ವಾಷಿಂಗ್ಟನ್( ಅಮೆರಿಕ): ಉತ್ತರ ಕೊರಿಯಾದ ಸರ್ಕಾರದೊಂದಿಗೆ ಸಂಬಂಧ ಹೊಂದಿರುವ ಹ್ಯಾಕರ್‌ಗಳು, ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮ ಮುಂದುವರೆಸಲು ತನ್ನ ಜೊತೆ ಇರುವ ಹಣದ ಕೊರತೆಯಿರುವ ದೇಶಕ್ಕೆ ಧನಸಹಾಯ ನೀಡಲು ಜಾಗತಿಕವಾಗಿ ಎಟಿಎಂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಅಮೆರಿಕದ ಫೆಡರಲ್ ಏಜೆನ್ಸಿಗಳು ಎಚ್ಚರಿಸಿವೆ.
ಉತ್ತರ ಕೊರಿಯಾದ ಒಂದು ಹ್ಯಾಕಿಂಗ್ ತಂಡವು ಮೂರು ಡಜನ್‌ಗಿಂತಲೂ ಹೆಚ್ಚು ದೇಶಗಳಲ್ಲಿ ಸುಮಾರು 2 ಬಿಲಿಯನ್ ಎಟಿಎಂಗಳಿಂದ ಹಣ ಕದಿಯಲು ಪ್ರಯತ್ನಿಸಿದೆ. ಎಟಿಎಂಗಳನ್ನು ಬರಿದಾಗಿಸಿ ಹಾಗೂ ಮೋಸದ ಹಣ ವರ್ಗಾವಣೆಗೆ ಚಾಲನೆ ನೀಡುವ ಮೂಲಕ ಹ್ಯಾಕರ್‌ಗಳು ಜಗತ್ತಿನಾದ್ಯಂತ ಬ್ಯಾಂಕ್ಗಳನ್ನು ದೋಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅಮೆರಿಕ ಮೂಲದ ಪತ್ರಿಕೆಯೊಂದು ವರದಿ ಮಾಡಿದೆ.
ಈ ಅಭಿಯಾನವು ಸ್ಪಿಯರ್ - ಫಿಶಿಂಗ್ ತರಹದ ದಾಳಿಗಳನ್ನು ಒಳಗೊಂಡಿರುತ್ತದೆ. ಅಂದರೆ, ಅದು ಕಂಪ್ಯೂಟರ್‌ಗೆ ವೈರಸ್ಗಳನ್ನು ತಗುಲಿಸಲು ಮೋಸದ ಇಮೇಲ್ ಅನ್ನು ಬಳಸುತ್ತದೆ. ಅಲ್ಲಿ ಪಾಸ್‌ವರ್ಡ್ ಹಾಗೂ ಇತರ ಮಾಹಿತಿಯನ್ನು ಪಡೆದುಕೊಳ್ಳುತ್ತದೆ.