ವಾಷಿಂಗ್ಟನ್(ಅಮೆರಿಕ) :ಅಮೆರಿಕನ್ ಗಾಯಕಿ-ಗೀತರಚನೆಕಾರ್ತಿ ಮಡೋನಾ ತನ್ನ 'ಕ್ಯಾರೆಂಟೈನ್ ಡೈರೀಸ್' ಸರಣಿಯ ಇತ್ತೀಚಿನ ಆವೃತ್ತಿಯ ಮೂಲಕ ತನ್ನ ದೇಹದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುವ ಆ್ಯಂಟಿಬಾಡೀಸ್(ಪ್ರತಿಕಾಯ) ಗಳಿವೆ ಎಂದು ಬಹಿರಂಗಪಡಿಸಿದರು.
ಖ್ಯಾತ ಅಮೆರಿಕನ್ ಗಾಯಕಿ ಮಡೋನಾಗಿಲ್ವಂತೆ ಕೊರೊನಾ ಭಯ.. ಯಾಕಂದ್ರೇ,, - ಕ್ಯಾರೆಂಟೈನ್ ಡೈರೀಸ್
ಪರೀಕ್ಷೆಯಿಂದ ಪ್ರತಿಕಾಯಗಳಿರುವುದು ಖಾತ್ರಿಯಾಗಿದ್ದರೂ ಇದು ಕೊರೊನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಹೇಳಿದೆ.
![ಖ್ಯಾತ ಅಮೆರಿಕನ್ ಗಾಯಕಿ ಮಡೋನಾಗಿಲ್ವಂತೆ ಕೊರೊನಾ ಭಯ.. ಯಾಕಂದ್ರೇ,, Madonna heaves a sigh of relief amid COVID-19 scare. Read why](https://etvbharatimages.akamaized.net/etvbharat/prod-images/768-512-7024237-889-7024237-1588384264519.jpg)
61 ವರ್ಷದ ಗಾಯಕಿ ಮಡೋನಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ಐಜಿಟಿವಿಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ನನ್ನನ್ನು ಪರೀಕ್ಷೆಗೊಳಪಡಿಸಿದ್ದು, ನನ್ನ ದೇಹದಲ್ಲಿ ಪ್ರತಿಕಾಯಗಳಿವೆ ಎಂದು ತಿಳಿದು ಬಂದಿದೆ. ನಾನೀಗ ಫ್ರೀಬರ್ಡ್. ನಾಳೆಯಿಂದಲೇ ನಾನು ರೈಡ್ ಹೋಗಲಿದ್ದೇನೆ. ಶುದ್ಧ ಗಾಳಿಯಲ್ಲಿ ಉಸಿರಾಡಲಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಮಡೋನಾ.
ಪರೀಕ್ಷೆಯಿಂದ ಪ್ರತಿಕಾಯಗಳಿರುವುದು ಖಾತ್ರಿಯಾಗಿದ್ದರೂ ಇದು ಕೊರೊನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಹೇಳಿದೆ. ಆದರೂ ಈ ಸುದ್ದಿ ಗಾಯಕಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.