ವಾಷಿಂಗ್ಟನ್(ಅಮೆರಿಕ) : ಕೋವಿಡ್-19 ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವೆಂಟಿಲೇಟರ್‌ಗಳಂತಹ ವೈದ್ಯಕೀಯ ಉಪಕರಣಗಳ ಕೊರತೆ ಉಂಟಾಗುತ್ತಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಹಾಗೂ ನೂತನ ಉಪಕರಣಗಳನ್ನು ಕಂಡುಹಿಡಿಯುವ ಸಲುವಾಗಿ ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ, ಕ್ಯಾಲಿಫೋರ್ನಿಯಾದ ಕಾರ್ಯಪಡೆಯೊಂದಿಗೆ ವೈದ್ಯಕೀಯ ಸಾಧನಗಳನ್ನು ನಿರ್ಮಿಸಲು ಹಾಗೂ ಕೊರೊನಾ ಸೋಂಕಿತ ರೋಗಿಗಳಿಗೆ ಸಹಾಯ ಮಾಡುವತ್ತ ದಾಪುಗಾಲಿಟ್ಟಿದೆ.
ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ, ಶುಕ್ರವಾರ ತನ್ನ ಆರ್ಮ್‌ಸ್ಟ್ರಾಂಗ್ ಫ್ಲೈಟ್ ರಿಸರ್ಚ್ ಸೆಂಟರ್ ಆಂಟೆಲೋಪ್ ವ್ಯಾಲಿ ಆಸ್ಪತ್ರೆ, ಸಿಟಿ ಆಫ್ ಲ್ಯಾಂಕಾಸ್ಟರ್, ವರ್ಜಿನ್ ಗ್ಯಾಲಕ್ಟಿಕ್, ದಿ ಸ್ಪೇಸ್‌ಶಿಪ್ ಕಂಪನಿ (ಟಿಎಸ್‌ಸಿ) ಮತ್ತು ಆಂಟೆಲೋಪ್ ವ್ಯಾಲಿ ಕಾಲೇಜ್‌ನೊಂದಿಗೆ ಸಹಭಾಗಿತ್ವವನ್ನು ಪಡೆದುಕೊಂಡಿದ್ದು, ವೈದ್ಯಕೀಯ ಸಲಕರಣೆಗಳ ಕೊರತೆಯನ್ನು ನೀಗಿಸಲು ನವೀನ ಆಲೋಚನೆಗಳನ್ನು ರೂಪಿಸುವಂತೆ ಸೂಚನೆ ನೀಡಿದೆ.
ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ವೈದ್ಯರು ಮತ್ತು ಇತರ ಸಿಬ್ಬಂದಿ ಒಳಿತಿಗಾಗಿ ಆಮ್ಲಜನಕದ ಹುಡ್ ನಿರ್ಮಾಣ ಮಾಡುವುದು ನಮ್ಮೆಲ್ಲರ ಮೊದಲ ಪ್ರಯತ್ನಗಳಲ್ಲಿ ಒಂದಾಗಿದೆ. ಕ್ಯಾಲಿಫೋರ್ನಿಯಾದ ಮೊಜಾವೆದಲ್ಲಿರುವ ಟಿಎಸ್‌ಸಿಯಲ್ಲಿ ಮುಂದಿನ ವಾರದಿಂದ ವೈದ್ಯಕೀಯ ಉಪಕರಣಗಳ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ನಾಸಾ ತಿಳಿಸಿದೆ.
ನಾಸಾದ ಎಂಜಿನಿಯರ್ ಮೈಕ್ ಬುಟ್ಟಿಗೀಗ್ ಅಭಿವೃದ್ಧಿಪಡಿಸಿದ ಸಾಧನವು ಇದಾಗಿದ್ದು, ಕೋವಿಡ್-19 ರೋಗಿಗಳಲ್ಲಿರುವ ಅತೀ ಚಿಕ್ಕ ರೋಗಲಕ್ಷಣಗಳನ್ನು ಪ್ರದರ್ಶಿಸುವ ಒಂದು ಸಾಧನ ಇದಾಗಿದೆ. ಹಾಗೂ ಇದರಿಂದಾಗಿ ರೋಗಿಗಳಿಗಾಗಿ ವೆಂಟಿಲೇಟರ್‌ಗಳನ್ನು ಬಳಸುವ ಅಗತ್ಯವನ್ನು ಇದು ಕಡಿಮೆ ಮಾಡಲಿದೆ ಎಂದು ನಾಸಾ ತಿಳಿಸಿದೆ.
ಕೊರೊನಾ ವೈರಸ್ನಿಂದ ಉಂಟಾದ ಅಗತ್ಯತೆಗಳು ಮತ್ತು ಸವಾಲುಗಳನ್ನು ಪರಿಹರಿಸುವಲ್ಲಿ ಹಾಗೂ ನಾಸಾದಲ್ಲಿರುವ ಜ್ಞಾನ ಮತ್ತು ಜನರನ್ನು ಒಟ್ಟುಗೂಡಿಸಲು, ಅನನ್ಯ ವ್ಯವಸ್ಥೆಗಳ ನಾವೀನ್ಯತೆ, ಎಂಜಿನಿಯರಿಂಗ್, ವಿನ್ಯಾಸ ಮತ್ತು ತಯಾರಿಕೆಯಲ್ಲಿರುವ ಪರಿಣತಿಯನ್ನು ನಾವು ಈಗಾಗಲೇ ನೋಡಿದ್ದೇವೆ" ಎಂದು ಆರ್ಮ್‌ಸ್ಟ್ರಾಂಗ್ ಮುಖ್ಯ ತಂತ್ರಜ್ಞ ಡೇವಿಡ್ ವೊರಾಸೆಕ್ ಅಭಿಪ್ರಾಯಪಟ್ಟಿದ್ದಾರೆ.