತರ ಬಾಹ್ಯಾಕಾಶ ನೌಕೆಗಳು ಆರ್ಬಿಟರ್​​​​ ಹತ್ತಿರಕ್ಕೆ ತಮ್ಮ ಕಾರ್ಯಾಚರಣೆ ಮಾಡುವಂತಿಲ್ಲ

ಬ್ರಿಡೆನ್‌ಸ್ಟೈನ್ ಪ್ರಕಾರ ನಿಯಮ ಉಲ್ಲಂಘಿಸುವವರು ಹೊರಹೋಗಲು ಅವಕಾಶ ಕೇಳಬಹುದು ಎಂದಿದ್ದಾರೆ.

ಇನ್ನು ಚಂದ್ರನ ಬಳಿ ಮಾನವರನ್ನು ಕಳುಹಿಸುವಲ್ಲಿ ಯಶಸ್ವಿಯಾದ ಒಂದೇ ಒಂದು ರಾಷ್ಟ್ರವಾಗಿ ಅಮೆರಿಕ ಹೆಗ್ಗಳಿಕೆ ಪಡೆದಿದೆ. ಅಲ್ಲದೇ 1969ರಿಂದ 1972ರ ವರೆಗೆ 12 ಮಂದಿ ಗಗನಯಾತ್ರಿಗಳನ್ನು ಚಂದ್ರನತ್ತ ಕಳುಹಿಸಿದ ಕೀರ್ತಿಯನ್ನೂ ಪಡೆದಿದೆ.

ABOUT THE AUTHOR

...view details