ಕರ್ನಾಟಕ

karnataka

ETV Bharat / international

ಗುರುಗ್ರಹಕ್ಕಿಂತ 3 ಪಟ್ಟು ದೊಡ್ಡದಾದ TOI - 2180 ಬಿ ಗ್ರಹ ಪತ್ತೆ - ನಾಸಾ - NASA's Transiting Exoplanet Survey Satellite TESS

TOI-2180 ಬಿ ಹೆಸರಿನ ಎಕ್ಸೋಪ್ಲಾನೆಟ್ ಅನ್ನು ಖಗೋಳಶಾಸ್ತ್ರಜ್ಞರು ಸಂಶೋಧಿಸಿದ್ದಾರೆ. ಗುರುಗ್ರಹಕ್ಕಿಂತ 3 ಪಟ್ಟು ದೊಡ್ಡದಾಗಿದ್ದು, ವಿಭಿನ್ನ ರೀತಿಯಲ್ಲಿ ಇದೆ ಎಂದು ನಾಸಾ ಹೇಳಿದೆ.

NASA citizen scientist spots Jupiter-like planet
ಗುರುಗ್ರಹಕ್ಕಿಂತ 3 ಪಟ್ಟು ದೊಡ್ಡದಾದ TOI-2180 ಬಿ ಗ್ರಹ ಪತ್ತೆ - ನಾಸಾ

By

Published : Jan 17, 2022, 1:52 PM IST

ವಾಷಿಂಗ್ಟನ್: ನಾಸಾದ ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಸ್ಯಾಟಲೈಟ್ (TESS) ದ ದತ್ತಾಂಶದಲ್ಲಿ TOI-2180 ಬಿ ಎಂದು ಕರೆಯಲ್ಪಡುವ ಎಕ್ಸೋಪ್ಲಾನೆಟ್ ಅನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

TOI-2180 ಬಿ ಗುರುಗ್ರಹಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚು ದೊಡ್ಡದಾಗಿದೆ. ಆದರೆ, ಇದು ದೊಡ್ಡದಾದ ವ್ಯಾಸ ಹೊಂದಿದ್ದು, ಗುರುಗ್ರಹಕ್ಕಿಂತ ವಿಸ್ತಾರವಾಗಿದೆಯಂತೆ. ಈ ಗ್ರಹ ಗುರುಗ್ರಹಕ್ಕಿಂತ ವಿಭಿನ್ನ ರೀತಿಯಲ್ಲಿ ರೂಪುಗೊಂಡಿದೆ ಎಂದು ವಿಜ್ಞಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕಂಪ್ಯೂಟರ್ ಮಾದರಿಗಳ ಮೂಲಕ ತಂಡವು ಹೊಸ ಗ್ರಹವು 105 ಭೂ ದ್ರವ್ಯರಾಶಿಗಳ ಮೌಲ್ಯದ ಹೈಡ್ರೋಜನ್ ಮತ್ತು ಹೀಲಿಯಂಗಿಂತ ಭಾರವಾದ ಅಂಶಗಳನ್ನು ಹೊಂದಿರಬಹುದು ಎಂದು ಅಂದಾಜಿಸಿದ್ದಾರೆ.

ಗುರುಗ್ರಹಕ್ಕಿಂತ ಇದು ಬಹಳಷ್ಟು ದೊಡ್ಡದಾಗಿದೆ ಎಂದು ರಿವರ್‌ಸೈಡ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಮತ್ತು ಅಧ್ಯಯನದ ಪ್ರಮುಖ ಲೇಖಕ ಪಾಲ್ ಡಾಲ್ಬಾ ಹೇಳಿದ್ದಾರೆ. ಗುರುವಿನ ಗಾತ್ರದ ಗ್ರಹವು ಖಗೋಳಶಾಸ್ತ್ರಜ್ಞರಿಗೆ ವಿಶೇಷವಾಗಿ ಕಂಡಿದೆ. ಏಕೆಂದರೆ ಸುಮಾರು 170 ಡಿಗ್ರಿ ಫ್ಯಾರನ್‌ಹೀಟ್‌ನ ಸರಾಸರಿ ತಾಪಮಾನದೊಂದಿಗೆ, ಟಿಒಐ-2180 ಬಿ ಭೂಮಿಯ ಮೇಲಿನ ಕೋಣೆಯ ಉಷ್ಣತೆಗಿಂತ ಬೆಚ್ಚಗಿರುತ್ತದೆ ಎಂದು ಇವರು ಅಂದಾಜಿಸಿದ್ದಾರೆ.

ಗುರು ಮತ್ತು ಶನಿ ಸೇರಿದಂತೆ ನಮ್ಮ ಸೌರವ್ಯೂಹದ ಹೊರಗಿನ ಗ್ರಹಗಳಿಗಿಂತ ಬೆಚ್ಚಗಿರುತ್ತದೆ. ಆದರೆ ಖಗೋಳಶಾಸ್ತ್ರಜ್ಞರು ಇತರ ನಕ್ಷತ್ರಗಳ ಸುತ್ತ ಪರಿಭ್ರಮಿಸುವ ದೈತ್ಯ ಬಹಿರ್ಗ್ರಹಗಳ ರಚನೆಗೆ ಹೋಲಿಸಿದರೆ TOI-2180 b ಅಸಹಜವಾಗಿ ತಂಪಾಗಿದೆ ಎಂದು NASA ಹೇಳಿದೆ.

ಇದನ್ನು ಓದಿ:

For All Latest Updates

TAGGED:

ABOUT THE AUTHOR

...view details