ಕರ್ನಾಟಕ

karnataka

ETV Bharat / international

12 ವರ್ಷದ ಮಕ್ಕಳಿಗೆ ಕೋವಿಡ್​ ಲಸಿಕೆ ಸಹಕಾರಿ ಎಂದ ಮೊಡೆರ್ನಾ - ಕೋವಿಡ್​ -19 ಲಸಿಕೆ

ಮೊಡೆರ್ನಾ 12 ರಿಂದ 17 ವರ್ಷದ ಸುಮಾರು 3,700 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿದೆ. ಆ ಪ್ರಕಾರ ಮೊಡೆರ್ನಾದ ಈ ಲಸಿಕೆ ವಯಸ್ಕರಲ್ಲಿರುವಂತೆ ಲಸಿಕೆ ಪಡೆದಾಗ ಕೈ ನೋವು, ತಲೆನೋವು ಮತ್ತು ಆಯಾಸದಂತಹ ತಾತ್ಕಾಲಿಕ ಅಡ್ಡಪರಿಣಾಮಗಳನ್ನು ಉಂಟುಮಾಡಿದೆ.

Moderna
Moderna

By

Published : May 25, 2021, 10:50 PM IST

ವಾಷಿಂಗ್ಟನ್​:ಮೊಡೆರ್ನಾ ಮಂಗಳವಾರ ತನ್ನ ಕೋವಿಡ್​ -19 ಲಸಿಕೆಯನ್ನು 12 ವರ್ಷ ವಯಸ್ಸಿನ ಮಕ್ಕಳನ್ನು ರಕ್ಷಿಸುತ್ತದೆ ಎಂದು ಹೇಳಿದೆ.

ಮೊಡೆರ್ನಾ 12 ರಿಂದ 17 ವರ್ಷದ ಸುಮಾರು 3,700 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿದೆ. ಆ ಪ್ರಕಾರ ಮೊಡೆರ್ನಾದ ಈ ಲಸಿಕೆ ವಯಸ್ಕರಲ್ಲಿರುವಂತೆ ಲಸಿಕೆ ಪಡೆದಾಗ ಕೈ ನೋವು, ತಲೆನೋವು ಮತ್ತು ಆಯಾಸದಂತಹ ತಾತ್ಕಾಲಿಕ ಅಡ್ಡಪರಿಣಾಮಗಳನ್ನು ಉಂಟು ಮಾಡಿದೆ.

ಜಾಗತಿಕ ಲಸಿಕೆ ಸರಬರಾಜು ಇನ್ನೂ ಕುಂಟುತ್ತಾ ಸಾಗಿರುವುದರಿಂದ, ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಅನ್ವೇಷಣೆಯಲ್ಲಿ ವಿಶ್ವದ ಬಹುಪಾಲು ವಯಸ್ಕರಿಗೆ ಲಸಿಕೆ ನೀಡಲು ಇನ್ನೂ ಹರಸಾಹಸ ಪಡುತ್ತಿದ್ದಾರೆ. ಆದರೆ, ಈ ತಿಂಗಳ ಆರಂಭದಲ್ಲಿ, ಯುಎಸ್ ಮತ್ತು ಕೆನಡಾ ಫೈಝರ್​ ಮತ್ತು ಬಯೋಟೆಕ್ ತಯಾರಿಸಿದ ಮತ್ತೊಂದು ಲಸಿಕೆಯನ್ನು 12 ನೇ ವಯಸ್ಸಿ ಮಕ್ಕಳಿಗೆ ಬಳಸಲು ಅನುಮತಿ ನೀಡಿದೆ.

ಮೊಡೆರ್ನಾ ಮುಂದಿನ ಸಾಲಿನಲ್ಲಿ ತನ್ನ ಹದಿಹರೆಯದ ಮಕ್ಕಳ ಕುರಿತಾದ ಡೇಟಾವನ್ನು ಅಮೆರಿಕ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮತ್ತು ಇತರ ಜಾಗತಿಕ ನಿಯಂತ್ರಕರಿಗೆ ಸಲ್ಲಿಸಲಿದೆ ಎಂದು ಹೇಳಿದೆ. ಪತ್ರಿಕಾ ಪ್ರಕಟಣೆಯಲ್ಲಿ, ಲಸಿಕೆ ಮೊದಲ ಡೋಸ್ ನಂತರ ಎರಡು ವಾರಗಳ ನಂತರ ಶೇ 93ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಂಪನಿ ಹೇಳಿದೆ.

ಕೋವಿಡ್​ನಿಂದ ಮಕ್ಕಳು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ವಯಸ್ಕರಿಗಿಂತ ಕಡಿಮೆ ಇದ್ದರೂ, ರಾಷ್ಟ್ರದ ಸುಮಾರು ಶೇ 14ರಷ್ಟು ಮಕ್ಕಳಿಗೆ ಕೊರೊನಾ ವೈರಸ್ ಬಾಧಿಸುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುಂಚಿತವಾಗಿ ಸಾಧ್ಯವಾದಷ್ಟು ಮಕ್ಕಳಿಗೆ ಲಸಿಕೆ ಹಾಕುವ ಯೋಜನೆ ಹಾಕಿಕೊಳ್ಳಲಾಗಿದೆ.

ಈಗಾಗಲೇ ಫೈಝರ್​ ಮತ್ತು ಮೊಡೆರ್ನಾ 11 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮತ್ತು 6 ತಿಂಗಳ ವಯಸ್ಸಿನ ಶಿಶುಗಳಲ್ಲಿ ಪರೀಕ್ಷೆಯನ್ನು ಪ್ರಾರಂಭಿಸಿದ್ದಾರೆ. ಈ ಪರೀಕ್ಷೆಯು ಹೆಚ್ಚು ಸಂಕೀರ್ಣವಾಗಿದೆ.

ABOUT THE AUTHOR

...view details