ಕರ್ನಾಟಕ

karnataka

ETV Bharat / international

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಪುತ್ರ 26 ವರ್ಷದ ಝೈನ್ ನಾದೆಲ್ಲಾ ನಿಧನ - ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಪುತ್ರ ಝೈನ್ ನಾದೆಲ್ಲಾ ನಿಧನ

ವಿಶೇಷಚೇತನರಾಗಿದ್ದ ಝೈನ್‌ಗೆ ಕಳೆದ ವರ್ಷ ಸಿಯಾಟಲ್ ಚಿಲ್ಡ್ರನ್ಸ್ ಸೆಂಟರ್ ಫಾರ್ ಇಂಟಿಗ್ರೇಟಿವ್ ಬ್ರೈನ್ ರಿಸರ್ಚ್‌ನ ಭಾಗವಾಗಿ ಪೀಡಿಯಾಟ್ರಿಕ್ ನ್ಯೂರೋಸೈನ್ಸ್‌ನಲ್ಲಿ ಎಂಡೋವ್ಡ್ ಚೇರ್ ಅನ್ನು ಸ್ಥಾಪಿಸಲಾಗಿತ್ತು..

Microsoft CEO Satya Nadella's Son, Zain, Dies At 26
ಝೈನ್ ನಾದೆಲ್ಲಾ ನಿಧನ

By

Published : Mar 1, 2022, 1:22 PM IST

Updated : Mar 1, 2022, 1:46 PM IST

ವಾಷಿಂಗ್ಟನ್‌ :ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರ ಪುತ್ರ 26 ವರ್ಷದ ಝೈನ್ ನಾದೆಲ್ಲಾ ನಿಧನ ಹೊಂದಿದ್ದಾರೆ ಎಂದು ಮೈಕ್ರೋಸಾಫ್ಟ್ ಕಾರ್ಪೊರೇಷನ್ ಮಾಹಿತಿ ನೀಡಿದೆ. ಮೆದುಳಿನ ನರಕ್ಕೆ ಸಂಬಂಧಿಸಿದ ಸೆರೆಬ್ರಲ್ ಪಾಲ್ಸಿಯೊಂದಿಗೆ (cerebral palsy) ಜನಿಸಿದ್ದರು.

ಝೈನ್ ನಾದೆಲ್ಲಾ ನಿಧನ (ಸಂಗ್ರಹ ಚಿತ್ರ)

2014ರಲ್ಲಿ ಮೈಕ್ರೋಸಾಫ್ಟ್ ಸಿಇಒ ಆಗಿ ನೇಮಕರಾದ ಸಂದರ್ಭದಿಂದಲೂ ಸತ್ಯ ನಾದೆಲ್ಲಾ ಅವರು ಕಂಪನಿಯ ವಿಶೇಷಚೇತನರ ಬಳಕೆಗೆ ಹೆಚ್ಚು ಅನುಕೂಲಕರವಾಗುವಂತೆ ಉತ್ಪನ್ನಗಳ ವಿನ್ಯಾಸಗೊಳಿಸುವುದಕ್ಕೆ ಒತ್ತು ನೀಡಿದ್ದರು.

ವಿಶೇಷಚೇತನರಾಗಿದ್ದ ಝೈನ್‌ಗೆ ಕಳೆದ ವರ್ಷ ಸಿಯಾಟಲ್ ಚಿಲ್ಡ್ರನ್ಸ್ ಸೆಂಟರ್ ಫಾರ್ ಇಂಟಿಗ್ರೇಟಿವ್ ಬ್ರೈನ್ ರಿಸರ್ಚ್‌ನ ಭಾಗವಾಗಿ ಪೀಡಿಯಾಟ್ರಿಕ್ ನ್ಯೂರೋಸೈನ್ಸ್‌ನಲ್ಲಿ ಎಂಡೋವ್ಡ್ ಚೇರ್ ಅನ್ನು ಸ್ಥಾಪಿಸಲಾಗಿತ್ತು.

Last Updated : Mar 1, 2022, 1:46 PM IST

ABOUT THE AUTHOR

...view details