ಲೇಕ್ ಚಾರ್ಲ್ಸ್: ಲಾರಾ ಚಂಡಮಾರುತವು ಲೂಯಿಸಿಯಾನವನ್ನು ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಪ್ರಬಲವಾದ ಗಾಳಿ ಒಂದೆಡೆಯಾದರೆ ಈಗಾಗಲೇ ಅನೇಕ ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ. ಸಾಗರದಿಂದ ಬೃಹದಾಕಾರದ ಅಲೆಗಳು ಬಂದು ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಲೂಯಿಸಿಯಾನದ ಸಣ್ಣ ಪಟ್ಟಣವಾದ ಕ್ಯಾಮರೂನ್‌ನಲ್ಲಿ ಗಂಟೆಗೆ 65 ಕಿ.ಮೀ. ವೇಗದಲ್ಲಿ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ರಾಷ್ಟ್ರೀಯ ಚಂಡಮಾರುತ ಕೇಂದ್ರ (ಎನ್‌ಹೆಚ್‌ಸಿ) ತಿಳಿಸಿದೆ.
“ಮುಂದಿನ ಹಲವು ಗಂಟೆಗಳವರೆಗೂ ಲಾರಾ ಚಂಡಮಾರುತ ಐವಾಲ್ನ ನೈರುತ್ಯ ಒಳನಾಡಿನಲ್ಲಿ ಅಬ್ಬರಿಸಲಿದೆ“ ಎಂದು ಎಚ್ಚರಿಕೆ ನೀಡಲಾಗಿದೆ.
ಲಾರಾ ಅಬ್ಬರಕ್ಕೆ ಬೀದಿಪಾಲಾದ ಜನಜೀವನ ಲೂಯಿಸಿಯಾನದ ಚಾರ್ಲ್ಸ್ ಸರೋವರದ ಬಳಿ ಬೀಸುತ್ತಿರುವ ಗಾಳಿಗೆ ಜನರು ದಿಕ್ಕಾಪಾಲಾಗಿದ್ದಾರೆ. ರಕ್ಷಣಾ ಕಾರ್ಯಕ್ಕೂ ಅಡೆತಡೆ ಉಂಟಾಗಿದೆ. ಶ್ರೆವೆಪೋರ್ಟ್ ಒಳನಾಡಿನಲ್ಲಿ 200 ಮೈಲಿಗಳಷ್ಟು ದೂರದಲ್ಲಿಯೂ ಚಂಡಮಾರುತ ಬೀಸಬಹುದು ಎಂದು ಹವಾಮಾನ ಇಲಾಖೆ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಪೋರ್ಟ್ ಅರ್ಥರ್ ತೈಲ ಸಂಸ್ಕರಣಾ ಘಟಕದ ಬಳಿಯೂ ಭೂ ಕುಸಿತ ಸಂಭವಿಸಿದೆ. ಲಾರಾ ಚಂಡಮಾರುತವು ಕರಾವಳಿ ಭಾಗದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಈಗಾಗಲೇ ರಾಷ್ಟ್ರೀಯ ಹವಾಮಾನ ಇಲಾಖೆಯ ಮುನ್ಸೂಚಕ ಡೇವಿಡ್ ರಾತ್ ಹೇಳಿದ್ದಾರೆ.
ಲೂಯಿಸಿಯಾನ ಮತ್ತು ಟೆಕ್ಸಾಸ್‌ನಲ್ಲಿ ಸುಮಾರು 6,20,000 ಜನರನ್ನು ಸ್ಥಳಾಂತರ ಮಾಡಲಾಗಿದೆ. ಇನ್ನು ಲೂಯಿಸಿಯಾನದ ಕ್ಯಾಮೆರಾನ್ ಪ್ಯಾರಿಷ್ನ ಕೆಲವು ಭಾಗಗಳಲ್ಲಿ ನೀರಿನ ಮಟ್ಟ 20 ಅಡಿ (6 ಮೀಟರ್) ಎತ್ತರಕ್ಕೆ ಏರಿದೆ.
ಲಾರಾ ಚಂಡಮಾರುತ ಅಬ್ಬರಕ್ಕೆ ಸಿಲುಕಿದ ಲೂಯಿಸಿಯಾನ ಒಟ್ಟಾರೆ, ಈ ಹಿಂದೆ ಅಪ್ಪಳಿಸಿದ ಭೀಕರ ಚಂಡಮಾರುತಗಳಲ್ಲಿ ಲಾರಾ ಇನ್ನಷ್ಟು ಪ್ರಬಲವಾಗಿದೆ. ಲಾರಾದಿಂದ ಅನೇಕರ ಜೀವನ ಬೀದಿ ಪಾಲಾಗಿದ್ದು, ಗಂಟೆಗೆ 40 ಮೈಲಿ ವೇಗದಲ್ಲಿ ಭೀಕರವಾಗಿ ಗಾಳಿ ಬೀಸುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.