ಬೋಯಿಸ್ (ಅಮೆರಿಕ):ಚಂದ್ರನ ಮೇಲೆ ನ್ಯೂಕ್ಲಿಯರ್ ರಿಯಾಕ್ಟರ್ ಅಥವಾ ಪರಮಾಣು ವಿದ್ಯುತ್ ಸ್ಥಾವರವನ್ನು ಹೇಗೆ ಇಳಿಸಬೇಕು (NASA seeks ideas for a nuclear reactor on the moon) ಎಂಬುದರ ಕುರಿತು ಯಾರಿಗಾದರೂ ಒಳ್ಳೆಯ ಐಡಿಯಾಗಳು ಇದ್ದರೆ ನೀಡಬಹುದು ಎಂದು ನಾಸಾ ಹಾಗೂ ಅಮೆರಿಕ ಸರ್ಕಾರ ಕೇಳಿದೆ.
ಈ ದಶಕದ ಅಂತ್ಯದ ವೇಳೆಗೆ ಚಂದ್ರನ ಮೇಲಿನ ಕಾರ್ಯಾಚರಣೆಗಾಗಿ ಸೂರ್ಯನನ್ನೇ ಸ್ವತಂತ್ರ ವಿದ್ಯುತ್ ಮೂಲವನ್ನಾಗಿ (sun - independent power source) ಸ್ಥಾಪಿಸಲು ಯುಎಸ್ ಇಂಧನ ಇಲಾಖೆಯ ಇಡಾಹೊ ರಾಷ್ಟ್ರೀಯ ಪ್ರಯೋಗಾಲಯ ( Idaho National Laboratory) ಕೂಡ ನಾಸಾದೊಂದಿಗೆ ಕೈಜೋಡಿಸಿದೆ. ಇಡಾಹೊ, ಇದು ರಾಷ್ಟ್ರದ ಉನ್ನತ ಫೆಡರಲ್ ಪರಮಾಣು ಸಂಶೋಧನಾ ಪ್ರಯೋಗಾಲಯವಾಗಿದೆ.
ಇಲ್ಲೇ ರಿಯಾಕ್ಟರ್ ನಿರ್ಮಿಸಿ ಚಂದ್ರನಲ್ಲಿಗೆ ರವಾನೆ
ರಿಯಾಕ್ಟರ್ ಅನ್ನು ಭೂಮಿಯ ಮೇಲೆ ನಿರ್ಮಿಸಲಾಗುತ್ತದೆ ಮತ್ತು ನಂತರ ಚಂದ್ರನಿಗೆ ಕಳುಹಿಸಲಾಗುತ್ತದೆ. ಈ ಕಾರ್ಯಾಚರಣೆಯು ಯುರೇನಿಯಂ - ಇಂಧನದ ರಿಯಾಕ್ಟರ್ ಕೋರ್, ಪರಮಾಣು ಶಕ್ತಿಯನ್ನು ಬಳಸಬಹುದಾದ ಶಕ್ತಿಯನ್ನಾಗಿ ಪರಿವರ್ತಿಸುವ ವ್ಯವಸ್ಥೆಯಾಗಿದೆ.
ರಿಯಾಕ್ಟರ್ ಅನ್ನು ತಂಪಾಗಿರಿಸಲು ಉಷ್ಣ ನಿರ್ವಹಣಾ ವ್ಯವಸ್ಥೆ ಮತ್ತು 40 ಕಿಲೋವ್ಯಾಟ್‌ಗಳಿಗಿಂತ ಕಡಿಮೆಯಿಲ್ಲದ ನಿರಂತರ ವಿದ್ಯುತ್ ಉತ್ಪಾದಿಸಬೇಕಿದೆ. ಚಂದ್ರನ ಅಂಗಳದಲ್ಲಿ ಸುಮಾರು 10 ವರ್ಷಗಳ ಕಾಲಕ್ಕಿಂತ ಕಡಿಮೆ ಇಲ್ಲದಂತೆ ಈ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಸ್ಥಾಪಿಸಬೇಕೆಂಬುದು ನಾಸಾ ಬಯಕೆಯಾಗಿದೆ.