ನ್ಯೂಯಾರ್ಕ್:ಮಿತಿಮೀರಿ ಮಾಹಿತಿ ತಿಳಿದುಕೊಳ್ಳುವುದು ಯಾವಾಗಲೂ ಒಳ್ಳೆಯದಲ್ಲ. ಹೆಚ್ಚು- ಹೆಚ್ಚು ಮಾಹಿತಿಯನ್ನು ಕಲೆಹಾಕಿ ತಿಳಿದುಕೊಂಡ ಬಹುತೇಕರು ಕೆಲ ಸಂದರ್ಭಗಳಲ್ಲಿ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಅದೇ ಅತ್ಯಧಿಕ ಮಾಹಿತಿ ಕಾರಣವಾಗಬಹುದು ಎಂದು ಸಂಶೋಧಕರು ಅಧ್ಯಯನದ ಮೂಲಕ ಕಂಡುಕೊಂಡಿದ್ದಾರೆ.
ಈ ಸಂಶೋಧನಾ ಅಧ್ಯಯನವು 'ಕಾಗ್ನಿಟಿವ್ ರಿಸರ್ಚ್: ಪ್ರಿನ್ಸಿಪಲ್ಸ್ ಆ್ಯಂಡ್ ಇಂಪ್ಲಿಕೇಷನ್ಸ್' ಜರ್ನಲ್ನಲ್ಲಿ ಪ್ರಕಟವಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಮೆಷಿನ್ ಲರ್ನಿಂಗ್ (ಎಂಎಲ್) ಕ್ರಮವಳಿಗಳಿಂದ ಹೊರತೆಗೆಯಲಾದ ಡೇಟಾ ಅಂಶಗಳನ್ನು ನಾವು ಹೇಗೆ ಬಳಸುತ್ತೇವೆ ಮತ್ತು ಆರೋಗ್ಯ ವೃತ್ತಿಪರರು ಮತ್ತು ಹಣಕಾಸು ಸಲಹೆಗಾರರು ಇದನ್ನು ಹೇಗೆ ಪ್ರಸ್ತುತಪಡಿಸುತ್ತಾರೆ ಎಂಬ ಕಲ್ಪನೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ.
'ಮಾಹಿತಿಯು ಉಪಯುಕ್ತವಾಗಲು ನಿಖರವಾಗಿರುವುದು ಸಾಕಾಗುವುದಿಲ್ಲ' ಎಂದು ಅಮೆರಿಕದ ನ್ಯೂಜೆರ್ಸಿಯ ಸ್ಟೀವನ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಸಹಾಯಕ ಪ್ರಾಧ್ಯಾಪಕ ಸಮಂತಾ ಕ್ಲೀನ್ಬರ್ಗ್ ಹೇಳಿದ್ದಾರೆ.