ಮೆಕ್ಸಿಕೋ ಸಿಟಿ :ಟಕಿಲಾ ಸ್ಪ್ಲಿಟ್ಫಿನ್ ಅಥವಾ ಝೂಗೊನೆಟಿಕಸ್ ಟಕಿಲಾ ಎಂಬ ಸಣ್ಣ ಮೀನು ಈ ಹಿಂದೆ ಬಹಳ ಪ್ರಸಿದ್ಧಿ ಪಡೆದಿತ್ತು. ಪಶ್ಚಿಮ ಮೆಕ್ಸಿಕೋದ ನದಿಯಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೆ, 1990 ರ ದಶಕದಲ್ಲಿ ಈ ಮೀನು ಸಂತತಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು.
ಆದರೆ, ವಿಜ್ಞಾನಿಗಳು ಮತ್ತು ಆ ತಟದ ನಿವಾಸಿಗಳು ಪ್ರಕೃತಿಯಲ್ಲಿ ಅಳಿವಿನಂಚಿನಲ್ಲಿರುವ ಆ ಜಾತಿಯ ಮೀನುಗಳ ಸಂತತಿ ಮರಳಿ ಪಡೆಯುವುವಲ್ಲಿ ಯಶಸ್ವಿಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಇದು ಎರಡು ದಶಕಗಳ ಹಿಂದೆ ಜ್ವಾಲಾಮುಖಿ ಸಮೀಪವಿರುವ ಪಟ್ಟಣವಾದ ಟೆಚಿಟ್ಲ್ನ್ ನದಿಯಲ್ಲಿ ಮಾತ್ರ ಕಾಣಿಸಿಕೊಂಡಿರುವ ಪುಟ್ಟ ಮೀನಿನ ಸಂತತಿ ನಶಿಸಿದ ಬಗ್ಗೆ ಒಮರ್ ಡೊಮ್ಂಗ್ಯೂಜ್ ಚಿಂತಿತರಾಗಿದ್ದರು. ಮಾಲಿನ್ಯ, ಮಾನವ ಚಟುವಟಿಕೆಗಳು ಮತ್ತು ಸ್ಥಳೀಯವಲ್ಲದ ಜಾತಿಗಳ ಮೀನಿನಿಂದ ಟೆಚಿಟ್ಲ್ನ್ ನದಿಯಿಂದ ಟಕಿಲಾ ಸ್ಪ್ಲಿಟ್ಫಿನ್ ಮೀನಿನ ಸಂತತಿ ಕಣ್ಮರೆಯಾಗಿತ್ತು.
ಕಣ್ಮರೆ ಆದ ಸಂತತಿ ಉಳಿಸಿಕೊಂಡಿದ್ದು ಹೇಗೆ?
1998 ರಲ್ಲಿ ಮೆಕ್ಸಿಕನ್ ಮೀನುಗಳನ್ನು ಸಂರಕ್ಷಿಸಲು ಪ್ರಯೋಗಾಲಯವನ್ನು ಸ್ಥಾಪಿಸುವುದಕ್ಕೆ ಸಹಾಯ ಮಾಡಲು ಇಂಗ್ಲೆಂಡ್‌ನ ಚೆಸ್ಟರ್ ಮೃಗಾಲಯ ಮತ್ತು ಇತರ ಯುರೋಪಿಯನ್ ಸಂಸ್ಥೆಗಳಿಂದ ಸಂರಕ್ಷಣಾಕಾರರು ಮುಂದಾಗಿದ್ದರು. ಅಕ್ವೇರಿಯಂಗಳಿಂದ ಹಲವಾರು ಜೋಡಿ ಟಕಿಲಾ ಸ್ಪ್ಲಿಟ್ಫಿನ್ ಮೀನುಗಳನ್ನು ತಂದು ಅದರ ಅಭಿವೃದ್ಧಿಗೆ ಸಹಾಯ ಮಾಡಿದರು ಎಂಂದು ಡೊಮ್ಂಗ್ಯೂಜ್ ಹೇಳಿದ್ದಾರೆ.
ಈ ವಿಶೇಷ ತಳಿಯ ಮೀನುಗಳನ್ನು ಅಕ್ವೇರಿಯಂಗಳಲ್ಲಿ ಸಾಕಿ, ಸಂತಾನೋತ್ಪತ್ತಿಗೆ ಸಹಾಯ ಮಾಡಿದೆವು. ಹೀಗೆ ಅಕ್ವೇರಿಯಂನಲ್ಲಿ ಉಳಿದ ಈ ಸಂತತಿಯ ಮೀನುಗಳನ್ನ ಕ್ರಮೇಣವಾಗಿ ನದಿಗಳಿಗೆ ಬಿಡಲಾಯಿತು. ಆದರೆ ಆ ಮೀನುಗಳು ನದಿಯಲ್ಲಿ ಹೆಚ್ಚು ಕಾಲ ಬದುಕುಳಿಯದೇ ಸಾವನ್ನಪ್ಪುತ್ತಿದ್ದವು. ಇದರಿಂದ ಡೊಮ್ಂಗ್ಯೂಜ್ ತಂಡ ಮತ್ತೆ ಚಿಂತೇಗಿಡಾಯಿತು.
ಇವರ ಕೊಡುಗೆಯಿಂದಲೇ ಮತ್ತೆ ವೃದ್ಧಿಯಾದ ಸ್ಪ್ಲಿಟ್ಫಿನ್
ಹೀಗೆ ಮೀನಿನ ಸಂತತಿ ನದಿಯಲ್ಲಿ ಅಂತ್ಯವಾಗುತ್ತಿರುವುದರಿಂದ ಚಿಂತಿತರಾದ ತಜ್ಞರು, ಅದಕ್ಕೆ ಹೊಸ ಮಾರ್ಗೋಪಾಯಗಳನ್ನು ಕಂಡು ಹಿಡಿದರು. 2012ರಲ್ಲಿ ಕೃತಕ ಕೊಳವನ್ನು ನಿರ್ಮಿಸಿ 40 ಜೋಡಿಗಳನ್ನು ಬೆಳೆಸಿದರು. ಎರಡು ವರ್ಷಗಳ ನಂತರ, ಸುಮಾರು 10,000 ಮೀನುಗಳಾದವು. ಫಲಿತಾಂಶವು ಚೆಸ್ಟರ್ ಮೃಗಾಲಯದಿಂದ ಮಾತ್ರವಲ್ಲದೇ ಯುರೋಪ್, ಅಮೆರಿಕ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಹನ್ನೆರಡು ಸಂಸ್ಥೆಗಳು ಈ ವಿಶೇಷ ಸಂತತಿ ಉಳಿಸಲು ಧನ ಸಹಾಯ ಮಾಡಿದವು.
ಅಂತಿಮವಾಗಿ ಸತತ ಐದು ವರ್ಷಗಳ ಪರಿಶ್ರಮದಿಂದಾಗಿ ಈ ಮೀನಿನ ಸಂತತಿ ಶೇ 55ರಷ್ಟು ಹೆಚ್ಚಾಗಿದ್ದು, ಕಳೆದ ತಿಂಗಳು ಮೀನುಗಳನ್ನು ನದಿಯ ಮತ್ತೊಂದು ಭಾಗಕ್ಕೆ ಬಿಡಲಾಗಿದೆ.