ಅಮೆರಿಕ: ಗಿನ್ನಿಸ್ ವಿಶ್ವ ದಾಖಲೆ ಎಂಬುದು ಹಲವರ ಕನಸು. ಅಪೂರ್ವ ಸಾಧನೆ ಮೂಲಕ ದಾಖಲೆಯ ಪುಟದಲ್ಲಿ ಸ್ಥಾನ ಪಡೆಯಬೇಕೆಂದು ಕೆಲವರು ಹಾತೊರೆಯುತ್ತಿರುತ್ತಾರೆ. ಸಾಧನೆಯ ಬೆನ್ನತ್ತಿದ ಇಲ್ಲೊಬ್ಬ ವ್ಯಕ್ತಿ ಅತಿ ಹೆಚ್ಚು ಮೊಟ್ಟೆಗಳನ್ನು ತಲೆ ಮೇಲೆ ಹೊತ್ತುಕೊಂಡು ಬ್ಯಾಲೆನ್ಸ್ ಮಾಡುವ ಮೂಲಕ ದಾಖಲೆ ಮಾಡಿದ್ದಾನೆ.
ಹೌದು, ಒಂದೆರಡು ಮೊಟ್ಟೆಗಳನ್ನು ತಲೆಯ ಮೇಲೆ ಇಟ್ಟುಕೊಂಡು ಬ್ಯಾಲೆನ್ಸ್ ಮಾಡುವುದೇ ಕಷ್ಟ. ಅಂತಹದ್ರಲ್ಲಿ ಪಶ್ಚಿಮ ಆಫ್ರಿಕಾದ ಗ್ರೆಗೊರಿ ಡಾ ಸಿಲ್ವಾ (Gregory Da Silva) ಅವರು ಬರೋಬ್ಬರಿ 753 ಮೊಟ್ಟೆಗಳಿದ್ದ ಟೋಪಿಯನ್ನು ತಮ್ಮ ತಲೆಯ ಮೇಲೆ ಇಟ್ಟು ಬ್ಯಾಲೆನ್ಸ್ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಗ್ರೆಗೊರಿ ತಮ್ಮ ಟೋಪಿಗೆ ಹೆಚ್ಚಿನ ಸಂಖ್ಯೆಯ ಮೊಟ್ಟೆಗಳನ್ನು ಜೋಡಿಸಲು ಮೂರು ದಿನಗಳ ಸಮಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.