ಕರ್ನಾಟಕ

karnataka

ETV Bharat / international

ಕೋವಿಡ್‌ -19ಗೆ ಹೊಸ ಔಷಧ ಸಂಶೋಧನೆ: ಸೋಂಕಿತರ ಮೇಲೆ ಪ್ರಾಯೋಗಿಕ ಪರೀಕ್ಷೆಗೆ ಸಿದ್ಧ - ಕೋವಿಡ್‌-19ಗೆ ಲಸಿಕೆ

ಕೋವಿಡ್‌-19ಗೆ ಮಾಂಟೆಫಿಯರ್ ಹೆಲ್ತ್‌ ಸಿಸ್ಟಂ ಮತ್ತು ಅಲ್ಬರ್ಟ್‌ ಐನ್‌ಸ್ಟೀನ್‌‌ ಮೆಡಿಸಿನ್‌ ಕಾಲೇಜು ಹೊಸ ಔಷಧವನ್ನು ಸಂಶೋಧಿಸಿದ್ದು, ಸೋಂಕಿತರ ಮೇಲೆ ಪ್ರಾಯೋಗಿಕ ಪರೀಕ್ಷೆಗೆ ಮುಂದಾಗಿದೆ.

montefiore-and-einstein-test-a-new-drug-combination-to-conquer-covid-19
ಕೋವಿಡ್‌-19ಗೆ ಹೊಸ ಔಷಧ ಸಂಶೋಧನೆ; ಸೋಂಕಿತರ ಮೇಲೆ ಪ್ರಾಯೋಗಿಕ ಪರೀಕ್ಷೆಗೆ ರೆಡಿ

By

Published : Jun 1, 2020, 12:52 PM IST

ಹೈದರಾಬಾದ್:ನ್ಯೂಯಾರ್ಕ್‌ನ ಮಾಂಟೆಫಿಯರ್ ಹೆಲ್ತ್‌ ಸಿಸ್ಟಂ ಮತ್ತು ಅಲ್ಬರ್ಟ್‌ ಐನ್‌ಸ್ಟೀನ್‌‌ ಮೆಡಿಸಿನ್‌ ಕಾಲೇಜು ಕೋವಿಡ್‌-19ಗಾಗಿ ಹೊಸ ಔಷಧವನ್ನು ಸಂಶೋಧಿಸಿದ್ದು, ಇದರ ಮತ್ತೊಂದು ಘಟ್ಟಕ್ಕೆ ಬಂದು ತಲುಪಿದೆ. ಸೋಂಕಿತರ ಮೇಲೆ ಪ್ರಾಯೋಗಿಕ ಪರೀಕ್ಷೆಗೆ ಮುಂದಾಗಿದೆ. ಇದನ್ನು ಅಡಾಪ್ಟೀವ್​​​‌‌ ಕೋವಿಡ್‌-19 ಟ್ರೀಟ್ಮೆಂಟ್‌‌ ಟ್ರಯಲ್‌ (ACTT) ಎಂದು ಕರೆಯಲಾಗುತ್ತಿದೆ.

ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಒಂದು ಭಾಗವಾಗಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌‌ ಅಲರ್ಜಿ ಮತ್ತು ಇನ್‌ಫೆಕ್ಷನ್‌ ಡಿಸೀಸ್​​​‌ (NIAID) ಸಹಯೋಗದಲ್ಲಿ ಈ ಪ್ರಯೋಗಕ್ಕೆ ಮುಂದಾಗಿದೆ.

ಕಳೆದ ಮಾರ್ಚ್‌ನಲ್ಲಿ ಈ ಔಷಧೀಯ ಬಹು ಉಪಯೋಗದ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು, ನ್ಯೂಯಾರ್ಕ್‌ನ ಮಾಂಟೆಫಿಯರ್ ಮೊದಲ ನಗರವಾಗಿದೆ. ಕೋವಿಡ್‌-19ಗೆ ರೆಮ್ಡೆಸಿವಿರ್ ಔಷಧ ಮೌಲ್ಯಮಾಪನವೂ ನಡೆಯುತ್ತಿದೆ. ರೋಗ ನಿರೋಧಕ ಶಕ್ತಿಗಾಗಿ ಈ ಔಷಧ ನೆರವಾಗಲಿದೆ ಎನ್ನಲಾಗಿದೆ.

ಇದರ ಪ್ರಾಯೋಗಿಕ ಪರೀಕ್ಷೆಯ ಪ್ರಾಥಮಿಕ ವರದಿಯನ್ನ ಕಳೆದ ಮಾರ್ಚ್‌ನಲ್ಲಿ ನೀಡಲಾಗಿತ್ತು. ಕಳೆದ ಶುಕ್ರವಾರಷ್ಟೇ ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸನ್‌ನಲ್ಲಿ ಇನ್ನದನ್ನು ಪ್ರಕಟಿಸಿತ್ತು. ಕೋವಿಡ್‌-19 ಸೋಂಕಿತರಿಗೆ ರೆಮ್ಡೆಸಿವಿರ್ ನೀಡಲಾಗುತ್ತಿದೆ. ಸರಿ ಸುಮಾರು 15 ದಿನಗಳ ಪೈಕಿ 11 ದಿನದಲ್ಲಿ ಸೋಂಕಿತರು ಗುಣಮುಖರಾಗುತ್ತಿದ್ದಾರೆ.

ರೆಮ್ಡೆಸಿವಿರ್ ವೈದ್ಯಕೀಯ ಪ್ರಾಯೋಗಿಕ ಪರೀಕ್ಷೆಯಲ್ಲಿ 1,063 ಮಂದಿ ಭಾಗವಹಿಸಿದ್ದು, ಇದರಲ್ಲಿನ ಶೇಕಡಾ 10 ರಷ್ಟು ಮಂದಿ ಮಾಂಟೆಫಿಯೊರೆ ಮತ್ತು ಐನ್​​ಸ್ಟಿನ್​​​‌‌ ಮೆಡಿಸಿನ್‌ ಕಾಲೇಜಿನವರಾಗಿದ್ದಾರೆ. ಪ್ಲೇಸ್‌ಬೊ ಸಂಸ್ಥೆಯ ಸಹಯೋಗದಲ್ಲಿ ಔಷಧದ ಬಗ್ಗೆ ಮತ್ತಷ್ಟು ಅಧ್ಯಯನಗಳನ್ನು ಆರಂಭಿಸಲಾಗಿದೆ.

ಕೋವಿಡ್‌-19ಗೆ ಪರಿಣಾಮಕಾರಿಯಾಗಲು ಸೋಂಕಿತನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕಿದೆ. ಇದಕ್ಕೆ 10,63 ಮಂದಿ ರೆಮ್ಡೆಸಿವಿರ್ ಸಹಕಾರಿಯಾಗಲಿದೆ ಎಂದು ಮೆಡಿಸನ್‌ ಅಂಡ್‌ ಕ್ಲಿನಿಕಲ್‌ನ ವ್ಯವಸ್ಥಾಪಕ ನಿರ್ದೇಶಕ ಜಿಗ್‌ಮನ್‌ ತಿಳಿಸಿದ್ದಾರೆ.

ABOUT THE AUTHOR

...view details