ಕರ್ನಾಟಕ

karnataka

ETV Bharat / international

ಹೌಡಿ ಮೋದಿ: ಟ್ರಂಪ್ ಭಾಗಿ ಅಭೂತಪೂರ್ವ ಕ್ಷಣವೆಂದ ಮೋದಿ..! - ಅಮೆರಿಕದ ಹ್ಯೂಸ್ಟನ್​ ನಗರದಲ್ಲಿ ಜರುಗಿದ ಹೌಡಿ ಮೋದಿ ಕಾರ್ಯಕ್ರಮ

ಟ್ರಂಪ್ ಭಾರತದ ಅತ್ಯಂತ ನಿಕಟ ಮಿತ್ರನಾಗಿದ್ದು, ಹೌಡಿ ಮೋದಿಯಲ್ಲಿ ಪಾಲ್ಗೊಂಡಿದ್ದು, ಭಾರತೀಯರ ಹಾಗೂ ಅನಿವಾಸಿ ಭಾರತೀಯರ ಮೇಲಿನ ಅಭಿಮಾನವನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್​ ಮೂಲಕ ಹೇಳಿಕೊಂಡಿದ್ದಾರೆ.

ಹೌಡಿ ಮೋದಿ

By

Published : Sep 23, 2019, 11:54 AM IST

ಹ್ಯೂಸ್ಟನ್​:ಅಮೆರಿಕದ ಹ್ಯೂಸ್ಟನ್​ ನಗರದಲ್ಲಿ ಜರುಗಿದ ಹೌಡಿ ಮೋದಿ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯ ಕಂಡಿದೆ. ಸಮಾರಂಭದಲ್ಲಿ ಟ್ರಂಪ್ ಪಾಲ್ಗೊಳ್ಳುವಿಕೆ ಕುರಿತಂತೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

ಕಾಶ್ಮೀರದ ಬಗ್ಗೆ ಮಾತನಾಡದ ಟ್ರಂಪ್​​​... ಆದ್ರೂ ಈ ಹೇಳಿಕೆಯಿಂದ ಪಾಕ್ ಆಗುತ್ತಾ ಗಪ್​ಚುಪ್​​!?

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಆತ್ಮೀಯ ಟ್ರಂಪ್ ಭಾಗವಹಿಸುವಿಕೆಯಿಂದ ಸಮಾರಂಭದ ರಂಗು ಮತ್ತಷ್ಟು ಹೆಚ್ಚಿತ್ತು. ಭಾರತ - ಅಮೆರಿಕ ಬಾಂಧವ್ಯ ವೃದ್ಧಿ ನಿಟ್ಟಿನಲ್ಲಿ ಇದು ಮಹತ್ವದ ಸಂದರ್ಭವಾಗಿತ್ತು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಟ್ರಂಪ್ ಭಾರತದ ಅತ್ಯಂತ ನಿಕಟ ಮಿತ್ರನಾಗಿದ್ದು, ಹೌಡಿ ಮೋದಿಯಲ್ಲಿ ಪಾಲ್ಗೊಂಡಿದ್ದು, ಭಾರತೀಯರ ಹಾಗೂ ಅನಿವಾಸಿ ಭಾರತೀಯರ ಮೇಲಿನ ಅಭಿಮಾನವನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್​ ಮೂಲಕ ಹೇಳಿಕೊಂಡಿದ್ದಾರೆ.

ಭಾರತದಲ್ಲಿ ಎಲ್ಲವೂ ಬದಲಾಗುತ್ತಿದೆ ಎಂದ ಪ್ರಧಾನಿ ಮೋದಿ.... 'ಹೌಡಿ ಮೋದಿ'ಯಲ್ಲಿ ಪಾಕ್​​ ವಿರುದ್ಧ ಕಿಡಿ!

ಭಾನುವಾರ ನಡೆ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಸುಮಾರು ಐವತ್ತು ಸಾವಿರ ಅನಿವಾಸಿ ಭಾರತೀಯರು ಹಾಗೂ ಅಮೆರಿಕನ್ನರು ಭಾಗವಹಿಸಿದ್ದರು. ಸಮಾರಂಭದಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ಮೋದಿ ಭಾಷಣದ ಮೂಲಕ ಉಭಯ ದೇಶಗಳ ಸಂಬಂಧವನ್ನು ಜಗತ್ತಿನ ಮುಂದೆ ತೆರೆದಿಟ್ಟರು.

ABOUT THE AUTHOR

...view details