ವಾಷಿಂಗ್ಟನ್,(ಅಮೆರಿಕ):ಟೆಲಿವಿಷನ್ ಸ್ಟಾರ್, ನಟಿ ಮತ್ತು ಉದ್ಯಮಿ ಕಿಮ್ ಕರ್ದಾಶಿಯನ್ ವೆಸ್ಟ್ ಅಧಿಕೃತವಾಗಿ ಬಿಲಿಯನೇರ್ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಫೋರ್ಬ್ಸ್ ಕಿಮ್ ಹೆಸರನ್ನ ಬಿಲಿಯನೇರ್ಗಳ ಪಟ್ಟಿಯಲ್ಲಿ ಪ್ರಕಟಿಸಿದೆ.
ಕಿಮ್ ತಂಗಿ ಕೈಲಿ ಜೆನ್ನರ್ ಬಿಲಿಯನೇರ್ಗಳ ಪಟ್ಟಿಯಿಂದ ಹೊರಗೆ ಬಂದ ಒಂದು ವರ್ಷದ ನಂತರ ಇದೇ ಮೊದಲ ಬಾರಿಗೆ ಕಿಮ್ ಕರ್ದಾಶಿಯನ್ ಫೋರ್ಬ್ ಬಿಲಿಯನೇರ್ಗಳ ಜಾಗತಿಕ ಪಟ್ಟಿಯಲ್ಲಿ ಕಾಣಿಸಿದ್ದಾರೆ. ಟಿಲಿವಿಷನ್ ಮೂಲಕ ಆಕೆಯ ಎರಡು ಲೈಫ್ಸ್ಟೈಲ್ ಬ್ರಾಂಡ್ಗಳು ಮತ್ತು ಕೆಲ ಒಪ್ಪಂದಗಳ ಮೂಲಕ ಕಿಮ್ ಕರ್ದಾಶಿಯನ್ಗೆ ಆದಾಯ ಬಂದಿದೆ ಎಂದು ಫೋರ್ಬ್ಸ್ ಮ್ಯಾಗಜಿನ್ ತಿಳಿಸಿದೆ.
ಇದನ್ನೂ ಓದಿ:ಕೊರೊನಾ ಹೆಚ್ಚಳ ಹಿನ್ನೆಲೆ.. ಛತ್ತೀಸ್ಗಢದ ರಾಯಪುರದಲ್ಲಿ 10 ದಿನ ಲಾಕ್ಡೌನ್
ಕೇವಲ ಅಕ್ಟೋಬರ್ನಿಂದ ಈಚೆಗೆ ಕಿಮ್ ಆದಾಯ 200 ಮಿಲಿಯನ್ ಡಾಲರ್ಗಿಂತ ಹೆಚ್ಚಾಗಿದೆ. ಒಟ್ಟು 780 ಮಿಲಿಯನ್ ಡಾಲರ್ನಿಂದ ಹೆಚ್ಚಳ ಕಂಡಿದೆ. ಒಂದು ಬಿಲಿಯನ್ ಡಾಲರ್ ತಲುಪಿದೆ ಎಂದು ಫೋರ್ಬ್ಸ್ ಹೇಳಿದೆ.
ಕಿಮ್ ಕರ್ದಾಶಿಯನ್ ಒಡೆತನ ಕಂಪನಿ ಕೆಕೆಡಬ್ಲ್ಯೂ ಬ್ಯೂಟಿ 2017ರಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಇದು ಕಾಸ್ಮೆಟಿಕ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಈ ಕಂಪನಿಯಲ್ಲಿ ಕಿಮ್ ಕರ್ದಾಶಿಯನ್ ತನ್ನ ನಾಲ್ಕು ಸಹೋದರಿಯರೊಂದಿಗೆ ಸೇರಿ ಸಾಮಾಜಿಕ ಜಾಲತಾಣದಲ್ಲಿ ಪ್ರಮೋಟ್ ಮಾಡಿದ್ದರು.
ಕೇವಲ ಕಿಮ್ ಕರ್ದಾಶಿಯನ್ಗೆ ಟ್ವಿಟರ್ನಲ್ಲಿ 69.7 ಮಿಲಿಯನ್ ಹಿಂಬಾಲಕರು ಮತ್ತು ಇನ್ಸ್ಟಾಗ್ರಾಮ್ನಲ್ಲಿ 213 ಮಿಲಿಯನ್ ಮಂದಿ ಹಿಂಬಾಲಕರಿದ್ದಾರೆ. 2018ರ ವೇಳೆ ಕೆಕೆಡಬ್ಲ್ಯೂ ಬ್ಯೂಟಿ ಕಂಪನಿ 100 ಮಿಲಿಯನ್ ಆದಾಯ ಗಳಿಸಿತ್ತು ಎಂದು ಫೋರ್ಬ್ಸ್ ಹೇಳಿದೆ. ಕಿಮ್ ಕರ್ದಾಶಿಯನ್ 2019ರಲ್ಲಿ ಸ್ಕಿಮ್ಸ್ ಎಂಬ ಹೊಸ ಪ್ರಾಜೆಕ್ಟ್‌ನ ಕೂಡ ಕೈಗೆತ್ತಿಕೊಂಡಿದ್ದರು. ಅದನ್ನೂ ಕೂಡ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.