ವಾಷಿಂಗ್ಟನ್ (ಯುಎಸ್): ನಾಸಾದ ಮಿನಿ ಹೆಲಿಕಾಪ್ಟರ್ ಮಂಗಳ ಗ್ರಹದ ಮೇಲೆ ಸುರಕ್ಷಿತವಾಗಿ ಇಳಿದಿದೆ. ಮಿನಿ ಹೆಲಿಕಾಪ್ಟರ್ ಮಂಗಳದ ಮೇಲೆ ಇಳಿಯುವ ಚಿತ್ರವನ್ನು ಪರ್ಸಿವರೆನ್ಸ್ ಸೆರೆ ಹಿಡಿದಿದೆ.
47 ಕೋಟಿ ಕಿ.ಮೀ ದೂರವನ್ನು ನಾಸಾದ ಪರ್ಸವೆರೆನ್ಸ್ ರೋವರ್‌ನೊಂದಿಗೆ ಪ್ರಯಾಣ ಮಾಡಿದ್ದ ಈ ಮಿನಿ ಹೆಲಿಕಾಪ್ಟರ್ ಇಂದು ಮಂಗಳ ಗ್ರಹದ ಮೇಲೆ ಇಳಿದಿದೆ. ನಾಸಾದ ಮಾರ್ಸ್ ಹೆಲಿಕಾಪ್ಟರ್ ಮಂಗಳನ ಮೇಲೆ ಯಶಸ್ವಿಯಾಗಿ ಮೊದಲ ರಾತ್ರಿ ಕಳೆದಿದೆ.
ಫೆಬ್ರವರಿ 18 ರಂದು ಮಂಗಳ ಗ್ರಹಕ್ಕೆ ಬಂದಿಳಿದ ಪರ್ಸವೆರೆನ್ಸ್ ರೋವರ್‌ನ ಕೆಳಭಾಗದಲ್ಲಿ ಈ ಮಿನಿ ಹೆಲಿಕಾಪ್ಟರ್ ಅನ್ನು ಅಳವಡಿಸಲಾಗಿತ್ತು ಎಂದು ನಾಸಾ ಟ್ವೀಟ್ ಮಾಡಿದೆ. ಇಷ್ಟು ಕಾಲ ಪರ್ಸವರೆನ್ಸ್ ವಿದ್ಯುತ್ ವ್ಯವಸ್ಥೆಯನ್ನು ಬಳಸುತ್ತಿದ್ದ ಈ ಹೆಲಿಕಾಪ್ಟರ್ ಈಗ ತನ್ನದೇ ಆದ ಬ್ಯಾಟರಿ ನೆರವಿನಿಂದ ಕಾರ್ಯ ನಿರ್ವಹಿಸಲಿದೆ.
ನಾಸಾದ ಮಾರ್ಸ್ ಹೆಲಿಕಾಪ್ಟರ್ ಮಂಗಳನ ಮೇಲೆ ಯಶಸ್ವಿಯಾಗಿ ಮೊದಲ ರಾತ್ರಿ ಕಳೆದಿದೆ. ಹೆಲಿಕಾಪ್ಟರ್ ಏಪ್ರಿಲ್ 11 ರಂದು ತನ್ನ ಮೊದಲ ಹಾರಾಟ ನಡೆಸಲಿದೆ. ಮೊದಲ ಪ್ರಯತ್ನದ ಭಾಗವಾಗಿ, ಸುಮಾರು 10 ಅಡಿ ಮೇಲಕ್ಕೆ ಹಾರಿ, 30 ಸೆಕೆಂಡ್ಗಳ ಕಾಲ ಅಲ್ಲಿಯೇ ಇದ್ದು, ನಂತರ ಕೆಳಕ್ಕೆ ಇಳಿಯಲಿದೆ ಎಂದು ನಾಸಾ ಮಾಹಿತಿ ನೀಡಿದೆ.