ಕರ್ನಾಟಕ

karnataka

ETV Bharat / international

ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದ ವ್ಯಕ್ತಿ ವಿಮಾನ ಅಪಘಾತದಲ್ಲಿ ಸಾವು - ಲಘು ವಿಮಾನ

ಒಂದು ಬಾರಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದ ನ್ಯೂಯಾರ್ಕ್​​ನ ಗ್ಲೆನ್ ಎಂ.ಡಿ ವ್ರೈಸ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ನ್ಯೂಜೆರ್ಸಿ ಪೊಲೀಸರು ತಿಳಿಸಿದ್ದಾರೆ.

ಗ್ಲೆನ್ ಎಂ. ಡಿ ವ್ರೈಸ್
ಗ್ಲೆನ್ ಎಂ. ಡಿ ವ್ರೈಸ್

By

Published : Nov 13, 2021, 7:16 AM IST

ನ್ಯೂಜೆರ್ಸಿ( ಅಮೆರಿಕ): ಕಳೆದ ತಿಂಗಳು ಗಗನಯಾತ್ರಿ ವಿಲಿಯಂ ಶಾಂಟ್ನರ್​ (William Shatner) ಅವರೊಂದಿಗೆ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ವ್ಯಕ್ತಿಯೊಬ್ಬರು ವಿಮಾನ ದುರಂತ ( plane crash) ದಲ್ಲಿ ಮೃತಪಟ್ಟಿದ್ದಾರೆ.

ಒಂದು ಬಾರಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ನ್ಯೂಯಾರ್ಕ್ ನಗರದ ಗ್ಲೆನ್ ಎಂ. ಡಿ ವ್ರೈಸ್ (Glen M. de Vries) (49) ಮತ್ತು ಹೊಪಾಟ್‌ಕಾಂಗ್‌ನ ಥಾಮಸ್ ಪಿ. ಫಿಶರ್ (Thomas P. Fischer) (54) ಲಘು ವಿಮಾನ (small plane) ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿ ವ್ರೈಸ್ ಅವರು ಖಾಸಗಿ ಪೈಲಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಜೊತೆಗೆ ಫಿಶರ್, ವಿಮಾನ ಶಾಲೆಯೊಂದರ ಮಾಲೀಕರಾಗಿದ್ದರು. ಈ ಇಬ್ಬರೂ ಪ್ರಯಾಣಿಸುತ್ತಿದ್ದ ಲಘು ವಿಮಾನ ಉತ್ತರ ನ್ಯೂಜೆರ್ಸಿಯ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ.

ABOUT THE AUTHOR

...view details