ಕರ್ನಾಟಕ

karnataka

ETV Bharat / international

ಜೂ.7 ರಂದು ಗುರುಗ್ರಹದ ಅತಿದೊಡ್ಡ ಚಂದ್ರನಿಗೆ ಹತ್ತಿರವಾಗಿ ಹಾರಲಿರುವ ಜುನೋ..! - ಜುನೋ ಬಾಹ್ಯಾಕಾಶ ನೌಕೆ

ಜುನೊ ಗ್ಯಾನಿಮಿಡ್ ಹಿಂದೆಂದೂ ಕಾಣದ ರೀತಿಯಲ್ಲಿ ನೋಡುವ ಸಾಮರ್ಥ್ಯವನ್ನು ಹೊಂದಿರುವ ಸೂಕ್ಷ್ಮ ಸಾಧನಗಳನ್ನು ಹೊಂದಿದೆ ಎಂದು ಸ್ಯಾನ್ ಆಂಟೋನಿಯೊದ ನೈಋತ್ಯ ಸಂಶೋಧನಾ ಸಂಸ್ಥೆಯ ಜುನೊ ಪ್ರಧಾನ ತನಿಖಾಧಿಕಾರಿ ಸ್ಕಾಟ್ ಬೋಲ್ಟನ್ ಹೇಳಿದ್ದಾರೆ.

ಗ್ಯಾನಿಮೀಡ್
ಗ್ಯಾನಿಮೀಡ್

By

Published : Jun 4, 2021, 8:59 PM IST

ವಾಷಿಂಗ್ಟನ್:ನಾಸಾದ ಜುನೋ ಬಾಹ್ಯಾಕಾಶ ನೌಕೆ ಜೂನ್ 7 ರಂದು ಗುರುಗ್ರಹದ ಅತಿದೊಡ್ಡ ಚಂದ್ರ ಗ್ಯಾನಿಮಿಡ್​​ನ ಮೇಲ್ಮೈಯಿಂದ 645 ಮೈಲಿ (1,038 ಕಿಲೋಮೀಟರ್) ಒಳಗೆ ಬರಲಿದೆ ಎಂದು ಯುಎಸ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಸೌರಶಕ್ತಿ ಚಾಲಿತ ಜುನೋ ಬಾಹ್ಯಾಕಾಶ ನೌಕೆಯು ಮಧ್ಯಾಹ್ನ 1:35 ಕ್ಕೆ ಗ್ಯಾನಿಮಿಡ್‌ನಿಂದ ಹಾರುತ್ತದೆ. ಗ್ಯಾನಿಮಿಡ್​ ಬುಧ ಗ್ರಹಕ್ಕಿಂತ ದೊಡ್ಡದಾಗಿದೆ ಮತ್ತು ಸೌರಮಂಡಲದಲ್ಲಿ ಕಾಂತಗೋಳವನ್ನು ಹೊಂದಿರುವ ಏಕೈಕ ಚಂದ್ರ ಇದಾಗಿದೆ.

ಜುನೊ ಗ್ಯಾನಿಮಿಡ್​ ಹಿಂದೆಂದೂ ಕಾಣದ ರೀತಿಯಲ್ಲಿ ನೋಡುವ ಸಾಮರ್ಥ್ಯವನ್ನು ಹೊಂದಿರುವ ಸೂಕ್ಷ್ಮ ಸಾಧನಗಳನ್ನು ಹೊಂದಿದೆ ಎಂದು ಸ್ಯಾನ್ ಆಂಟೋನಿಯೊದ ನೈಋತ್ಯ ಸಂಶೋಧನಾ ಸಂಸ್ಥೆಯ ಜುನೊ ಪ್ರಧಾನ ತನಿಖಾಧಿಕಾರಿ ಸ್ಕಾಟ್ ಬೋಲ್ಟನ್ ಹೇಳಿದ್ದಾರೆ.

ಗ್ಯಾನಿಮೀಡ್‌ನ ಅನ್ವೇಷಣೆಯನ್ನು 21 ನೇ ಶತಮಾನಕ್ಕೆ ತರುತ್ತೇವೆ. ನಾಸಾದ ಯುರೋಪಾ ಕ್ಲಿಪ್ಪರ್, ಇಎಸ್‌ಎ (ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ) ಜುಪಿಟರ್ ಐಸಿ ಮೂನ್ಸ್ ಎಕ್ಸ್‌ಪ್ಲೋರರ್ [JUICE] ಮಿಷನ್​ಗಳು ನಮ್ಮ ಅನನ್ಯ ಸಂವೇದಕಗಳೊಂದಿಗೆ ಮುಂದಿನ ಕಾರ್ಯಗಳಿಗೆ ಪೂರಕವಾಗಿರುತ್ತವೆ. ಜತೆಗೆ ಮುಂದಿನ ಕಾರ್ಯಾಚರಣೆಗಳನ್ನು ಜೋವಿಯನ್ ವ್ಯವಸ್ಥೆಗೆ ತಯಾರಿಸಲು ಸಹಾಯ ಮಾಡುತ್ತವೆ ಎಂದು ಬೋಲ್ಟನ್ ಹೇಳಿದರು.

ಯುರೋಪಾ ಕ್ಲಿಪ್ಪರ್ ಅನ್ನು ಅಕ್ಟೋಬರ್ 2024 ರಲ್ಲಿ ಉಡಾವಣೆ ಮಾಡಲು ನಿರ್ಧರಿಸಲಾಗಿದ್ದು, ಏಪ್ರಿಲ್ 2030ರಲ್ಲಿ ಮರಳಿ ಬರುವ ನಿರೀಕ್ಷೆಯಿದೆ. 2022 ರಲ್ಲಿ JUICE ಉಡಾವಣೆ ಮಾಡಲು ನಿರ್ಧರಿಸಲಾಗಿದೆ.

ಜುನೊನ ನಾಕ್ಷತ್ರಿಕ ಉಲ್ಲೇಖ ಘಟಕ (ಎಸ್‌ಆರ್‌ಯು) ನ್ಯಾವಿಗೇಷನ್ ಕ್ಯಾಮೆರಾ, ಗುರು ಗ್ರಹದ ಕಕ್ಷೆಯ ಮೇಲೆ ನಿಗಾ ಇಟ್ಟಿರುತ್ತದೆ. ಇದು ಗ್ಯಾನಿಮಿಡ್​ ಬಳಿಯ ಪ್ರದೇಶದ ಹೆಚ್ಚಿನ ಶಕ್ತಿಯ ವಿಕಿರಣ ಪರಿಸರದ ಬಗ್ಗೆ ವಿಶೇಷ ಚಿತ್ರಗಳನ್ನು ಸಂಗ್ರಹಿಸುವ ಮೂಲಕ ಮಾಹಿತಿ ಸಂಗ್ರಹಿಸುತ್ತದೆ.

ಗ್ಯಾನಿಮಿಡ್​​ಅನ್ನು ಪ್ರತಿ ಸೆಕೆಂಡಿಗೆ ಸುಮಾರು 19 ಕಿಲೋ ಮೀಟರ್ ಓಡಿಸಲಿದ್ದೇವೆ ಎಂದು ಜೆಪಿಎಲ್‌ನ ಜುನೋ ಮಿಷನ್ ಮ್ಯಾನೇಜರ್ ಮ್ಯಾಟ್ ಜಾನ್ಸನ್ ಹೇಳಿದರು.

ABOUT THE AUTHOR

...view details