ಹೈದರಾಬಾದ್: ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ಎದುರಾಳಿ ದೌರ್ಬಲ್ಯಗಳನ್ನು ಬಹಿರಂಗಪಡಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಅಧ್ಯಕ್ಷೀಯ ಚಾಲೆಂಜರ್ ಜೋ ಬಿಡನ್ ಅವರು ಮೊದಲ ಸುತ್ತಿನ ದೂರದರ್ಶನದ ಚರ್ಚೆಗಳಿಗೆ ಮುಖಾಮುಖಿಯಾಗಲಿದ್ದಾರೆ.
ಯುಎಸ್ ಅಧ್ಯಕ್ಷೀಯ ಚುನಾವಣೆಗೂ ಮುನ್ನ ನಡೆಯುವ ಚರ್ಚೆ ಮಂಗಳವಾರ ರಾತ್ರಿ ಚರ್ಚೆ ನಡೆಯಲಿದ್ದು, ಜನಾಂಗೀಯ ನ್ಯಾಯ ಪ್ರತಿಭಟನೆಗಳು ಮತ್ತು ಕೊರೊನಾ ಸೇರಿದಂತೆ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ದೇಶಕ್ಕೆ ತಮ್ಮ ವಿಭಿನ್ನ ದೃಷ್ಟಿಕೋನಗಳನ್ನು ರೂಪಿಸಲು ಈ ಸಂವಾದ ಟ್ರಂಪ್ ಮತ್ತು ಬಿಡೆನ್‌ಗೆ ದೊಡ್ಡ ವೇದಿಕೆಯನ್ನ ಕಲ್ಪಿಸಲಿದೆ.
ಯುಎಸ್ ಅಧ್ಯಕ್ಷೀಯ ಚುನಾವಣೆಗೂ ಮುನ್ನ ನಡೆಯುವ ಚರ್ಚೆ ನೇರ ಶೂಟರ್ ಎಂಬ ಖ್ಯಾತಿಯನ್ನು ಹೊಂದಿರುವ ಫಾಕ್ಸ್ ನ್ಯೂಸ್ ಕ್ರಿಸ್ ವ್ಯಾಲೇಸ್ ಈ ಚರ್ಚೆಯನ್ನು ನಡೆಸಿಕೊಡಲಿದ್ದಾರೆ. ವ್ಯಾಲೇಸ್ 2016 ರಲ್ಲಿ ಅಧ್ಯಕ್ಷೀಯ ಚರ್ಚೆಯನ್ನು ಮಾಡರೇಟ್ ಮಾಡಿದ್ದರು.
ಯುಎಸ್ ಅಧ್ಯಕ್ಷೀಯ ಚುನಾವಣೆಗೂ ಮುನ್ನ ನಡೆಯುವ ಚರ್ಚೆ ಯುಎಸ್ ಚುನಾವಣೆಯ ಮತದಾನಕ್ಕೂ ಕೆಲವು ವಾರಗಳ ಮೊದಲು, ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷ ಅಭ್ಯರ್ಥಿಗಳು ರಾಷ್ಟ್ರದ ಪ್ರಮುಖ ಮತ್ತು ಸಮಕಾಲೀನ ಸಮಸ್ಯೆಗಳನ್ನು ಒಳಗೊಂಡಂತೆ ಚರ್ಚೆಯನ್ನು ನಡೆಸುತ್ತಾರೆ. ಪ್ರಮುಖ ವಿಷಯಗಳಿಗಾಗಿ ಅಭ್ಯರ್ಥಿಗಳ ಯೋಜನೆ ಬಗ್ಗೆ ಅಮೆರಿಕನ್ ನಾಗರಿಕರಿಗೆ ತಿಳಿಸುವ ಉದ್ದೇಶವು ಚರ್ಚೆಯಲ್ಲಿರಲಿದೆ. 90 ನಿಮಿಷಗಳ ವಾದಗಳನ್ನು ರಾಷ್ಟ್ರೀಯ ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.