ಕರ್ನಾಟಕ

karnataka

ETV Bharat / international

ಕೊರೊನಾ ಸೋಂಕು ಇದ್ದರೂ ಪಾರ್ಟಿಯಲ್ಲಿ ಭಾಗಿಯಾದ ಪಾಪ್ ಕ್ವೀನ್‌​ ಮಡೋನಾ!

ಮಾಹಾಮಾರಿ ಕೊರೊನಾ ವೈರಸ್​​ ಸೋಂಕು ತಗುಲಿರುವುದು ಗೊತ್ತಿದ್ದರೂ ಸಾರ್ವಜನಿಕ ಪಾರ್ಟಿಯಲ್ಲಿ ಪಾಪ್​​ ಸಿಂಗರ್​​ ಮಡೋನಾ ಭಾಗಿಯಾಗಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

Madonna Test Positive For COVID-19
Madonna Test Positive For COVID-19

By

Published : May 4, 2020, 4:37 PM IST

ನವದೆಹಲಿ: ವಿಶ್ವ ಪ್ರಸಿದ್ಧ ಅಮೆರಿಕದಪಾಪ್​ ಸಿಂಗರ್​​​ ಮಡೋನಾಗೆ ಕೊರೊನಾ ಸೋಂಕು ಇರುವುದು ಕನ್ಫರ್ಮ್​​​​ ಆಗಿದ್ದರೂ ಆಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪಾರ್ಟಿವೊಂದರಲ್ಲಿ ಭಾಗಿಯಾಗಿರುವುದು ಇದೀಗ ಬೆಳಕಿಗೆ ಬಂದಿದೆ.

ತಮಗೆ ಕೊರೊನಾ ಇರುವುದಾಗಿ ಕಳೆದ ಕೆಲ ದಿನಗಳ ಹಿಂದೆ ಸಿಂಗರ್​ ಮಡೋನಾ ಹೇಳಿಕೊಂಡಿದ್ದರು. ಇದರ ಮಧ್ಯೆ ಕೂಡಾ ಸೆಲಿಬ್ರಿಟಿ ಫೋಟೋಗ್ರಾಪರ್​​ ಸ್ವಿವಿನ್​ ಕ್ಲೈನ್​​ ಹುಟ್ಟುಹಬ್ಬದಲ್ಲಿ ಭಾಗಿಯಾಗಿರುವ ವಿಡಿಯೋ ವೈರಲ್​ ಆಗಿದೆ. 61 ವರ್ಷದ ಸಿಂಗರ್​​ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪಾರ್ಟಿಯಲ್ಲಿ ಭಾಗಿಯಾಗಿರುವುದು ಕೋವಿಡ್​​-19 ಹರಡಲು ಕಾರಣವಾಗಬಹುದು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಕ್ವಾರಂಟೈನ್​​ನಲ್ಲಿರುವಂತೆ ವೈದ್ಯರು ಸಲಹೆ ನೀಡಿದ್ರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪಾರ್ಟಿಯಲ್ಲಿ ಭಾಗಿಯಾಗಿರುವ ಪಾಪ್​ ಸಿಂಗರ್​ ಮಡೋನಾ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ವಾರ ವಿಡಿಯೋ ಹರಿಬಿಟ್ಟಿದ್ದ ಮಡೋನಾ ತನಗೆ ಕೊರೊನಾ ಇದೇ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಳು. ಜತೆಗೆ ಅದಕ್ಕೆ ಔಷಧಿ ಕೂಡ ತೆಗೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದರು.

ABOUT THE AUTHOR

...view details