ಕರ್ನಾಟಕ

karnataka

ETV Bharat / international

ತಿಂಗಳಾಂತ್ಯಕ್ಕೆ ಕೋವಿಡ್‌ಗೆ ಮಾಡೆರ್ನಾ ವ್ಯಾಕ್ಸಿನ್‌? - ಲಸಿಕೆಯ ಪರಿಣಾಮಕಾರಿ ಫಲಿತಾಂಶ

ಮಾಡೆರ್ನಾ ಅಭಿವೃದ್ಧಿ ಪಡಿಸಿರುವ ವ್ಯಾಕ್ಸಿನ್ ಕೋವಿಡ್‌-19ಗೆ ಪರಿಣಾಕಾರಿಯಾಗಲಿದೆಯೇ ಎಂಬುದು ಈ ತಿಂಗಳ ಅಂತ್ಯದ ವೇಳೆಗೆ ತಿಳಿಯಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.

moderna-expecting-to-announce-results-of-covid-19-vaccine-by-month-end
ತಿಂಗಳ‌ ಅಂತ್ಯದ ವೇಳೆ ಕೋವಿಡ್‌ಗೆ ಮಾಡೆರ್ನಾ ವ್ಯಾಕ್ಸಿನ್‌?

By

Published : Nov 12, 2020, 12:51 PM IST

ವಾಷಿಂಗ್ಟನ್‌:ಅಮೆರಿಕದ ಜೈವಿಕತಂತ್ರಜ್ಞಾನ ಸಂಸ್ಥೆ ಮಾಡೆರ್ನಾ ಕೋವಿಡ್‌-19 ವ್ಯಾಕ್ಸಿನ್‌ ವೈದ್ಯಕೀಯ ಪ್ರಯೋಗ ಮುಗಿಸಿದ್ದು, ಈ ತಿಂಗಳ ಅಂತ್ಯದ ವೇಳೆಗೆ ವ್ಯಾಕ್ಸಿನ್‌ ಫಲಿತಾಂಶವನ್ನು ಪ್ರಕಟಿಸುವುದಾಗಿ ತಿಳಿಸಿದೆ.

ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಸಂಸ್ಥೆ, ಈಗಾಗಲೇ 30 ಸಾವಿರ ಸ್ವಯಂ ಸೇವಕರ ಮೇಲೆ ಲಸಿಕೆಯ ವೈದ್ಯಕೀಯ ಪ್ರಯೋಗ ಮಾಡಲಾಗಿದೆ. ಇದರಲ್ಲಿ ಅರ್ಧದಷ್ಟು ಮಂದಿ ವ್ಯಾಕ್ಸಿನ್‌ ಬಳಸಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಈ ಪ್ರಯೋಗ ನಡೆಸಲಾಗಿದ್ದು, ಯಾವುದೇ ವ್ಯತಿರಿಕ್ತ ಪರಿಣಾಮವಾಗಿಲ್ಲ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ರೋಗಿಗಳು ಅಥವಾ ಕೋವಿಡ್‌-19 ಸೋಂಕಿತರಿಗೆ ಈ ಲಸಿಕೆಯನ್ನು ಬಳಸುವ ಮುನ್ನ 53 ಮಂದಿ ಅಧ್ಯಯ ನಿರತ ಸ್ವಯಂ ಸೇವಕರ ಮೇಲೆ ಪ್ರಯೋಗಿಸಬೇಕು ಎಂದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಮಂಡಳಿ (ಎಫ್‌ಡಿಎ) ಪರಿಗಣಿಸಲಿದೆ.

ಮಾಡೆರ್ನಾ ಸಂಸ್ಥೆ ಕಳೆದ ಬುಧವಾರವಷ್ಟೇ 53 ಮಂದಿಯ ಮೇಲೆ ವೈದ್ಯಕೀಯ ಪ್ರಯೋಗ ನಡೆಸಿದ್ದು, ಆದರೆ ಇದರ ಫಲಿತಾಂಶ ಇನ್ನೂ ಲಭ್ಯವಾಗಿಲ್ಲ. ಇದರ ಅಂಕಿ-ಅಂಶಗಳನ್ನು ಸಂಗ್ರಹಿಸಿ ತಜ್ಞರಿಂದ ಕೂಡಿದ ಸುರಕ್ಷಿತ ನಿಗಾ ಮಂಡಳಿಗೆ ಕಳುಹಿಸಿದೆ.

ಒಂದು ವೇಳೆ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದರೆ ಕೊರೊನಾ ವೈರಸ್‌ ವಿರುದ್ಧ ವ್ಯಾಕ್ಸಿನ್ ಪರಿಣಾಮಕಾರಿಯಾಗಲಿದೆ.

ABOUT THE AUTHOR

...view details