ಸೀಟೆಲ್(ಅಮೆರಿಕಾ):ಅಮೆರಿಕಾದಲ್ಲಿ ಜನಾಂಗೀಯ ತಾರತಮ್ಯ ವಿರೋಧಿಸಿ ಪ್ರತಿಭಟನೆಗಳು ಭುಗಿಲೆದ್ದಿವೆ. ಪ್ರತಿಭಟನೆ ವೇಳೆ ಕಾರಿನಿಂದ ಬಂದ ಓರ್ವ ವ್ಯಕ್ತಿ ತನ್ನ ಗನ್ನಿಂದ ಪ್ರತಿಭಟನಾಕಾರರ ಮೇಲೆ ಫೈರಿಂಗ್ ಮಾಡಿದ್ದಾನೆ.
ಅಮೆರಿಕಾದಲ್ಲಿ ಭುಗಿಲೆದ್ದ ಪ್ರತಿಭಟನೆ: ವ್ಯಕ್ತಿಯಿಂದ ಫೈರಿಂಗ್, ಓರ್ವನಿಗೆ ಗಾಯ - ಜನಾಂಗೀಯ ತಾರತಮ್ಯ
ಅಮೆರಿಕಾದಲ್ಲಿ ಜಾರ್ಜ್ ಫ್ಲಾಯ್ಡ್ ಪರ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಈ ವೇಳೆ ಓರ್ವ ವ್ಯಕ್ತಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.
ಅಮೆರಿಕದಲ್ಲಿ ಪ್ರತಿಭಟನೆ
ಈ ವೇಳೆ ಓರ್ವ ಪ್ರತಿಭಟನಾಕಾರನಿಗೆ ಗಾಯವಾಗಿದ್ದು, ಪ್ರಾಥಮಿಕ ಮಾಹಿತಿಯಂತೆ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್-ಅಮೆರಿಕನ್ ಪ್ರಜೆಯನ್ನು ಪೊಲೀಸರು ಕೊಂದ ಆರೋಪದಲ್ಲಿ ಟ್ರಂಪ್ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಿದ್ದು, ಈ ವೇಳೆ ವ್ಯಕ್ತಿ ಫೈರಿಂಗ್ ನಡೆಸಿದ್ದಾನೆ.