ಹೂಸ್ಟನ್:ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದಲ್ಲಿ ನಡೆದ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್'ಪ್ರತಿಭಟನೆಯ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೂಸ್ಟನ್: ಪ್ರತಿಭಟನೆ ವೇಳೆ ಗುಂಡಿನ ದಾಳಿಗೆ ಓರ್ವ ವ್ಯಕ್ತಿ ಬಲಿ - ಗುಂಡಿನ ದಾಳಿಗೆ ಓರ್ವ ವ್ಯಕ್ತಿ ಬಲಿ
ಹೂಸ್ಟನ್ನ ಟೆಕ್ಸಾಸ್ ರಾಜ್ಯದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವು
ಶನಿವಾರ ರಾತ್ರಿ 9.52ರ ಸುಮಾರಿಗೆ ಕಾಂಗ್ರೆಸ್ ಅವೆನ್ಯೂ ಬಳಿ ಈ ಘಟನೆ ನಡೆದಿದೆ ಎಂದು ಆಸ್ಟಿನ್ ಮೂಲದ ಕೆವಿಯು ಮಾಧ್ಯಮ ವರದಿ ಮಾಡಿದೆ.
ಓರ್ವ ಯುವಕ ಗುಂಡೇಟಿನಿಂದ ಗಾಯಗೊಂಡಿದ್ದು, ಆತನನ್ನು ಡೆಲ್ ಸೆಟನ್ (ಮೆಡಿಕಲ್ ಸೆಂಟರ್)ಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿತ್ತು. ಆದರೆ ಸ್ವಲ್ಪ ಸಮಯದ ನಂತರ ಆತ ಮೃತ ಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ಕತ್ರಿನಾ ರಾಟ್ ಕ್ಲಿಫ್ ಮಾಧ್ಯಮಗಳಿಗೆ ಹೇಳಿದ್ದಾರೆ.