ಕರ್ನಾಟಕ

karnataka

ETV Bharat / international

ಬಾಹ್ಯಾಕಾಶ ಸುರಕ್ಷತೆ, ಘರ್ಷಣೆ ತಪ್ಪಿಸಲು ನಾಸಾ - ಸ್ಪೇಸ್​ಎಕ್ಸ್​ ಜಂಟಿ ಒಪ್ಪಂದಕ್ಕೆ ಸಹಿ - latest science article

ಬಾಹ್ಯಾಕಾಶದಲ್ಲಿರುವ ಜಂಟಿ ಎರಡು ವಸ್ತುಗಳ ನಡುವಿನ ನಿಕಟ ವಿಧಾನ ಎಂದು ವ್ಯಾಖ್ಯಾನಿಸಲಾಗಿದೆ. ಜಾಗತಿಕ ಸಂವಹನ, ನ್ಯಾವಿಗೇಷನ್​, ಹವಾಮಾನ ಮುನ್ಸೂಚನೆ ಮತ್ತು ಹೆಚ್ಚಿನವುಗಳಿಗಾಗಿ ಬಾಹ್ಯಾಕಾಶ ಆಧಾರಿತ ಸಾಮರ್ಥ್ಯಗಳನ್ನು ಅವಲಂಬಿಸಿದೆ ಎಂದು ನಾಸಾ ಆಡಳಿತಾಧಿಕಾರಿ ಸ್ಟೀವ್ ಜುರ್​​ಝ್ಯಕ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tech-nasa
Tech-nasa

By

Published : Mar 20, 2021, 12:34 PM IST

ವಾಷಿಂಗ್ಟನ್:ಬಾಹ್ಯಾಕಾಶ ಸುರಕ್ಷತೆ ಕಾಪಾಡಿಕೊಳ್ಳಲು ಮತ್ತು ಸುಧಾರಿಸಲು ನಾಸಾ ಮತ್ತು ಈಲಾನ್ ಮಸ್ಕ್ ಅವರ ಖಾಸಗಿ ಏರೋಸ್ಪೇಸ್ ಕಂಪನಿ ಸ್ಪೇಸ್ಎಕ್ಸ್ ಜಂಟಿ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ಒಪ್ಪಂದವು ನಾಸಾ ಬಾಹ್ಯಾಕಾಶ ನೌಕೆ ಮತ್ತು ಸ್ಪೇಸ್‌ಎಕ್ಸ್ ಸ್ಟಾರ್‌ಲಿಂಕ್ ಉಪಗ್ರಹಗಳ ನಡುವಿನ ಸಂಯೋಗ, ನೌಕೆ ಉಡಾವಣೆ ಘರ್ಷಣೆ ತಪ್ಪಿಸುವಿಕೆ ಹಾಗೂ ಸಂಬಂಧಿತ ರೈಡ್‌ಶೇರ್ ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸಿದೆ ಎಂದು ನಾಸಾ ತಿಳಿಸಿದೆ.

ಇದನ್ನೂ ಓದಿ: ಖಷಿ - ಖುಷಿಯಾಗಿರುವ ವಿಚಾರದಲ್ಲಿ ಭಾರತೀಯರಿಗಿಂತ ಚೀನಾ, ಪಾಕಿಸ್ತಾನಿಯರೇ ವಾಸಿ!

ಬಾಹ್ಯಾಕಾಶದಲ್ಲಿರುವ ಜಂಟಿ ಎರಡು ವಸ್ತುಗಳ ನಡುವಿನ ನಿಕಟ ವಿಧಾನ ಎಂದು ವ್ಯಾಖ್ಯಾನಿಸಲಾಗಿದೆ. ಜಾಗತಿಕ ಸಂವಹನ, ನ್ಯಾವಿಗೇಷನ್​, ಹವಾಮಾನ ಮುನ್ಸೂಚನೆ ಮತ್ತು ಹೆಚ್ಚಿನವುಗಳಿಗಾಗಿ ಬಾಹ್ಯಾಕಾಶ ಆಧಾರಿತ ಸಾಮರ್ಥ್ಯಗಳನ್ನು ಅವಲಂಬಿಸಿದೆ ಎಂದು ನಾಸಾ ಆಡಳಿತಾಧಿಕಾರಿ ಸ್ಟೀವ್ ಜುರ್​​ಝ್ಯಕ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಣಿಜ್ಯ ಕಂಪನಿಗಳು ಹೆಚ್ಚು- ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡುತ್ತಿರುವುದರಿಂದ ನಾವೆಲ್ಲರೂ ಸುರಕ್ಷಿತ ವಾತಾವರಣ ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಂವಹನಗಳನ್ನು ಹೆಚ್ಚಿಸುತ್ತೇವೆ. ಜತೆಗೆ ಡೇಟಾ ವಿನಿಮಯ ಮತ್ತು ಉತ್ತಮ ವ್ಯವಹಾರಿಕ ನಡೆಗಳನ್ನು ಸ್ಥಾಪಿಸುತ್ತೇವೆ ಎಂದಿದ್ದಾರೆ.

ABOUT THE AUTHOR

...view details