ಕರ್ನಾಟಕ

karnataka

ETV Bharat / international

ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್​ ಪತನ: ಮೂವರ ದುರ್ಮರಣ - ಹೆಲಿಕಾಪ್ಟರ್ ದುರಂತದಲ್ಲಿ ಮೂವರ ಸಾವು

ಸೇನಾ ಹೆಲಿಕಾಪ್ಟರ್ ಪತನವಾಗಿ ಮೂವರು ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಅಮೆರಿಕದ ನ್ಯೂಯಾರ್ಕ್​​ ನಗರದಲ್ಲಿ ನಡೆದಿದೆ.

Military helicopter crash
ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್​ ಪತನ

By

Published : Jan 21, 2021, 4:49 PM IST

ಮೆಂಡನ್ :ಸೇನಾ ತರಬೇತಿಗಾಗಿ ಬಳಸಲಾಗುತ್ತಿದ್ದ ಹೆಲಿಕಾಪ್ಟರ್ ಪತನವಾಗಿ ಅಮೆರಿಕ ನ್ಯಾಷನಲ್ ಗಾರ್ಡ್​ನ ಮೂವರು ಸದಸ್ಯರು ಸಾವನ್ನಪ್ಪಿರುವ ಘಟನೆ ಪಶ್ಚಿಮ ನ್ಯೂಯಾರ್ಕ್​ ನಗರದಲ್ಲಿ ಇಂದು ನಡೆದಿದೆ.

ನ್ಯೂಯಾರ್ಕ್​ನ ಮೆಂಡನ್ ಬಳಿಯಿರುವ ಕೃಷಿ ಭೂಮಿಯೊಂದರಲ್ಲಿ ಹೆಲಿಕಾಪ್ಟರ್ ಪತನವಾಗಿದ್ದು, ಆ ಹೆಲಿಕಾಪ್ಟರ್ ಅನ್ನು ಯುಹೆಚ್​-60 ಬ್ಲ್ಯಾಕ್ ಹಾಕ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೀಜಿಂಗ್ ಗಣಿ ಸ್ಫೋಟ; ಓರ್ವ ಕಾರ್ಮಿಕ ಸಾವು, 10 ಜನ ನಾಪತ್ತೆ

ಹೆಲಿಕಾಪ್ಟರ್ ಪತನದ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಫೆಡರಲ್ ಎವಿಯೇಷನ್ ಅಡ್ಮಿನಿಸ್ಟ್ರೇಷನ್ ಸ್ಪಷ್ಟನೆ ನೀಡಿದೆ. ಇದರೊಂದಿಗೆ ಸ್ಥಳೀಯ ಮಾಧ್ಯಮಗಳಲ್ಲಿ ಹೆಲಿಕಾಪ್ಟರ್​ನ ಬಿಡಿಭಾಗಗಳು ಬೆಂಕಿಗಾಹುತಿಯಾಗುತ್ತಿರುವ ದೃಶ್ಯಗಳು ಹರಿದಾಡಿವೆ.

ಹೆಲಿಕಾಪ್ಟರ್ ಪತನದ ವೇಳೆ ಮೃತಪಟ್ಟ ಸಿಬ್ಬಂದಿಗೆ ನ್ಯೂಯಾರ್ಕ್​ನ ಮಿಲಿಟರಿ ಮತ್ತು ನೌಕಾ ವ್ಯವಹಾರಗಳ ಅಧಿಕಾರಿ ಎರಿಕ್ ಡರ್ ಸಂತಾಪ ಸೂಚಿಸಿದ್ದು, ಹೆಲಿಕಾಪ್ಟರ್ ಪತನದ ವೇಳೆ ಯಾರೂ ಬದುಕುಳಿದಿಲ್ಲ ಎಂಬ ತಿಳಿಸಿದ್ದಾರೆ.

ABOUT THE AUTHOR

...view details