ಮುಂಬೈ: ಪ್ರಪಂಚದಾದ್ಯಂತ ತನ್ನ ಅದ್ಭುತ ಗಾಯನದಿಂದ ಪ್ರಸಿದ್ದವಾಗಿರುವ ಅಮೇರಿಕಾದ ಖ್ಯಾತ ಸಿಂಗರ್ ಭಾನುವಾರ ಸಂಸ್ಕೃತ ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವಿಶ್ವದಾದ್ಯಂತ ಅಭಿಮಾನಿ ಬಳಗ ಹೊಂದಿರುವ ಸ್ಟೆಫಾನಿ ಜೊನ್ನೆ ಏಂಜಲೀನಾ ಜರ್ಮನೊಟ್ಟ ಲೇಡಿ ಗಾಗ ಎಂದು ಪ್ರಸಿದ್ದರಾಗಿದ್ದಾರೆ. ಟ್ವಿಟರ್ನಲ್ಲಿ ಸುಮಾರು 7.9 ಕೋಟಿ ಹಿಂಬಾಲಕರನ್ನು ಹೊಂದಿರುವ ಲೇಡಿ ಗಾಗ ಇದ್ದಕ್ಕಿಂದಂತೆ ಸಂಸ್ಕೃತದಲ್ಲಿ ಟ್ವೀಟ್ ಮಾಡಿರುವುದು ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ.
ಲೇಡಿ ಗಾಗ ಭಾನುವಾರ ತಮ್ಮ ಟ್ವಿಟರ್ನಲ್ಲಿ" ಲೋಕಾಃ ಸಮಸ್ತಾಃ ಸುಖಿನೋ ಭವಂತು" ಎಂದು ಟ್ವೀಟ್ ಮಾಡಿದ್ದಾರೆ. ಇದು ಸಂಸ್ಕೃತ ಭಾಷೆ ಎಂದು ತಿಳಿಯದ ಅವರ ಫಾಲೋವರ್ಸ್ ಆ ವಾಕ್ಯದ ಅರ್ಥ ತಿಳಿಯದೇ ಗೊಂದಲಕ್ಕೀಡಾಗಿದ್ದಾರೆ. ಆದರೆ ಭಾರತದ ಅಭಿಮಾನಿಗಳು ಅ ವಾಕ್ಯದ ಅರ್ಥವೇನು ಎಂಬುದನ್ನು ತಿಳಿಸಿದ್ದಾರೆ.
ಲೋಕಾಃ ಸಮಸ್ತಾಃ ಸುಖಿನೋ ಭವಂತು ಎಂದರೆ ಪ್ರಪಂಚದ ಸಕಲ ಜೀವರಾಶಿಗಳಿಗೂ ಸುಖ ಶಾಂತಿ ದೊರೆಯಲಿ ಎಂಬುದಾಗಿದೆ. ಆದರೆ ಈ ಸಂಸ್ಕೃತಿಯ ವಾಕ್ಯವನ್ನು ಲೇಡಿಗಾಗ ಏಕೆ ಟ್ವೀಟ್ ಮಾಡಿಕೊಂಡಿದ್ದಾರೆ ಎಂಬುದು ಗೊಂದಲವಾಗಿದೆ. ಆದರೆ ಭಾರತೀಯರು ಮಾತ್ರ ಅಮೆರಿಕಾ ಗಾಯಕಿ ಸಂಸ್ಕೃತ ಭಾಷೆಯಲ್ಲಿ ಟ್ವೀಟ್ ಮಾಡಿರುವುದಕ್ಕೆ ಫಿದಾ ಆಗಿದ್ದಾರೆ.