ಕರ್ನಾಟಕ

karnataka

ETV Bharat / international

'ಸ್ಪರ್ಮ್ ಫ್ರಾಡ್‌'! ಸಂತಾನೋತ್ಪತ್ತಿ ಬಯಸಿ ಬರುವ ಮಹಿಳೆಯರಿಗೆ ತಮ್ಮದೇ ವೀರ್ಯಾಣು ನೀಡುವ ವೈದ್ಯರು! - ಡಿಎನ್​ಎ ಪರೀಕ್ಷೆ

ಅಮೆರಿಕದಲ್ಲಿ ಜನಿಸಿದ ಈವ್ ವಿಲ್ಲೆಗೆ 16 ತುಂಬುವಾಗ ಒಂದು ವಿಚಾರ ಗೊತ್ತಾಗುತ್ತೆ. ತಾನು ಜನಿಸಿದ್ದು ಕೃತಕ ಜೀವಾಣುಗಳ ಮೂಲಕ ಅನ್ನುವ ಸಂಗತಿ ಅದು. ಅಂದ್ರೆ, ಯಾರೋ ನೀಡಿದ ಸ್ಪರ್ಮ್‌ನಿಂದ ಆಕೆ ಜನಿಸಿದ್ದಾಳೆ ಅನ್ನೋದು. ಅಷ್ಟೇ ಆಗಿದ್ದಿದ್ದರೆ ಆಕೆ ಸುಮ್ಮನಿರುತ್ತಿದ್ದಳೋ ಏನೋ..

ಸಾಂದರ್ಭಿಕ ಚಿತ್ರ

By

Published : Aug 27, 2019, 5:47 PM IST

ನ್ಯೂಯಾರ್ಕ್​: ಜಗತ್ತಿನಾದ್ಯಂತ ಲಕ್ಷಾಂತರ ಜನ ಕೃತಕ ಜೀವಾಣುಗಳ ಮೂಲಕ ಜನಿಸಿದ ಸಂಗತಿ ಹೊಸದಲ್ಲ. ಆದ್ರೆ, ಹೀಗೆ ಜನಿಸಿದ ಅದೆಷ್ಟೋ ಮಂದಿಗೆ ವ್ಯದ್ಯರೇ ತಂದೆಯಾಗಿದ್ದಾರೆ. ಈ ಅಚ್ಚರಿಯ ಸಂಗತಿಯನ್ನು ಅಮೆರಿಕ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಅಮೆರಿಕದಲ್ಲಿ ಜನಿಸಿದ ಈವ್ ವಿಲ್ಲೆಗೆ 16 ತುಂಬುವಾಗ ಒಂದು ವಿಚಾರ ಗೊತ್ತಾಗುತ್ತೆ. ತಾನು ಜನಿಸಿದ್ದು ಕೃತಕ ಜೀವಾಣುಗಳ ಮೂಲಕ ಅನ್ನುವ ವಿಚಾರವೇ ಅದು. ಅಂದ್ರೆ, ಯಾರೋ ನೀಡಿದ ಸ್ಪರ್ಮ್‌ನಿಂದ ಆಕೆ ಜನಿಸಿದ್ದಾಳೆ ಅನ್ನೋದು. ಅಷ್ಟೇ ಆಗಿದ್ದಿದ್ದರೆ ಆಕೆ ಸುಮ್ಮನಿರುತ್ತಿದ್ದಳೋ ಏನೋ.. ಆದ್ರೆ ಯಾವಾಗ ಆ ಸಂಗತಿ ಆಕೆಗೆ ತಿಳಿಯಿತೋ ಅವಳ ಮನಸಿನ ಶಾಂತಿ ಕೆಡುತ್ತೆ.

ವಿಲ್ಲೆಯ ತಾಯಿ ಮಾರ್ಗೋ ವಿಲಿಯಮ್ಸ್‌(65) ತನ್ನ ಗಂಡನಿಗೆ ಸಂತಾನೋತ್ಪತ್ತಿ ಶಕ್ತಿ ಇಲ್ಲ ಎಂದರಿತು ಡಾ. ಕಿಮ್ ಮೆಕ್ ಮೋರಿಸ್ ಅವರನ್ನು ಭೇಟಿ ಮಾಡುತ್ತಾರೆ. ಹಾಗೇನೇ ಸ್ಪರ್ಮ್ ಡೋನರ್ ಬಗ್ಗೆ ವಿಚಾರಿಸಿದ್ದಾಳೆ. ಈ ವೈದ್ಯ ಕೂಡಾ ತಾನು ಕ್ಯಾಲಿಫೋರ್ನಿಯಾದಲ್ಲಿ ಒಬ್ಬ ಸ್ಪರ್ಮ್ ಡಾನರ್‌ ಸಂಪರ್ಕಿಸಿದ್ದೇನೆ ಡೋಂಟ್ ವರಿ ಎಂದು ಹೇಳ್ತಾನೆ. ಹೀಗೆ ಸ್ಪರ್ಮ್ ಪಡೆದ ವಿಲಿಯಮ್ಸ್‌ ಮುಂದೊಂದಿನ ಈವ್‌ಗೆ ಜನ್ಮ ಕೂಡ್ತಾಳೆ. ಈಗ ಕ್ಲೈಮಾಕ್ಸ್ ಏನು ಗೊತ್ತೇ?

ಅಮೆರಿಕದಲ್ಲಿ 2017-18 ರಲ್ಲಿ ಲಕ್ಷಾಂತರ ಮಂದಿ ತಮ್ಮ ಜೀನ್ಸ್‌ ಖಚಿತಪಡಿಸಿಕೊಳ್ಳುವುದಕ್ಕೆ ಡಿಎನ್‌ಎ ಪರೀಕ್ಷೆ ಮೊರೆ ಹೋಗ್ತಾರೆ. ಇದೇ ರೀತಿ ವಿಲಿಯಮ್ಸ್‌ ಕೂಡಾ ಈ ತಪಾಸಣೆ ಮೊರೆ ಹೋದ್ರು.

ಫಲಿತಾಂಶ ಏನು ಗೊತ್ತೇ?
ಅಚ್ಚರಿ ಅಂದ್ರೆ, ಆಕೆಯ ಜೈವಿಕ ತಂದೆ ಕ್ಯಾಲಿಫೋರ್ನಿಯಾದ ಡೋನರ್‌ ವ್ಯಕ್ತಿ ಆಗಿರಲಿಲ್ಲ. ಬದಲಿಗೆ ತಾಯಿ ಯಾರ ಬಳಿ ಸ್ಪರ್ಮ್ ಡಾನರ್ ಬಗ್ಗೆ ವಿಚಾರಿಸಿದಳೋ ಆ ವೈದ್ಯ ತನ್ನದೇ ಜೀವಾಣುವನ್ನು ಆಕೆಯ ದೇಹಕ್ಕೆ ಸೇರಿಸಿದ್ದ. ಹಾಗಾಗಿ, ಡಾ. ಮೋರಿಸ್ ಈಕೆಯ ಜೈವಿಕ ತಂದೆಯಾಗಿದ್ದ!
ಯಾವಾಗ ವೈದ್ಯಲೋಕದಲ್ಲಿ ಡಿಎನ್‌ಎ ಟೆಸ್ಟ್‌ ಶುರುವಾಯ್ತೋ ಅಲ್ಲಿಂದ ಇಂಥಾ ಪ್ರಕರಣಗಳು ಬಯಲಾಗೋದಕ್ಕೆ ಆರಂಭವಾದ್ವು. ಆದ್ರೆ, ಸದ್ಯ ಅಮೆರಿಕದ ಕೆಲ ರಾಜ್ಯಗಳಲ್ಲಿ ಇಂಥ ದುಷ್ಟ ಪ್ರಕರಣಗಳನ್ನು ತಡೆಯಲು ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಸಂತಾನೋತ್ಪತ್ತಿ ವೈದ್ಯ 56 ಮಕ್ಕಳಿಗೆ ತಂದೆಯಾಗಿದ್ದ!
ಡಚ್ ಡಾನರ್ ಚೈಲ್ಡ್‌ ಫೌಂಡೇಶನ್ ಪ್ರಕಾರ, ಸಂತಾನೋತ್ಪತ್ತಿ ತಜ್ಞ ಡಾ. ಜಾನ್ ಕರ್ಬಾತ್, 56 ಮಕ್ಕಳಿಗೆ ತಂದೆಯಾಗಿದ್ದನಂತೆ. ಈತನ ಕ್ಲಿನಿಕ್‌ಗೆ ಸಂತಾನೋತ್ಪತ್ತಿಗಾಗಿ ಬರುತ್ತಿದ್ದ ಮಹಿಳೆಯರಿಗೆ ಈತ ತನ್ನದೇ ಸ್ಪರ್ಮ್ ಬಳಸಿ ಚಿಕಿತ್ಸೆ ನೀಡುತ್ತಿದ್ದಂತೆ. ಈ ವಿಚಾರ ತಾಯಿಯಾಗುವ ಹಂಬಲದಿಂದ ಬರುತ್ತಿದ್ದ ಮಹಿಳೆಯರಿಗೆ ಗೊತ್ತೇ ಇರಲಿಲ್ಲ. ಇಂಥ ಪ್ರಕರಣಗಳು ಅಮೆರಿಕದಲ್ಲಿ 'ಫರ್ಟಿಲಿಟಿ ಫ್ರಾಡ್' ಅಂತನೇ ಜನಜನಿತವಾಗಿದೆ. ವಿಚಿತ್ರ ಅಂದ್ರೆ, ಇನ್ನೂ ಕೂಡಾ ಅಮೆರಿಕದ ಅನೇಕ ರಾಜ್ಯಗಳಲ್ಲಿ ಇಂಥ ಅನಿಷ್ಟ ಪದ್ದತಿ ನಿಂತಿಲ್ಲ.

ವೈದ್ಯರುಗಳು ಇಂಥ ಕೃತ್ಯ ಎಸಗುತ್ತಿರುವುದೇಕೆ?
ಕಾರಣ ಸಿಂಪಲ್‌. ಸಂತಾನೋತ್ಪತ್ತಿಗಾಗಿ ವೈದ್ಯರ ಬಳಿಗೆ ಸ್ಪರ್ಮ್ ಡಾನರ್ ಹುಡುಕಿಕೊಂಡು ಬಂದಾಗ ಅವರ ಬಳಿ ತಕ್ಷಣಕ್ಕೆ ಡಾನರ್‌ಗಳು ಸಿಗುವುದಿಲ್ಲ. ಹಾಗಾಗಿ ಇದೊಂದು 'ಅತ್ಯುತ್ತಮ ವ್ಯಾಪಾರ' ಎಂದು ಭಾವಿಸುವ ಅವರು, ತಮ್ಮದೇ ಸ್ಪರ್ಮ್ ನೀಡಿ ದುಡ್ಡು ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲ, ಈ ಮೂಲಕ ರೋಗಿಗಳಿಗೆ ಸಂತಾನ ಭಾಗ್ಯ ಕಲ್ಪಿಸಿ ಸಹಾಯ ಮಾಡುತ್ತಿರುವುದಾಗಿಯೂ ವೈದ್ಯರುಗಳು ತನಿಖೆ ವೇಳೆ ಹೇಳುತ್ತಿದ್ದಾರೆ. ಅನೇಕ ವೈದ್ಯರ ಪ್ರಕಾರ, ಮಹಿಳೆ ಒಮ್ಮೆ ಗರ್ಭವತಿಯಾದ್ರೆ, ಆಕೆಗೆ ಯಾವ ಸ್ಪರ್ಮ್ ನೀಡಲಾಗಿದೆ ಅನ್ನೋ ವಿಚಾರ ಗೊತ್ತಾಗದು ಎಂದು ಅವರೆಲ್ಲಾ ಭಾವಿಸಿದ್ದರಂತೆ. ಹೀಗೆ ಅನೇಕ ತಾಯಂದಿರು ಈಗಲೂ ಇಂಥ ಪ್ರಕರಣಗಳಿಗೆ ಆಘಾತಕ್ಕೊಳಗಾಗಿ ಹಿಂಸೆ ಅನುಭವಿಸುತ್ತಿದ್ದರೆ, ಇಂಥ ಪ್ರಕರಣಗಳು ಆಗಿಂದಾಗ್ಗೆ ಬೆಳಕಿಗೆ ಬರ್ತಾನೆ ಇವೆ.

ABOUT THE AUTHOR

...view details