ಸ್ಯಾನ್ ಫ್ರಾನ್ಸಿಸ್ಕೊ: ವಾಹನಗಳ ಸಂಪೂರ್ಣ ಸ್ವಯಂ ಚಾಲಿತ ತಂತ್ರಜ್ಞಾನದ ಅಭಿವೃದ್ಧಿಯ ಬಗ್ಗೆ ಎಲಾನ್ ಮಸ್ಕ್ ಮಾಡಿದ ಹೇಳಿಕೆಯನ್ನು ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಟೆಸ್ಲಾ ತಳ್ಳಿ ಹಾಕಿದ್ದು, ಇಂಥ ಪ್ರತಿಪಾದನೆಗಳು ಎಂಜಿನಿಯರಿಂಗ್ ತಂತ್ರಜ್ಞಾನದ ವಾಸ್ತವತೆಯಿಂದ ದೂರವಾಗಿವೆ ಎಂದು ಹೇಳಿದೆ.
"ಎಲಾನ್ ಅವರ ಟ್ವೀಟ್ ಎಂಜಿನಿಯರಿಂಗ್ ವಾಸ್ತವಿಕತೆಯಿಂದ ದೂರವಾಗಿದೆ. ಟೆಸ್ಲಾ ಈಗ ಲೆವೆಲ್-2 ರಲ್ಲಿದೆ." ಎಂದು ಟೆಸ್ಲಾದ ಅಟೊಪೈಲಟ್ ಸಾಫ್ಟವೇರ್ ವಿಭಾಗದ ಡೈರೆಕ್ಟರ್ ಸಿ.ಜೆ. ಮೂರ್ ಕ್ಯಾಲಿಫೋರ್ನಿಯಾದ ಮೋಟಾರು ವಾಹನ ಕಚೇರಿಗೆ ತಿಳಿಸಿದ್ದಾರೆ.