ನ್ಯೂಯಾರ್ಕ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಭಾರತದ ಪ್ರವಾಸ ಮುಗಿಸಿ ವಾರಗಳು ಕಳೆದುಹೋಗಿವೆ. ಇಷ್ಟಾದರೂ ಸವಿನೆನಪು ಮಾತ್ರ ಅವರ ಮನದಲ್ಲಿ ಇನ್ನುಹಾಗೇ ಉಳಿದುಕೊಂಡಿವೆ.
ಅಮೆರಿಕ ತೆರಳಿದ ಬಳಿಕ ಭಾರತದ ಪ್ರವಾಸದ ಕುರಿತು ಮೆಲಾನಿಯಾ ಸರಣಿ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ತಮ್ಮ ಟ್ಟಿಟ್ಟರ್ನಲ್ಲಿ ರಾಷ್ಟ್ರಪತಿ ಭವನದಲ್ಲಿ ತಮಗೆ ಸಿಕ್ಕ ಅದ್ಧೂರಿ ಸ್ವಾಗತ, ಔತಣಕೂಟ, ಹಾಗೂ ಅಹಮದಾಬಾದ್ಗೆ ಬಂದಿಳಿದ ವೇಳೆ, ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಮಾಡಿಕೊಂಡ ರೀತಿಗೆ ಫಿದಾ ಆಗಿದ್ದು, ಸುಂದರವಾದ ದೇಶದಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿರುವುದಕ್ಕೆ ಧನ್ಯವಾದ ಎಂದಿದ್ದಾರೆ.
ಇದೇ ವೇಳೆ ಅವರು ದೆಹಲಿ ಶಾಲೆಗೆ ಭೇಟಿ ನೀಡಿದ್ದ ವೇಳೆ ಮಾಹಿತಿ ನೀಡಿರುವ ಅಲ್ಲಿನ ಶಿಕ್ಷಕಿ ಮನು ಗುಲಾಟಿ ಅವರಿಗೂ ಥ್ಯಾಂಕ್ಸ್ ಹೇಳಿದ್ದು, "Thank you - Loved meeting you all! Continue to #BeBest," ಎಂದು ಬರೆದುಕೊಂಡಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಟ್ರಂಪ್ ಮಗಳು ಇವಾಂಕಾ ಕೂಡ ಇನ್ಸ್ಟಾಗ್ರಾಮ್ನಲ್ಲಿ ಭಾರತದಲ್ಲಿನ ಪ್ರವಾಸದ ಕೆಲವೊಂದು ಫೋಟೋ ಹಾಕಿಕೊಂಡಿದ್ದರು.