ಲಾಸ್ ಏಂಜಲೀಸ್: ನಿಲ್ದಾಣದಲ್ಲಿ ತುರ್ತು ಬಾಗಿಲು ತೆರೆದು ವಿಮಾನದಿಂದ ಹಾರಲು ಪ್ರಯತ್ನಿಸಿದ ಪ್ರಯಾಣಿಕನೊಬ್ಬ ಬಾರಿ ಬೆಲೆ ತೆತ್ತಿದ್ದಾನೆ. ಈ ವ್ಯಕ್ತಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ದಟ್ಟವಾಗಿದೆ.
ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೆಕ್ಸಿಕೊ ಪ್ರಜೆಯಾದ ಲೂಯಿಸ್ ಆಂಟೋನಿಯೊ ವಿಕ್ಟೋರಿಯಾ ಡೊಮಿಂಗ್ಯೂಜ್ ಎಂಬ ಪ್ರಯಾಣಿಕ ಕಳೆದ ಶುಕ್ರವಾರ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದು ಮೇಲಿಂದ ಹಾರಿದ್ದಾನೆ. ಈ ವೇಳೆ ಆತನ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು.
ಸದ್ಯ ಗಾಯಾಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ವಿಮಾನದ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿಕೊಂಡ ಆರೋಪದ ಮೇಲೆ ಈತನನ್ನು ಫೆಡರಲ್ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ. ಆರೋಪಿ ಅಪರಾಧಿಯೆಂದು ಸಾಬೀತಾದರೆ 20 ವರ್ಷಗಳ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ.