ವಾಷಿಂಗ್ಟನ್(ಅಮೆರಿಕ):ಅಫ್ಘಾನಿಸ್ತಾನವನ್ನು ತಾಲಿಬಾನ್ ಆಕ್ರಮಿಸಿಕೊಂಡ ನಂತರ ಸಾಕಷ್ಟು ಮಂದಿ ಅಮೆರಿಕಕ್ಕೆ ಸ್ಥಳಾಂತರ ಮಾಡಲ್ಪಟ್ಟಿದ್ದಾರೆ. ಮುಂದಿನ ವಾರ ಇನ್ನೂ ಹಲವು ರಾಷ್ಟ್ರಗಳಿಂದ ಸಾವಿರಾರು ಮಂದಿ ಬರುವ ನಿರೀಕ್ಷೆಯಿದೆ ಎಂದು ಅಮೆರಿಕ ಸೇನೆ ಹೇಳಿಕೊಂಡಿದೆ.
ವಿದೇಶಗಳಲ್ಲಿರುವ ಸುಮಾರು 14 ಸಾವಿರ ಮಂದಿ ಆಫ್ಘನ್ನರು ಅಮೆರಿಕಕ್ಕೆ ಬರುವ ಸಾಧ್ಯತೆ ಇದೆ. ಈಗಾಗಲೇ ಅಮೆರಿಕದ 8 ಮಿಲಿಟರಿ ಪ್ರದೇಶಗಳಲ್ಲಿ 53 ಸಾವಿರ ಮಂದಿಯಿದ್ದು, ವಿದೇಶಗಳಲ್ಲಿ ಇರುವವರೂ ಬಂದ ನಂತರ ಅವರ ಸಂಖ್ಯೆ 64 ಸಾವಿರ ಆಗುವ ನಿರೀಕ್ಷೆಯಿದೆ. ಮುಂದಿನ ವಾರ ವಿಮಾನಗಳು ಆರಂಭವಾಗಬಹುದು ಎಂದು ಅಮೆರಿಕ ಉತ್ತರ ಕಮಾಂಡ್ನ ಮುಖ್ಯ ಜನರಲ್ ವಾನ್ಹೆರ್ಕ್ ಹೇಳಿದ್ದಾರೆ.
ಸೇನಾ ನೆಲೆಗಳಲ್ಲಿ ಏಕೆ..?
ಅಮೆರಿಕಕ್ಕೆ ಸ್ಥಳಾಂತರ ಮಾಡಲ್ಪಟ್ಟವರನ್ನು ಮೊದಲಿಗೆ ಸೇನೆ ಸ್ಥಾಪಿಸಿರುವ ನೆಲೆಗಳಿಗೆ ಕರೆತರಲಾಗುತ್ತದೆ. ಅಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ಜೊತೆಗೆ ಹಲವು ಪರೀಕ್ಷೆಗಳನ್ನು ಮಾಡಿ ನಂತರ ನಾಗರಿಕ ಸ್ಥಳಗಳಿಗೆ ಕಳುಹಿಸಲಾಗುತ್ತದೆ.
ಈಗ ಸದ್ಯಕ್ಕೆ ಅಪ್ಘಾನಿಸ್ತಾನದಿಂದ ಸ್ಥಳಾಂತರ ಮಾಡಲ್ಪಟ್ಟ ಸುಮಾರು ನಾಲ್ಕು ಸಾವಿರ ಮಂದಿಯ ವೈದ್ಯಕೀಯ ಪರೀಕ್ಷೆಗಳು ಪೂರ್ಣಗೊಂಡಿವೆ. ಇದರಲ್ಲಿ 2,400 ಮಂದಿ ಆಫ್ಘನ್ನರೂ ಇದ್ದಾರೆ. ಅವರನ್ನು ಮನೆಗಳಿಗೆ ಕಳುಹಿಸಲಾಗಿದೆ ಎಂದು ವಾನ್ಹೆರ್ಕ್ ಮಾಹಿತಿ ನೀಡಿದ್ದಾರೆ.