ಟೆಕ್ಸಾಸ್(ಅಮೆರಿಕ):ಅವರಿಬ್ಬರೂ ಖುಷಿ ಖುಷಿಯಾಗಿ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಜೀವನದ ಮತ್ತೊಂದು ಹೊಸ ಅಧ್ಯಾಯವನ್ನು ಆರಂಭಿಸಿದ ಮರುಕ್ಷಣವೇ ಆ ದಂಪತಿ ಬಾಳಲ್ಲಿ ವಿಧಿ ಬೇರೆಯದೇ ಆಟ ಆಡಿತ್ತು.
ಟೆಕ್ಸಾಸ್ ನಿವಾಸಿಗಳಾದ ಮಾರ್ಗನ್(19) ಹಾಗೂ ಬೌಡ್ರೆಕ್ಸ್(20) ಶುಕ್ರವಾರದಂದು ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಐದೇ ನಿಮಿಷಕ್ಕೆ ಇವರಿಬ್ಬರೂ ಮಸಣ ಸೇರಿದ್ದು ಮಾತ್ರ ದುರಂತ..!
ಸಂತಸದಿಂದ ಮದುವೆಯಾದ ಮಾರ್ಗನ್ ದಂಪತಿ ಕಾರು ಹತ್ತಿ ಹೊರಟಿದ್ದರು. ಆರತಕ್ಷತೆ ಸಂಭ್ರಮ ಇಡೀ ಕುಟುಂಬದಲ್ಲಿ ಮನೆ ಮಾಡಿತ್ತು. ದಂಪತಿಯ ಕಾರಿನ ಹಿಂದೆಯೇ ಎರಡೂ ಕುಟುಂಬದವರ ಕಾರು ಸಹ ಸಾಗಿತ್ತು. ಆದರೆ ಕಾರು ಮುಂದಕ್ಕೆ ಚಲಿಸಿದ ಕೆಲವೇ ನಿಮಿಷಗಳಲ್ಲಿ ಯಮರೂಪಿ ಟ್ರಕ್ ಇಬ್ಬರನ್ನೂ ಬಲಿ ಪಡೆದಿದೆ.
ಬಾಲ್ಯಸ್ನೇಹಿತರಾಗಿದ್ದ ಮಾರ್ಗನ್ ಹಾಗೂ ಬೌಡ್ರೆಕ್ಸ್ ಇದೇ ಸಂಬಂಧಕ್ಕೆ ಮದುವೆಯಾಗಿದ್ದರು. ಆದರೆ ಮದುವೆಯಾದ ಐದೇ ನಿಮಿಷಕ್ಕೆ ಟ್ರಕ್ ಗುದ್ದಿ ದೇವರ ಪಾದ ಸೇರಿದ್ದಾರೆ. ಗುದ್ದಿದ ರಭಸಕ್ಕೆ ಕಾರು ಹಲವು ಪಲ್ಟಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ತಮ್ಮ ಮಕ್ಕಳ ಭೀಕರ ಅಪಘಾತವನ್ನು ನೋಡಿದ ಕುಟುಂಬಸ್ಥರು ಆಘಾತದಿಂದ ಇನ್ನೂ ಹೊರಬಂದಿಲ್ಲ. ಖುಷಿಯಿಂದ ಇರಬೇಕಿದ್ದ ಕುಟುಂಬದಲ್ಲೀಗ ನೀರವಮೌನ ಆವರಿಸಿದೆ.